ವೆಲ್ಲೂರು(ತಮಿಳುನಾಡು): ದಲಿತರು ಉತ್ಸವದಲ್ಲಿ ಪಾಲ್ಗೊಂಡಿರುವುದರಿಂದ ಆಕ್ರೋಶಿತರಾದ ಪ್ರಬಲ ಜಾತಿಯ ಜನರು ದೇವಾಲಯವನ್ನೇ ಧ್ವಂಸಗೊಳಿಸಿರುವ ಘಟನೆ ವೆಲ್ಲೂರು ಜಿಲ್ಲೆಯ ಕೆ.ವಿ. ಕುಪ್ಪಂ ತಾಲೂಕಿನ ಗೆಮ್ಮನಕುಪ್ಪಂ ಗ್ರಾಮದಲ್ಲಿ ನಡೆದಿದೆ.
ಗೆಮ್ಮನಕುಪ್ಪಂ ಗ್ರಾಮದ ಸಮೀಪದಲ್ಲಿರುವ ಕಾಳಿಯಮ್ಮನ್ ದೇವಾಲಯದ ಆಡಿ ತಿಂಗಳ ಉತ್ಸವಗಳಲ್ಲಿ ಪರಿಶಿಷ್ಟ ಜಾತಿಯ ಜನರು ಪಾಲ್ಗೊಳ್ಳಬಾರದು ಎಂದು ಪ್ರಬಲ ಜಾತಿಯ ಜನರು ತೀರ್ಮಾನ ತೆಗೆದುಕೊಂಡಿದ್ದರು. ಆದರೆ, ಅದನ್ನು ಧಿಕ್ಕರಿಸಿ ದಲಿತರು ದೇವಾಲಯದ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ದೇವಾಲಯ ಧ್ವಂಸದ ಕುರಿತಂತೆ ಒಂದು ವಾರದ ಬಳಿಕ ದಲಿತರು ನೀಡಿದ ದೂರಿನ ಆಧಾರದಲ್ಲಿ ಕೆ.ವಿ. ಕುಪ್ಪಂ ಪೊಲೀಸರು ಪ್ರಬಲ ಜಾತಿಗೆ ಸೇರಿದ ವ್ಯಕ್ತಿಯೋರ್ವರ ವಿರುದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕಾನೂನು ಹಾಗೂ ಸುವ್ಯವಸ್ಥೆ ಸಭೆಯ ಸಂದರ್ಭ ಈ ವಿಷಯದ ಕುರಿತು ವಿಸ್ತ್ರತವಾಗಿ ಚರ್ಚಿಸಿದ ಬಳಿಕ ಆಗಸ್ಟ್ 14ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
'ನಮ್ಮ ಸಮುದಾಯ ಹಲವು ವರ್ಷಗಳಿಂದ ಕಾಳಿಯಮ್ಮನನ್ನು ಆರಾಧಿಸಿಕೊಂಡು ಬರುತ್ತಿತ್ತು. ಕಾಲಕ್ರಮೇಣ ಇತರ ಜಾತಿಗಳ ಜನರು ಈ ದೇವಾಲಯದಲ್ಲಿ ಆರಾಧನೆ ಯಲ್ಲಿ ತೊಡಗಿದ್ದರು. ಆದರೆ, ಇತ್ತೀಚೆಗೆ ಪ್ರಬಲ ಜಾತಿಗಳು ದಲಿತರನ್ನು ತಾರತಮ್ಯದಿಂದ ನೋಡುತ್ತಿದ್ದರು' ಎಂದು ದಲಿತ ಸಮುದಾಯದ ಎಸ್. ನವೀನ್ ಕುಮಾರ್ ಹೇಳಿದ್ದಾರೆ.
ತಮಿಳು ತಿಂಗಳು ಆಡಿಯ ಮೂರನೇ ಶುಕ್ರವಾರವಾದ ಆಗಸ್ಟ್ 2ರಂದು ನಡೆದ ಆಡಿ ತಿಂಗಳ ಉತ್ಸವಗಳಲ್ಲಿ ಪಾಲ್ಗೊಳ್ಳದಂತೆ ನಮಗೆ ಸೂಚಿಸಲಾಗಿತ್ತು ಎಂದು ನವೀನ್ ತಿಳಿಸಿದ್ದಾರೆ. ಪ್ರಬಲ ಜಾತಿಗಳು ದಲಿತರನ್ನು ಹೊರಗಿಡುವ ನಿರ್ಧಾರ ತೆಗೆದುಕೊಂಡ ಒ ಬಳಿಕ ದಲಿತ ಸಮುದಾಯದ ಸದಸ್ಯರು ಪೊಲೀಸ್ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೆ.ವಿ. ಕುಪ್ಪಂ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದರು. ನಂತರ ಆಗಸ್ಟ್ 2ರಂದು ದಲಿತರು ಪ್ರಬಲ ಜಾತಿಗಳ ನಿರ್ಧಾರವನ್ನು ಧಿಕ್ಕರಿಸಿ ಕಾಳಿಯಮ್ಮನ್ ದೇವಾಲಯದಲ್ಲಿ ಪೊಂಗಲ್ ಅಡುಗೆ ಮಾಡಲು ಹಾಗೂ ಉತ್ಸವಗಳಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಬಲ ಜಾತಿಯ ಜನರು ದೇವಾಲಯವನ್ನು ಬುಲೈಜರ್ ಬಳಿಸಿ ಧ್ವಂಸಗೊಳಿಸಿದ್ದಾರೆ ಹಾಗೂ ಮೂರ್ತಿಯನ್ನು ಕೊಂಡೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.