ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಪಿಕಪ್ ವಾಹನದಲ್ಲಿ ಎರಡು ಕೋಣ ಸಾಗಾಟ; ಇಬ್ಬರ ಬಂಧನ

ಭಟ್ಕಳ: ಪಿಕಪ್ ವಾಹನದಲ್ಲಿ ಎರಡು ಕೋಣ ಸಾಗಾಟ; ಇಬ್ಬರ ಬಂಧನ

Sun, 16 Jun 2024 05:43:06  Office Staff   S O News

ಭಟ್ಕಳ: ಮಹೇಂದ್ರ ಬೊಲೆರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ವದೆ ಮಾಡುವ ಉದ್ದೇಶದಿಂದ ಎರಡು ಕೋಣಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಗಣೇಶ ನಗರ ಪುರವರ್ಗ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನ ತಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ರಾಮ ಭಡ್ಕಾ ನಾಯ್ಕ ಹಡಿಲ್ ಸಬ್ಬತ್ತಿ ಜೋಳದ ಮೂಲೆ ನಿವಾಸಿ ಹಾಗೂ ರಾಮಚಂದ್ರ ಸುಬ್ಬ ನಾಯ್ಕ ಬೆಳೆಕೆ ಕಾನಮದ್ಲು ನಿವಾಸಿ ಎಂದು ತಿಳಿದು ಬಂದಿದೆ.

ಇವರು ವದೆ ಮಾಡುವ ಉದ್ದೇಶದಿಂದ ಶನಿವಾರ ಬೆಳಗಿನ ಜಾವ 04-30 ಕ್ಕೆ ಬೈಂದೂರಿನಿಂದ ಭಟ್ಕಳ ಕಡೆಗೆ 50,000 ಮೌಲ್ಯದ 02 ಕೊಣಗಳನ್ನು ಯಾವುದೇ ಪಾಸ್  ಪರವಾನಿಗೆ ಇಲ್ಲದೇ ಮಹೀಂದ್ರಾ ಬೊಲೆರೋ ಪಿಕಪ್ ವಾಹನದಲ್ಲಿ ಸಾಗಾಟ ಮಾಡಿ ಕೊಂಡು ಹೋಗುತ್ತಿರುವಾಗ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ-66 ರಸ್ತೆ ಗಣೇಶ ನಗರ ಪುರವರ್ಗ ಚೆಕ್ ಪೊಸ್ಟ್ ನಲಿ ನಗರ ಠಾಣೆಯ ಪಿ.ಎಸ್.ಐ  ಶಿವಾನಂದ ನಾವದಗಿ ಪಿಎಸ್‌ಐ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: