ಭಟ್ಕಳ, ನವೆಂಬರ್ 1:ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಘನತ್ಯಾಜ್ಯ ವಸ್ತು ನಿರ್ವಹಣೆ ಸಂಬಂಧ ಅರಿವು ಮೂಡಿಸುವ ನಿಟ್ಟಿನಲ್ಲಿ ನೌನಿಹಾಲ್ ಸ್ಕೂಲ್ ಭಟ್ಕಳದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಂಜುಮನ್ ಕಾಲೇಜು ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಚಿತ್ರಕಲಾ ಸ್ಪರ್ಧೆ (ಪ್ರಾಥಮಿಕ ಶಾಲೆಗಳಿಗಾಗಿ): ಸೋನಾರಕೇರಿ ಮಾದರಿ ಶಾಲೆಯ ಶ್ವೇತಾ ಮಂಜುನಾಥ ನಾಯ್ಕ ಪ್ರಥಮ, ಮಾದರಿ ಹೆಣ್ಣು ಮಕ್ಕಳ ಶಾಲೆಯ ಸುಷ್ಮಾ ಶಿವಾನಂದ ಹರಿಕಂತ್ರ ದ್ವಿತೀಯ, ಆನಂದಾಶ್ರಮ ಕಾನ್ವೆಂಟಿನ ವಿದ್ಯಾರ್ಥಿ ಪುನೀತ ಡಿ.ನಾಯ್ಕ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.
ಪ್ರಬಂಧ ಸ್ಪರ್ಧೆ (ಪ್ರೌಢ ಶಾಲೆಗಳಿಗಾಗಿ): ನ್ಯೂ ಇಂಗ್ಲೀಷ್ ಶಾಲೆಯ ಹರೀಶ ಮಾರುತಿ ಪೈ ಪ್ರಥಮ, ನೌನಿಹಾಲ್ ಸೆಂಟ್ರಲ್ ಗರ್ಲ್ಸ ಹೈಸ್ಕೂಲಿನ ಅಫ್ರಾ ಶಾಮುವೆಲ್ ಸೈಯದ್ ಮುಜಾಫರ್ ದ್ವಿತೀಯ, ಆನಂದಾಶ್ರಮ ಕಾನ್ವೆಂಟಿನ ಎಸ್.ಎಮ್.ಸಲೀಮ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಭಾಷಣ ಸ್ಪರ್ಧೆ (ಕಾಲೇಜು ವಿದ್ಯಾರ್ಥಿಗಳಿಗಾಗಿ): ಸೌಖ್ಯ ಡಿ.ಎಡ್.ಕಾಲೇಜಿನ ವಿದ್ಯಾ ಶೆಟ್ಟಿ ಪ್ರಥಮ, ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಅಶ್ವಿನಿ ರಾ.ಹೆಗಡೆ ದ್ವಿತೀಯ, ಗುರುಸುಧೀಂದ್ರ ಮಹಾ ವಿದ್ಯಾಲಯದ ಅಕ್ಷತಾ ಮುರುಡೇಶ್ವರ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.