ಕಾರವಾರ: ದೇಶದ ಸ್ವಾತಂತ್ರ‍್ಯಕ್ಕಾಗಿ ಇಡೀ ದೇಶ ಸುತ್ತಾಡಿ ಬಡ ಜನರ ಮೂಲ ಸಮಸ್ಯೆಗಳ ನಿವಾರಣೆಗಾಗಿ ಗ್ರಾಮೀಣಾಭಿವೃದ್ಧಿ ಆಲೋಚನೆಗಳಿಂದ ಗ್ರಾಮ ಸ್ವರಾಜ್ಯದ ಕನಸು ಕಂಡ ರಾಷ್ಟçಪಿತ ಮಾಹಾತ್ಮ ಗಾಂಧೀಜಿ ರವರ ತತ್ವಾದರ್ಶ, ಹಾಗೂ ದೇಶದ ಪ್ರಧಾನಿಯಾದರೂ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಸಾರ್ವಜನಿಕ ಜೀವನದಲ್ಲಿ ಅತ್ಯಂತ ನಿಷ್ಠೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ದಿವಂಗತ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ರವರ ನಿಷ್ಠೆ ಪ್ರಾಮಾಣಿಕತೆ ಮನೋಭಾವವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ರವರು ಅಭಿಪ್ರಾಪಟ್ಟರು.
ಅವರು ಬುಧವಾರ ಜಿಲ್ಲಾ ಪಂಚಾಯತ್‌ನ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ದೇಶದ ಏಕತೆ, ಸಮಗ್ರತೆ ಹಾಗೂ ಸ್ವಾತಂತ್ರ‍್ಯಕ್ಕಾಗಿ ಹಲವಾರು ಮಹಾನ್ ವ್ಯಕ್ತಿಗಳು ಶ್ರಮಿಸಿ ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹ ಮಹನೀಯರ ಸಾಲಿನಲ್ಲಿ ಮಹಾತ್ಮ ಗಾಂಧಿ ಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ರವರು ಅಗ್ರಗಣ್ಯರಾಗಿದ್ದಾರೆ. ನಾವು, ನೀವೆಲ್ಲರೂ ಮಹಾತ್ಮ ಗಾಂಧೀಜಿ ರವರ ಕನಸಿನ ಕೂಸಾದ ಗ್ರಾಮ ಸ್ವರಾಜ್ಯ ತತ್ವದಡಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾವೆಲ್ಲರೂ ಶೈಕ್ಷಣಿಕವಾಗಿ ಯಾವುದೇ ಪದವಿ ಪಡೆದಿದ್ದರೂ ದೇಶಕ್ಕಾಗಿ ಶ್ರಮಿಸಿದ ಪ್ರತಿಯೋಬ್ಬ ಮಹಾನ್ ವ್ಯಕ್ತಿಗಳ ಕುರಿತು ಅಲ್ಪಸ್ವಲ್ಪನಾದರೂ ಅರಿತುಕೊಂಡಿರಬೇಕು. ಇದರಿಂದ ವೃತ್ತಿ ಜೀವನದಲ್ಲಿ ಎದುರಾಗಬಹುದಾದ ಜನಸಾಮಾನ್ಯರ ಸಂಕಷ್ಟಗಳ ನಿವಾರಣೆಗೆ ಸಹಕಾರಿಯಾಗಲಿದೆ. ಜೊತೆಗೆ ನಮ್ಮ ದಿನ ನಿತ್ಯ ಸ್ವಭಾವ ಮತ್ತು ಸಂಸ್ಕಾರದಲ್ಲಿ ಸ್ವಚ್ಛ ಪರಿಸರ, ಸಮಾಜ ನಿರ್ಮಾಣದ ಆಲೋಚನೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದರು.
ಇದೇ ವೇಳೆ ಸ್ವಚ್ಛತಾ ಹೀ ಸೇವಾ-2024ರ ಪಾಕ್ಷಿಕದ ಅಂಗವಾಗಿ ಸ್ವಭಾವ ಸ್ವಚ್ಛತೆ-ಸಂಸ್ಕಾರ ಸ್ವಚ್ಛತೆ ಧ್ಯೆಯವಾಕ್ಯದಡಿ ಸ್ವಚ್ಛತೆಯ ಕುರಿತ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರು ಮುಖ್ಯ ಯೋಜನಾಧಿಕಾರಿ ವಿನೋದ್ ಅಣ್ವೇಕರ್, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ , ಯೋಜನಾ ನಿರ್ದೇಶಕರು(ಡಿಆರ್‌ಡಿಎ), ಎನ್‌ಐಸಿ ವಿಭಾಗದ ಅಧಿಕಾರಿಗಳು, ಆರ್‌ಡಬ್ಲ್ಯೂಎಸ್‌ನ ಎಇಇ, ಸಹ ಕಾರ್ಯದರ್ಶಿಗಳು, ವ್ಯವಸ್ಥಾಪಕರುಗಳು, ಆಪ್ತ ಸಹಾಯಕರು, ವಿಷಯ ನಿರ್ವಾಹಕರುಗಳು, ನರೇಗಾ, ಎಸ್‌ಬಿಎಂ, ಜೆಜೆಎಂ, ಎನ್‌ಆರ್‌ಎಲ್‌ಎಂ ಸೇರಿದಂತೆ ವಿವಿಧ ಯೋಜನೆಗಳಡಿ ಕಾರ್ಯನಿರ್ವಹಿಸುವ ಸಮಾಲೋಚಕರು, ಸಂಯೋಜಕರು, ಡಿಇಒ ಗಳು ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.