ಮಂಗಳೂರು: ದುಬೈನಲ್ಲಿ ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಬುಧವಾರ ಮಂಗಳೂರಿಗೆ ಬರಬೇಕಾಗಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್‌ನ ದುಬೈ-ಮಂಗಳೂರು (ಐಎಕ್ಸ್ 814), ದುಬೈ-ಮಂಗಳೂರು(ಐಎಕ್ಸ್ 384), ಮಂಗಳೂರು-ದುಬೈ (ಐಎಕ್ಸ್ 813) ಮತ್ತು ಮಂಗಳೂರು-ದುಬೈ (ಐಎಕ್ಸ್ 383), ತಿರುಚಿರಾಪಳ್ಳಿ-ಮಂಗಳೂರು ವಿಮಾನ(ಐಎಕ್ಸ್ 1499) ಹಾರಾಟ ರದ್ದಾಗಿದೆ. ಜಿದ್ದಾ-ಮಂಗಳೂರು (ಐಎಕ್ಸ್ 796), ಮಂಗಳೂರು-ತಿರುಚಿರಾಪಳ್ಳಿ(ಐಎಕ್ಸ್ 1498) ಗುರುವಾರ ತಡವಾಗಿ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.