ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಇಂದು ಮೊದಲ ಹಂತದ ಚುನಾವಣೆ; ದೇಶಾದ್ಯಂತ 102 ಕ್ಷೇತ್ರಗಳಿಗೆ ಮತದಾನ

ಇಂದು ಮೊದಲ ಹಂತದ ಚುನಾವಣೆ; ದೇಶಾದ್ಯಂತ 102 ಕ್ಷೇತ್ರಗಳಿಗೆ ಮತದಾನ

Fri, 19 Apr 2024 12:35:31  Office Staff   Vb

 ಹೊಸದಿಲ್ಲಿ: ಪ್ರಜಾಪ್ರಭುತ್ವದ ಹಬ್ಬಕ್ಕೆ ಭಾರತ ಸಜ್ಜಾಗಿದ್ದು ಮೊದಲ ಹಂತದ ಲೋಕಸಭಾ ಚುನಾವಣೆ ಶುಕ್ರವಾರ ನಡೆಯಲಿದೆ. 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಒಟ್ಟು 102 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಪೈಕಿ ತಮಿಳುನಾಡು (39), ಉತ್ತರಾಖಂಡ (5), ಅರುಣಾಚಲಪ್ರದೇಶ ( 2), ಮೇಘಾಲಯ (2, ) ಅಂಡಮಾನ್ -ನಿಕೋಬಾರ್ ದ್ವೀಪ (1), ಮಿಜೋರಾಂ(1), ನಾಗಾಲ್ಯಾಂಡ್ (1), ಪಡುಚೇರಿ (1), ಸಿಕ್ಕಿಂ (1), ಲಕ್ಷದ್ವೀಪ (1)ದ ಎಲ್ಲಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ಪೂರ್ಣಗೊಳ್ಳಲಿದೆ.

ಇದರ ಜೊತೆಗೆ ಅರುಣಾಚಲಪ್ರದೇಶ ಹಾಗೂ ಸಿಕ್ಕಿಂನ ವಿಧಾನಸಭೆಗಳಿಗೂ ಶುಕ್ರವಾರ ಚುನಾವಣೆ ನಡೆಯಲಿದೆ. ಲೋಕಸಭಾ ಚುನಾವಣೆ ನಡೆಯಲಿರುವ 102 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗಳಿಗೆ ಹಾಗೂ 11 ಕ್ಷೇತ್ರಗಳನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ.

102 ಕ್ಷೇತ್ರಗಳಲ್ಲಿ ಒಟ್ಟು 1,625 ಮಂದಿ ಕಣದಲ್ಲಿದ್ದಾರೆ. ಈ ಪೈಕಿ ತಮಿಳುನಾಡು ರಾಜ್ಯವೊಂದರಲ್ಲೇ 950 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಎಸ್‌ಪಿ 86, ಬಿಜೆಪಿ 77 ಹಾಗೂ ಕಾಂಗ್ರೆಸ್ 56 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಕಿರಣ್ ರಿಜಿಜು, ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ, ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಅಣ್ಣಾಮಲೈ, ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ, ಚುನಾವಣಾ ರಾಜಕೀಯಕ್ಕೆ ಮರಳಿರುವ ಬಿಜೆಪಿ ನಾಯಕಿ ತಮಿಳು ಇಷ್ಟೆ ಸುಂದರರಾಜನ್ ಚುನಾವಣಾ ಕಣದಲ್ಲಿರುವ ಪ್ರಮುಖರು. ಶಾಂತಿ, ಸುವ್ಯವಸ್ಥೆಗಾಗಿ ವ್ಯಾಪಕ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದ್ದು, ಭಾರೀ ಸಂಖ್ಯೆಯಲ್ಲಿ ಪೊಲೀಸರು, ಅರೆಸೈನಿಕ ಪಡೆಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.


Share: