ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಂಜುಮನ್ ಪದವಿ ಪೂರ್ವ ಕಾಲೇಜ್; ಶೇ.97.42 ಫಲಿತಾಂಶ

ಅಂಜುಮನ್ ಪದವಿ ಪೂರ್ವ ಕಾಲೇಜ್; ಶೇ.97.42 ಫಲಿತಾಂಶ

Thu, 11 Apr 2024 01:52:40  Office Staff   SOnews

ಭಟ್ಕಳ: ಇಲ್ಲಿನ ಅಂಜುಮನಾಬಾದ್ ನಲ್ಲಿರುವ ಅಂಜುಮನ್ ಬಾಲಕರ ಪದವಿ ಪೂರ್ವ ಕಾಲೇಜ್ 2023-24ನೆ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಶೇ. ಶೇ.97.42 ಫಲಿತಾಂಶ ದಾಖಲಿಸಿದೆ.

ಕಲಾ, ವಾಣೀಜ್ಯ ಮತ್ತು ವಿಜ್ಞಾನ ವಿಭಾಗದ ಒಟ್ಟು 233 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 152 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 23 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಇಬ್ಬರು ತೃತೀಯ ದರ್ಜೆಯಲ್ಲಿ ಒಟ್ಟು 227 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜ್ಞಾನ ವಿಭಾಗದಲ್ಲಿ ಸೈಯ್ಯದ್ ಮುಅವಿಝ್ ಬರ್ಮಾವರ್ 569 (95%), ವಾಣಿಜ್ಯ ವಿಭಾಗದಲ್ಲಿ ಅಬ್ದುಲ್ ಹನ್ನಾನ್ ಅಸ್ಕರಿ 672 (95.33%), ಕಲಾ ವಿಭಾಗದಲ್ಲಿ ತೌಫೀಖ್ ಹುಸೇನ್ 448(75%) ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ.

 


Share: