ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮತ್ಸ್ಯಕ್ಷಾಮ; ಅರಬ್ಬಿ ಸಮುದ್ರಕ್ಕೆ ಬಾಗಿನ ಅರ್ಪಿಸಿದ ಮಿನುಗಾರಿಕಾ ಸಚಿವ ಮಂಕಾಳ್ ವೈದ್ಯ

ಮತ್ಸ್ಯಕ್ಷಾಮ; ಅರಬ್ಬಿ ಸಮುದ್ರಕ್ಕೆ ಬಾಗಿನ ಅರ್ಪಿಸಿದ ಮಿನುಗಾರಿಕಾ ಸಚಿವ ಮಂಕಾಳ್ ವೈದ್ಯ

Mon, 09 Sep 2024 01:51:43  Office Staff   SOnews

 

ಭಟ್ಕಳ: ಮತ್ಸ್ಯಕ್ಷಾಮ ತಲೆದೂರಿದ ಹಿನ್ನೆಯಲ್ಲಿ ರಾಜ್ಯದ ಮೀನುಗಾರಿಕೆ ಮತ್ತು ಬಂದರು ಇಲಾಖೆ ಸಚಿವ ಅರಬ್ಬಿ ಸಮುದ್ರಕ್ಕೆ ತೆರಳಿ ಬಾಗಿನ ಅರ್ಪಿಸಿದರು.

ಕರಾವಳಿಯ ಉತ್ತರ ಕನ್ನಡ, ಉಡುಪಿ, ಮಂಗಳೂರು ಭಾಗದ ಮೀನುಗಾರರು  ತೀವ್ರ ಮತ್ತ್ವಕ್ಷಾಮ ಅನುಭವಿಸುತ್ತಿದ್ದು ನಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ಮೀನುಗಾರರ ಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಿ  ಮೀನುಗಾರಿಕಾ ಉದ್ಯಮ ಉನ್ನತ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿಕೊಂಡರು. ಬಳಿಕ ಅಳ್ವೆಕೋಡಿ ಬಂದರ್ ಮೂಲಕ ಸ್ವತಃ ತಾವೇ ಸಮುದ್ರಕ್ಕಿಳಿದು ಬೋಟ್ ಚಲಾಯಿಸಿಕೊಂಡು ಹೋಗಿ ಬಾಗಿನ ಅರ್ಪಿಸಿದರು.

ಸಂದರ್ಭದಲ್ಲಿ ಮೀನುಗಾರ ಮುಖಂಡರು, ಮೀನುಗಾರರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು


Share: