ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರದಲ್ಲಿ ಸಚಿವ ಮಂಕಾಳ ವೈದ್ಯರಿಂದ ಧ್ವಜಾರೋಹಣ; ಐದು ಗಾರಂಟಿ ಯೋಜನೆಗಳು ಬಡವರ ಏಳಿಗೆಗೆ ಸಾಕಾರವಾಗಿದೆ

ಕಾರವಾರದಲ್ಲಿ ಸಚಿವ ಮಂಕಾಳ ವೈದ್ಯರಿಂದ ಧ್ವಜಾರೋಹಣ; ಐದು ಗಾರಂಟಿ ಯೋಜನೆಗಳು ಬಡವರ ಏಳಿಗೆಗೆ ಸಾಕಾರವಾಗಿದೆ

Fri, 26 Jan 2024 21:59:09  Office Staff   S O news

ಕಾರವಾರ: ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನದ ತತ್ವ, ಸಾಮಾಜಿಕ ಪರಿಕಲ್ಪನೆಯಲ್ಲಿ ಅಧಿಕಾರಿಕ್ಕೆ ಬಂದಿರುವ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲ ವರ್ಗದ ಜನರ ಅಭ್ಯುದಯಕ್ಕೆ ಕಟಿಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿ ಬಳಿಕ ಧ್ವಜಾರೋಹಣ ನಡೆಸಿದರು. ನಂತರ ತೆರೆದ ಜೀಪಿನಲ್ಲಿ ಪರೇಡ್ ತಂಡಗಳ ಪರಿವೀಕ್ಷಣೆ ನಡೆಸಿದರು.

ಬಳಿಕ ಗಣರಾಜೋತ್ಸವದ ಸಂದೇಶ ಸಾರಿದ ಅವರು, ದೇಶ ಅಭಿವೃದ್ಧಿ ಆಗಿದೆ ಎಂಬುದಾದರೇ ಅದು ಡಾ.ಬಿ. ಆರ್ ಅಂಬೇಡ್ಕರ್ ಕೊಟ್ಟಂತ ಸಂವಿಧಾನದಿಂದ. ಬಡವರು ನೆಮ್ಮದಿಯಿಂದ ಜೀವನ ನಡೆಸುವಂತಾದರೇ ಸಂವಿಧಾನದ ಧೈಯ ಉದ್ದೇಶ ಇಡೇರಿದಂತಾಗುತ್ತದೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ಜನರು ನೆಮ್ಮದಿಯಿಂದ ಜೀವನ

ನಡೆಸುವಂತೆ ಮಾಡಿದೆ. ಐದು ಗ್ಯಾರಂಟಿ ಯೋಜನೆಗಳು ಬಡವರ ಏಳಿಗೆಗೆ ಸಾಕಾರವಾಗಿದೆ ಎಂದು ಹೇಳಿದರು.

ಗುಡ್ಡಗಾಡು ಜಿಲ್ಲೆಯಾಗಿರುವ ಉತ್ತರ ಕನ್ನಡಕ್ಕೆ ಎರಡು ವಾಹನದ ಮೂಲಕ ಸಂವಿಧಾನ ಸಂದೇಶ ಪ್ರಚಾರ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಸ್ವಾಂತಂತ್ರ್ಯ ಬಂದು 75 ವರ್ಷವಾದರೂ ನಮ್ಮ ಹಕ್ಕನ್ನು ಪಡೆಯಲು ನಾವು ಹೋರಾಟ ಮಾಡಬೇಕಾಗಿದೆ. ಆದರೆ ಇದು ಆಗಬಾರದು ಎಂದರು ಇನ್ನು ಅಭಿವೃದ್ಧಿ ವಿಷಯದಲ್ಲಿ ಕಾರವಾರದಿಂದ ಮಂಗಳೂರಿನವರೆಗೆ ಬಂದರಿನಲ್ಲಿನ ಸಮಸ್ಯೆ ಆಲಿಸಿ ಬಗೆಹರಿಸಲಾಗುತ್ತಿದೆ. ಕಾರವಾರದಲ್ಲಿ 40 ಕೋಟಿ ವೆಚ್ಚದಲ್ಲಿ ಬಂದರು ಹೂಳೆತ್ತಲಾಗುತ್ತಿದೆ. ಮಂಗಳೂರಿನಲ್ಲಿ 40 ಕೋಟಿ ವೆಚ್ಚದಲ್ಲಿ 3ನೇ ಹಂತದ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಡಾಕ್ ನಿರ್ಮಾಣ, ಹೂಳೆತ್ತುವುದು ಹಾಗೂ ಇಲಾಖೆಗೆ ಪೂರಕವಾಗಿದ್ದನ್ನು ಮಾಡಲು ಸೂಚಿಸಲಾಗಿದೆ ಎಂದರು.

ಇನ್ನು ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಶಾಶ್ವತ ಕಟ್ಟಡ ನೀಡಲಾಗುತ್ತಿದೆ. ಶಿಕ್ಷಣಕ್ಕೆ ಯಾವುದೇ ಕೊರತೆ ಆಗದಂತೆ ನಮ್ಮ ಅವಧಿಯಲ್ಲಿ ಕ್ರಮ ಕೈಗೊಳ್ಳಲು ಶಾಸಕರು ಸೇರಿ ಎಲ್ಲರು ಬದ್ಧರಾಗಿದ್ದಾರೆ ಎಂದು ಹೇಳಿದರು.

ಇನ್ನು 19339 69.3.8 ಫಕೀರಪ್ಪ ಆ‌ರ್ ಜಕ್ಕಣ್ಣನವ‌ರ್ ಅವರ ನೇತೃತ್ವದಲ್ಲಿ ಪೊಲೀಸ್, ಮಹಿಳಾ ಪೊಲೀಸ್, ಗೃಹರಕ್ಷಕದಳ, ಅರಣ್ಯ ಇಲಾಖೆ, ಎನ್ಸಿಸಿ, ಸ್ಕಾಟ್ ಮತ್ತು ಗೈಡ್ಸ್ ಸೇರಿದಂತೆ 15 ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ಗೀತೆಗಳಿಗೆ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.


Share: