ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / Breaking News: ರಾಜಸ್ಥಾನದಲ್ಲಿ ಭೀಕರ ಅಪಘಾತ; 8ಮಕ್ಕಳು ಸೇರಿದಂತೆ 12 ಮಂದಿ ಸಾವು

Breaking News: ರಾಜಸ್ಥಾನದಲ್ಲಿ ಭೀಕರ ಅಪಘಾತ; 8ಮಕ್ಕಳು ಸೇರಿದಂತೆ 12 ಮಂದಿ ಸಾವು

Sun, 20 Oct 2024 22:30:47  Office Staff   SOnews

ಜೈಪುರ: ರಾಜಸ್ಥಾನದ ಧೋಲ್ಪುರ ಜಿಲ್ಲೆಯಲ್ಲಿ ಬಸ್-ಟೆಂಪೋ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಮಕ್ಕಳು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ.  

ಮೃತರನ್ನು ಇರ್ಫಾನ್ (38), ಪತ್ನಿ ಜೂಲಿ (34), ಪುತ್ರಿ ಅಸ್ಮಾ (14), ಪುತ್ರ ಸಲ್ಮಾನ್(8), ಪರ್ವೀನ್ (32), ಝರೀನಾ (35), ಸಾಕಿರ್ (6), ಸನೀಫ್ (9), ಅಝಾನ್ (5), ಆಶಿಯಾನಾ (10), ಸೂಫಿ (7) ಮತ್ತು ದಾನಿಶ್ (10) ಎಂದು ಗುರುತಿಸಲಾಗಿದೆ.  ಗ್ವಾಲಿಯರ್ನಿಂದ ಜೈಪುರಕ್ಕೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್ ಸುಮಿಪುರ್ ಬಳಿ ಟೆಂಪೋಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 8 ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ ಎಂದು ಜೈಪುರದ ಬಾರಿ ಪೊಲೀಸ್ ಠಾಣೆಯ ಎಸ್ಎಚ್ಒ ಶಿವಲಹರಿ ಮೀನಾ ತಿಳಿಸಿದ್ದಾರೆ.


Share: