ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ರಿಕ್ರಿಯೇಶನ್‌ ಕ್ಲಬ್ ಮೇಲೆ ದಾಳಿ; 8 ಜ‌ನರ ಮೇಲೆ ಪ್ರಕರಣ ದಾಖಲು

ಭಟ್ಕಳ: ರಿಕ್ರಿಯೇಶನ್‌ ಕ್ಲಬ್ ಮೇಲೆ ದಾಳಿ; 8 ಜ‌ನರ ಮೇಲೆ ಪ್ರಕರಣ ದಾಖಲು

Sat, 28 Sep 2024 18:54:20  Office Staff   S O News

ಭಟ್ಕಳ: ತಾಲೂಕಿನ ರಿಕ್ರಿಯೇಶನ್‌ ಕ್ಲಬ್  ಮೇಲೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರ ಕೈಗೆ 8 ಜನರು ಸಿಕ್ಕಿಬಿದ್ದಿದ್ದಾರೆ.

ಕ್ಲಬ್‌ನ ಒಳಗಡೆ ಕೌಂಟರ್‌ನಲ್ಲಿ ಹಣ ಕೊಟ್ಟು, ಹಣದ ಬದಲು ಟೋಕನ್‌ಗಳನ್ನು ಪಡೆದು ಇಸ್ಪೀಟ್ ಆಡುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಪೊಲೀಸ್‌ ಇನ್ಸ್‌ಪೆಕ್ಟ‌ರ್ ಚಂದನ ಗೋಪಾಲ ವಿ. ನೇತೃತ್ವದಲ್ಲಿ ದಾಳಿ ನಡೆದಿತ್ತು. ಸ್ಥಳದಲ್ಲಿ ೨೮೧೬ ರೂ. ನಗದು ಮತ್ತು ಒಂದು ಡಿವಿಆ‌ರ್ ವಶಕ್ಕೆ ಪಡೆಯಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.


Share: