ಕಾರವಾರ:-ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಏಪ್ರಿಲ್ 28 ರ ಬೆಳಗ್ಗೆ 9 ರಿಂದ ಏಪ್ರಿಲ್ 29 ರ ಬೆಳಗ್ಗೆ 9 ರ ವರೆಗಿನ ಅವಧಿಯಲ್ಲಿ, ಅಬಕಾರಿ ಇಲಾಖೆ ವತಿಯಿಂದ 44.31 ಲೀ ಮದ್ಯ (ಮೌಲ್ಯ ರೂ.20,717) ವಶಪಡಿಸಿಕೊಂಡಿದ್ದು , ಇದುವರೆಗೆ ಅಬಕಾರಿ ಇಲಾಖೆ ವತಿಯಿಂದ ಒಟ್ಟು 1016 ಮತ್ತು ಪೊಲೀಸ್ ಇಲಾಖೆಯಿಂದ 57 ಎಫ್.ಐ.ಆರ್. ದಾಖಲಿಸಲಾಗಿದೆ. ಸೂಕ್ತ ದಾಖಲೆಗಳಿಲ್ಲದೇ ವಶಪಡಿಸಿಕೊಂಡಿದ್ದ ರೂ.35,60,300 ರಲ್ಲಿ 30,11,200 ರೂ ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.