ಕೋಲ್ಕತಾ: ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ನಂಟು ಹೊಂದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರಿಗೆ ಜಾರಿ ನಿರ್ದೇಶನಾಲಯ 4ನೇ ಸಮನ್ಸ್ ನೀಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿಲ್ಲ.
ಜನವರಿ 18 ಅಥವಾ 19ರಂದು ತನ್ನ ಮುಂದೆ ಹಾಜರಾಗುವಂತೆ ಅರವಿಂದ ಕೇಜ್ರವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಜ.13ರಂದು ಸಮನ್ಸ್ ನೀಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಜ್ರವಾಲ್, ಈ ಸಮನ್ಸ್ ಮುಂಬರುವ ಲೋಕಸಭೆ ಚುನಾವಣೆಗೆ ಪ್ರಚಾರ ನಡೆಸದಂತೆ ತನ್ನನ್ನು ತಡೆಯಲು ಬಿಜೆಪಿಯ ಪಿತೂರಿಯ ಭಾಗವಾಗಿದೆ ಎಂದು ಮತ್ತೊಮ್ಮೆ ಆರೋಪಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ಕೇಜ್ರವಾಲ್ ಅವರನ್ನು ಅಬಕಾರಿ ಹಗರಣದ ರೂವಾರಿ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ಕೇಜ್ರವಾಲ್ ಅವರು ಭಯ ಪಡುತ್ತಿರುವಂತೆ ಕಾಣುತ್ತಿದೆ ಎಂದಿದ್ದಾರೆ.
ಈಗ ರದ್ದುಪಡಿಸಲಾಗಿರುವ ದಿಲ್ಲಿ ಸರಕಾರದ ಅಬಕಾರಿ ನೀತಿಯಲ್ಲಿನ ಅವ್ಯವಹಾರ ಆರೋಪಿಸಿ ಸಿಬಿಐ ದಾಖಲಿಸಿದ ಪ್ರಥಮ ಮಾಹಿತಿ ವರದಿ ಆಧಾರದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಕೇಜ್ರವಾಲ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಜನವರಿ 3ರಂದು ಮೂರನೇ ಬಾರಿ ಸಮನ್ಸ್ ಸ್ವೀಕರಿಸಿದ್ದರು. ಆದರೆ, ವಿಚಾರಣೆಗೆ ಹಾಜರಾಗಿರಲಿಲ್ಲ. ನವೆಂಬರ್ 2 ಹಾಗೂ ಡಿಸೆಂಬರ್ 21ರಂದು ಕೂಡ ಹಾಜರಾಗುವಂತೆ ಕೇಜ್ರವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. - ಅಂದು ಕೂಡ ಅವರು ಹಾಜರಾಗಿರಲಿಲ್ಲ.
ಜಾರಿ ನಿರ್ದೇಶನಾಲಯದೊಂದಿಗೆ ಸಹಕರಿಸಲು ಕೇಜ್ರವಾಲ್ - ಅವರು ಸಿದ್ದ ಎಂದು ಆಮ್ ಆದಿ ಪಕ ಜನವರಿ 3ರಂದು ಹೇಳಿತ್ತು. ಆದರೆ, ಜಾರಿ ನಿರ್ದೇಶನಾಲಯದ ನೋಟಿಸ್ ಕಾನೂನು ಬಾಹಿರ ಎಂದು ಹೇಳಿತ್ತು.
ಅವರ ಉದ್ದೇಶ ಅರವಿಂದ ಕೇಜ್ರವಾಲ್ ಅವರನ್ನು ಬಂಧಿಸುವುದು. - ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ಕೇಜ್ರವಾಲ್ ಅವರು ಭಾಗವಹಿಸುವುದನ್ನು ತಡೆಯಲು ಅವರು ಬಯಸಿದ್ದಾರೆ ಎಂದು ಆಮ್ ಆದಿ ಪಕ್ಷ ಆರೋಪಿಸಿತ್ತು.