ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಾವಿಷ್ಕಾರ್ ಫೆಸ್ಟ್; ಅಂಜುಮನ್ ವಿದ್ಯಾರ್ಥಿಗಳು ಚಾಂಪಿಯನ್

ಸಾವಿಷ್ಕಾರ್ ಫೆಸ್ಟ್; ಅಂಜುಮನ್ ವಿದ್ಯಾರ್ಥಿಗಳು ಚಾಂಪಿಯನ್

Mon, 06 May 2024 23:13:02  Office Staff   SOnews

ಭಟ್ಕಳ: ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಾದ ಮೊಹಮ್ಮದ್ ಇಸ್ಮಾಯಿಲ್ (4ನೇ ವರ್ಷದ ಮೆಕ್ಯಾನಿಕಲ್), ಜುರೈಫ್ ಅಹ್ಮದ್ ಮತ್ತು ಮೊಹಮ್ಮದ್ ಮೀರಾನ್ ಮೊಹ್ತಿಶಾಮ್ (2ನೇ ವರ್ಷದ ಎಲೆಕ್ಟ್ರಾನಿಕ್ಸ್) , ಎಂಐಟಿ ಕುಂದಾಪುರದಲ್ಲಿ ನಡೆದ ಸಾವಿಷ್ಕಾರ್ ಫೆಸ್ಟ್‌ನಲ್ಲಿ ಭಾಗವಹಿಸಿ ಚಾಂಪಿಯನ್‌ಶಿಪ್‌ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಫೆಸ್ಟ್ ನ  3 ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದು ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ ಎಂದು  ಎಐಟಿಎಂ ಪ್ರಾಂಶುಪಾಲ ಡಾ.ಫಜಲುರ್ ರೆಹಮಾನ್ ಕೆ, ರಿಜಿಸ್ಟ್ರಾರ್ ಪ್ರೊ.ಜಾಹಿದ್ ಖರೂರಿ, ಮಾಧ್ಯಮ ಸಂಯೋಜಕ ಪ್ರೊ.ಸುಬ್ರಹ್ಮಣ್ಯ ಗಜಾನನ ಭಾಗವತ್ ಮತ್ತಿತರರು ಈ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು


Share: