ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆಳೆ ಹಾನಿ ಪರಿಹಾರ ದೊರೆಯದ ರೈತರು ತಕ್ಷಣ ಸಂಪರ್ಕಿಸಿ ; ಜಿಲ್ಲಾಧಿಕಾರಿ

ಬೆಳೆ ಹಾನಿ ಪರಿಹಾರ ದೊರೆಯದ ರೈತರು ತಕ್ಷಣ ಸಂಪರ್ಕಿಸಿ ; ಜಿಲ್ಲಾಧಿಕಾರಿ

Tue, 14 May 2024 01:52:55  Office Staff   SOnews

ಕಾರವಾರ: ಜಿಲ್ಲೆಯಲ್ಲಿ ಬೆಳೆ ಹಾನಿ ಕುರಿತು ಪರಿಹಾರದ ಅನುದಾನವು ಹಲವು ರೈತರ ಖಾತೆಗೆ ಈಗಾಗಲೇ ಜಮಾ ಆಗಿದೆ. ಆದರೆ ಬ್ಯಾಂಕ್ ಖಾತೆಯಲ್ಲಿನ ನ್ಯೂನತೆ ಹಾಗೂ ವಿವಿಧ ತಾಂತ್ರಿಕ ಕಾರಣಗಳಿಂದ ಜಿಲ್ಲೆಯ 5774 ರೈತರ ಬ್ಯಾಂಕ್ ಖಾತೆಗೆ ಅನುದಾನ ಜಮೆ ಆಗಿಲ್ಲದಿರುವುದು ಕಂಡು ಬಂದಿರುತ್ತದೆ.

ಆದ್ದರಿಂದ ಈವರೆಗೆ ಬೆಳೆ ಹಾನಿ ಪರಿಹಾರ ಜಮೆ ಆಗದ ರೈತರ ಬ್ಯಾಂಕ್ ಖಾತೆಯಲ್ಲಿನ ನ್ಯೂನತೆ ಹಾಗೂ ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಜಿಲ್ಲೆಯ ಬರ ಪೀಡಿತ 11 ತಾಲ್ಲೂಕುಗಳಲ್ಲಿಯ ತಹಶೀಲ್ದಾರ ಕಚೇರಿಗಳಲ್ಲಿ ರೈತರ ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿರುತ್ತದೆ.

ಆದ್ದರಿಂದ ಜಿಲ್ಲೆಯ ರೈತರು ಮೇ 19 ರೊಳಗೆ ತಮ್ಮ ವ್ಯಾಪ್ತಿಯ ತಹಶೀಲ್ದಾರ ಕಚೇರಿಯ ಕೆಳಗಿನ ದೂರವಾಣಿ ಸಂಖ್ಯೆಯನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಿ ಬೆಳೆ ಪರಿಹಾರದ ಅನುದಾನವನ್ನು ಪಡೆಯುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಕಾರವಾರ 08382-223350, ಅಂಕೋಲಾ 08388-230243, ಕುಮಟಾ 08386-222054, ಭಟ್ಕಳ 08385-226422, ಶಿರಸಿ 08384-226383, ಸಿದ್ದಾಪುರ 08389-230127, ಯಲ್ಲಾಪುರ 9902571927, ಮುಂಡಗೋಡ 08301-222122, ಹಳಿಯಾಳ 08284-220134, ಜೋಯಡಾ ಮೊ.ಸಂ. 7483628982, ದಾಂಡೇಲಿ 08284-295959 ರೈತರ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.


Share: