ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ವಿಶೇಷ ಪುಟ / ನವದೆಹಲಿ: ಹಣದುಬ್ಬರ ಎರಡಂಕಿಗೆ ತಲುಪಬಹುದು:ಮುಖರ್ಜಿ

ನವದೆಹಲಿ: ಹಣದುಬ್ಬರ ಎರಡಂಕಿಗೆ ತಲುಪಬಹುದು:ಮುಖರ್ಜಿ

Wed, 17 Mar 2010 03:00:00  Office Staff   S.O. News Service

ನವದೆಹಲಿ, ಮಂಗಳವಾರ, 16 ಮಾರ್ಚ್ :ಮಾರ್ಚ್ ತಿಂಗಳಾಂತ್ಯಕ್ಕೆ ಹಣದುಬ್ಬರ ದರ ಎರಡಂಕಿಗೆ ತಲುಪಿದರೂ ನನಗೆ ಆಶ್ಚರ್ಯವಾಗುವುದಿಲ್ಲವೆಂದು 2010-11ರ ಬಜೆಟ್ ಭಾಷಣದಲ್ಲಿ ಮುಖರ್ಜಿ ತಿಳಿಸಿದ್ದಾರೆ.

ಸಾಮಾನ್ಯ ಹಣದುಬ್ಬರ ದರ ಫೆಬ್ರವರಿ ತಿಂಗಳ ಅವಧಿಯಲ್ಲಿ ಈಗಾಗಲೇ ಶೇ.9.89ಕ್ಕೆ ತಲುಪಿದೆ.

ಪ್ರಧಾನಿ ಮನಮೋಹನ್ ಸಿಂಗ್ ಇತ್ತೀಚೆಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯೊಂದನ್ನು ನಡೆಸಿ, ಅಹಾರ ದರಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಮುಖರ್ಜಿ ತಿಳಿಸಿದ್ದಾರೆ. 

ಅಹಾರ ಹಣದುಬ್ಬರ ದರ ಫೆಬ್ರವರಿ ತಿಂಗಳ ಅವಧಿಯಲ್ಲಿ ಶೇ.17.81ಕ್ಕೆ ತಲುಪಿದ್ದು, ಜನಸಾಮಾನ್ಯರಿಗೆ ತೀವ್ರ ಆತಂಕ ಎದುರಾಗುತ್ತಿದೆ ಎಂದು ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಸೌಜನ್ಯ: ೨೪ ದುನಿಯಾ

Share: