ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಡಿಪ್ಲೋಮಾ ಪ್ರವೇಶ; ಅವಧಿ ವಿಸ್ತರಣೆ

ಕಾರವಾರ: ಡಿಪ್ಲೋಮಾ ಪ್ರವೇಶ; ಅವಧಿ ವಿಸ್ತರಣೆ

Sun, 16 Jun 2024 05:37:00  Office Staff   S O News

ಕಾರವಾರ: ಪ್ರಸಕ್ತ ಶೈಕ್ಷಣಿಕ ಸಾಲಿನ ಸರ್ಕಾರಿ ಪಾಲಿಟೆಕ್ನಿಕ್, ಸಾಲಗಾಂವ, ಮುಂಡಗೋಡ ಸಂಸ್ಥೆಯಲ್ಲಿ ಸಿವಿಲ್, ಮೆಕ್ಯಾನಿಕಲ್, ಇ&ಸಿ ಹಾಗೂ ಕಂಪ್ಯೂಟರ್ ಸೈನ್ಸ್. ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಪ್ರಾಂಶುಪಾಲರ ಹಂತದಲ್ಲಿ “ಆಫ್-ಲೈನ್” ಮೂಲಕ ಮೆರಿಟ್ ಹಾಗೂ ರೋಷ್ಠರ್ ಆಧಾರದ ಮೇರೆಗೆ ಎಸ್. ಎಸ್. ಎಲ್.ಸಿ. ಹಾಗೂ ತತ್ಸಮಾನ ಪರೀಕ್ಷೆಯಲ್ಲಿ ಪಾಸಾದ ಅರ್ಹ ಅಭ್ಯರ್ಥಿಗಳಿಂದ ಇನ್ನೂ ಉಳಿದಿರುವ ಕೆಲವೇ ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಸಂಸ್ಥೆಯಲ್ಲಿಯೆ ಪಡೆದು ಸಂಪೂರ್ಣ ಭರ್ತಿ ಮಾಡಿ ಅವಶ್ಯವಿರುವ ಎಲ್ಲ ಮೂಲ ದಾಖಲಾತಿಗಳೊಂದಿಗೆ ಖುದ್ದಾಗಿ ಸಂಸ್ಥೆಗೆ ಜೂನ್ 29ರ ಸಂಜೆ 5.30 ಗಂಟೆಯೊಳಗೆ ಬಂದು ಅರ್ಜಿಯನ್ನು ಸಲ್ಲಿಸಿ, ಲಭ್ಯವಿರುವ ಸೀಟುಗಳಿಗೆ “ಆಫ್-ಲೈನ್” ಮೂಲಕ ಮೆರಿಟ್ ಹಾಗೂ ರೋಷ್ಠರ್ ಆಧಾರದ ಮೇರೆಗೆ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ:-08301-222304/295304, ಪ್ರಾಚಾರ್ಯರು: 9964515482 ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆ ತಿಳಿಸಿದೆ.
 


Share: