ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕೇಜ್ರವಾಲ್‌ಗೆ ಜಾಮೀನು; ಬಂಧನದ ಕಾನೂನುಬದ್ಧತೆ ಬಗ್ಗೆ ನ್ಯಾಯಾಧೀಶರಲ್ಲಿ ಭಿನ್ನಾಭಿಪ್ರಾಯ

ಕೇಜ್ರವಾಲ್‌ಗೆ ಜಾಮೀನು; ಬಂಧನದ ಕಾನೂನುಬದ್ಧತೆ ಬಗ್ಗೆ ನ್ಯಾಯಾಧೀಶರಲ್ಲಿ ಭಿನ್ನಾಭಿಪ್ರಾಯ

Sat, 14 Sep 2024 14:34:31  Office Staff   Vb

ಹೊಸದಿಲ್ಲಿ: ಅಭಿವೃದ್ಧಿ ಹೊಂದಿದ ಸಮಾಜಕ್ಕಾಗಿ ಸುಧಾರಿತ ನ್ಯಾಯವ್ಯವಸ್ಥೆಯೊಂದು ಯೊಂದು ಬೇಕು, ವಿಚಾರಣೆ ನಡೆಯುತ್ತಿರುವಾಗ ಆರೋಪಿಗಳನ್ನು ಸುದೀರ್ಘಾವಧಿಗೆ ಜೈಲಿನಲ್ಲಿ ಇರಿಸುವುದು ಸಮರ್ಥನೀಯವಲ್ಲ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟರು.

ಆದರೆ, ಇಬ್ಬರೂ ನ್ಯಾಯಾಧೀಶರು ಸರ್ವಾನುಮತದಿಂದ ಜಾಮೀನು ನೀಡಿದರೂ, ಕೇಜ್ರವಾಲ್‌ರನ್ನು ಸಿಬಿಐ ಬಂಧಿಸಿರುವುದು ಕಾನೂನುಬದ್ದವೇ ಎಂಬ ವಿಚಾರದಲ್ಲಿ ನ್ಯಾಯಾಧೀಶರು ಭಿನ್ನ ತೀರ್ಪುಗಳನ್ನು ನೀಡಿದರು.

ಸಿಬಿಐಯು ಕೇಜ್ರವಾಲ್‌ರನ್ನು ಬಂಧಿಸಿರುವುದು ಕಾನೂನುಬದ್ಧವೇ ಎಂಬ ವಿಷಯದ ಬಗ್ಗೆ, ಬಂಧನವು ಕಾನೂನುಬದ್ಧವಾಗಿದೆ ಮತ್ತು ಸಾಂದರ್ಭಿಕ ಕಾನೂನುಗಳಿಗೆ ಅನುಗುಣವಾಗಿದೆ ಎಂದು ನ್ಯಾ. ಸೂರ್ಯಕಾಂತ್ ಹೇಳಿದರು.

ಇನ್ನೊಂದು ಪ್ರಕರಣದಲ್ಲಿ ಈಗಾಗಲೇ ಕಸ್ಟಡಿಯಲ್ಲಿರುವ ವ್ಯಕ್ತಿಯನ್ನು ತನಿಖೆಯ ಉದ್ದೇಶಕ್ಕಾಗಿ ಬಂಧಿಸುವುದರಲ್ಲಿ ತಪ್ಪಿಲ್ಲ. ಬಂಧನವು ಯಾಕೆ ಅಗತ್ಯವಾಯಿತು ಎನ್ನುವುದನ್ನು ಸಿಬಿಐ ತನ್ನ ಅರ್ಜಿಯಲ್ಲಿ ತಿಳಿಸಿದೆ. ಇಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ 41(ಎ) (3) ವಿಧಿಯ ಉಲ್ಲಂಘನೆಯಾಗಿಲ್ಲ' ಎಂದು ಅವರು ಅಭಿಪ್ರಾಯಪಟ್ಟರು.

ಆದರೆ, ಇದಕ್ಕೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾ, ಭುಯಾನ್, ಬಂಧನ ಅಗತ್ಯವಾಗಿರಲಿಲ್ಲ ಮತ್ತು ಕಿರುಕುಳ ಕೊಡುವ ಉದ್ದೇಶಕ್ಕಾಗಿ ಬಂಧನದ ಅಧಿಕಾರವನ್ನು ದುರುಪಯೋಗಪಡಿಸಬಾರದು ಎಂದು ಹೇಳಿದ್ದಾರೆ.


Share: