ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಮನಗರ ಪೊಲೀಸ್ ಠಾಣೆಯ ಎದುರು ಆತ್ಮಹತ್ಯೆಗೆ ಯತ್ನಿಸಿದ ಯುವಕ.

ರಾಮನಗರ ಪೊಲೀಸ್ ಠಾಣೆಯ ಎದುರು ಆತ್ಮಹತ್ಯೆಗೆ ಯತ್ನಿಸಿದ ಯುವಕ.

Fri, 14 Jun 2024 20:00:59  Office Staff   SO News

ಜೋಯಿಡಾ : ತಾಲೂಕಿನ ರಾಮನಗರ ಪೊಲೀಸ್ ಠಾಣೆಯ ಎದುರು   ಯುವಕನ  ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ  ಗುರುವಾರ ಸಂಜೆ ನಡೆದಿದೆ. ಭಾಸ್ಕರ್ ಬೋಂಡೆಲ್ಕರ್ ಎಂಬಾತನೆ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ.

ರಾಮನಗರ ಪಿಎಸ್ಐ ಅವರಿಂದ ಆಗಿರುವ ದೌರ್ಜನ್ಯದ ಬಗ್ಗೆ ವಿಡಿಯೋ ಮಾಡಿದ್ದಾನೆ. . ಕಳೆದ ಕೆಲ ತಿಂಗಳ ಹಿಂದೆ ಜೂಜಾಟದ ಪ್ರಕರಣದಲ್ಲಿ 3,60,000 ವಶಪಡಿಸಿಕೊಂಡು ಕೇವಲ 36,000 ರೂ ಮಾತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಎಪ್.ಐ.ಆರ್ ನಲ್ಲಿ ದಾಖಲಿಸಿರುವುದನ್ನು ಈತ ಪ್ರಶ್ನಿಸಿದ್ದ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ.  ಪಿಎಸ್ಐ ಮೇಲಿಂದ ಮೇಲೆ ವಿನಾಕಾರಣ  ಮಾನಸಿಕ ದೌರ್ಜನ್ಯವನ್ನು ನೀಡುತ್ತಿದ್ದರು ಎಂದು ಭಾಸ್ಕರ್ ಹೇಳಿದ್ದಾನೆ. ಇದರಿಂದಾಗಿ ತಾನು ದಾಂಡೇಲಿಯ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದೇನೆ. 

ಎರಡು ಮೂರು ದಿನಗಳ ಹಿಂದೆ ರಾಮನಗರಕ್ಕೆ ಹೋಗಿದ್ದ ಸಂದರ್ಭದಲ್ಲಿ ತನ್ನ ಮೇಲೆ ಮತ್ತೆ ಮಾನಸಿಕ ದೌರ್ಜನ್ಯ ಕಿರುಕುಳ ನಡೆದಿದೆ ಎಂದಿದ್ದಾನೆ. ಹಾಗಾಗಿ ಇದನ್ನು ತಡೆಯಲಾರದೆ ಗುರುವಾರ ಸಂಜೆ ರಾಮನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ಭಾಸ್ಕರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೇನೆಂದು ಹೇಳಿದ್ದಾನೆ.


Share: