ಶಾಂತರೀತಿಯಿಂದ ನಡೆದ ಚುನಾವಣೆ
ಭಟ್ಕಳ: ನೂರು ವರ್ಷಗಳ ಇತಿಹಾಸವಿರುವ ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿ-ಎ- ಮುಸ್ಲಿಮಿನ್ ಶೈಕ್ಷಣ ಸಂಸ್ಥೆಯ ಕಾರ್ಯಕಾರಿ ಸಮಿತಿಗಾಗಿ ಸೋಮವಾರ ಚುನಾವಣೆ ನಡೆಯಿತು.
೪೯ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು ಇದರಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದ ೨೩ ಅಭ್ಯರ್ಥಿಗಳು ಮುಂದಿನ ನಾಲ್ಕು ವರ್ಷದ ಅವಧಿಗಾಗಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅಬ್ದುಲ್ ವಾಜಿದ್ ಕೋಲಾ ಘೋಷಿಸಿದರು.
ಈ ಚುನಾವಣೆಯಲ್ಲಿ ವಿಜೇತರಾಗಿರುವ ಪ್ರಮುಖರೆಂದರೆ, ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಿದ್ದೀಕ್ ಅವರು ಅತಿ ಹೆಚ್ಚು ಅಂದರೆ 440 ಮತಗಳನ್ನು ಪಡೆದು ಪ್ರಥಮ ಸ್ಥಾನಕ್ಕೇರಿದ್ದಾರೆ. ಡಾ. ಎಸ್.ಎಂ.ಸೈಯದ್ ಸಲೀಂ 415 ಮತ, ಕೆ.ಎಂ.ಬುರ್ಹಾನ್ 398 ಮತ, ಅಹಿದ್ ಮೊಹತೆಶಮ್ 382 ಮತ , ರಮೀಝ್ ಕೋಲ ಮತ್ತು ಮುಬಾಶ್ಶಿರ್ ಹುಸೇನ್ ಹಲ್ಲಾರೆ ಇಬ್ಬರೂ 370 ಮತಗಳನ್ನು ಪಡೆದುಕೊಂಡಿದ್ದಾರೆ.
ಬೆಳಿಗ್ಗೆ ೯ಗಂಟೆಯಿಂದ ಆರಂಭಗೊಂಡ ಮತದಾನ ಸಂಜೆ ೭.೩೦ರ ತನಕ ನಡೆಯಿತು. ಮತದಾನ ಶಾಂತಿಯುತವಾಗಿ ನಡೆಯಿತು. ಒಟ್ಟು ೭೪೫ ಸದಸ್ಯರಲ್ಲಿ ೫೩೩ ಸದಸ್ಯರು ತಮ ಹಕ್ಕನ್ನು ಚಲಾಯಿಸಿದ್ದು ಶೇ.೭೧.೫ ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.
ಹೊಸ ಮುಖಗಳ ಪ್ರವೇಶ: ಇದೇ ಮೊದಲ ಬಾರಿ ಅಂಜುಮನ್ ಚುನಾವಣೆಯಲ್ಲಿ ಸ್ಪರ್ಧಿಸಿ ಕಾರ್ಯಕಾರಿ ಸಮಿತಿಗೆ ಹೊಸ ಮುಖಗಳ ಪ್ರವೇಶವಾಗಿದ್ದು ಇದರಲ್ಲಿ ಕಾಡ್ಲಿ ಅಬ್ದುಲ್ ಹಸೀಬ್, ಕೆ.ಎಂ.ಮುಷ್ತಾಕ್, ಬರ್ಮಾವರ್ ಸೈಯದ್ ಅಝರ್ ನದ್ವಿ, ರುಕ್ನುದ್ದೀನ್ ಇಮ್ತಿಯಾಜ್ ಹುಸೇನ್, ಎಸ್.ಎಂ.ಸೈಯದ್ ಹುಸೇನ್ ಝಾಕಿರ್ ಪ್ರಮುಖರಾಗಿದ್ದಾರೆ.
ಅಂಜುಮನ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾದ ಮುಹಮ್ಮದ್ ಅಜಾನ್ ಪೇಶಮಾಮ್, ಸೈಯದ್ ಸಫ್ವಾನ್ ಪಿರ್ಜಾದೆ, ಮುಹಮ್ಮದ್ ಜಯಾನ್ ಖಾಸಿಮ್ಜಿ ಮತ್ತು ಮುಶಿರುಲ್ ಹಕ್ ಖಾನ್ ಇವರು ಅಂಜುಮನ್ ಸಂಸ್ಥೆಯ ರಿಜಿಸ್ಟ್ರಾರ್ ಪ್ರೋ. ಜಾಹಿದ್ ಖರೂರಿ ಅವರ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಲ್ಲಿ ಕಂಪ್ಯೂಟರ್ ಮೂಲಕ ಮತದಾನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮತದಾನವಾದ ಅರ್ದಗಂಟೆ ಒಳಗೆ ಫಲಿತಾಂಶ ಪ್ರಕಟಗೊಂಡಿತು.
ಗೆದ್ದ ಪ್ರಮುಖರು: ತಂಝೀಮ್ ಅಧ್ಯಕ್ಚ ಇನಾಯತುಲ್ಲಾ ಶಾಬಂದ್ರಿ, ಅಂಜುಮನ್ ಮಾಜಿ ಕಾಯದರ್ಶಿ ಮುಹಿದ್ದೀನ್ ರುಕ್ನುದ್ದೀನ್ ಕೊಚ್ಚೊಬಾಪ, ತಂಝೀಮ್ ಮಾಜಿ ಅಧ್ಯಕ್ಷ ಎಸ್.ಎಂ.ಪರ್ವೆಝ್, ಅಂಜುಮನ್ ಮಾಜಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ಕೋಲಾ ಅಬ್ದುಸ್ಸಮಿ, ಅಸಫ್ ದಾಮೂದಿ
ಸೋತವರಲ್ಲಿ ಪತ್ರಕರ್ತ ಅತಿಕರ್ರಹ್ಮಾನ್ ಶಾಬಂದ್ರಿ, ಸನಾವುಲ್ಲಾ ಗವಾಯಿ, ಅಬ್ದುಲ್ ಕದೀರ್ ಎಸ್.ಎಂ., ನ್ಯಾಯವಾದಿ ಆಫಾಖ್, ಲೈಫ್ ಕೇರ್ ನ ಸಲ್ಮಾನ್ ಜುಬಾಪೂ, ಡಾ.ಯಾಹ್ಯಾ ಅಸ್ಕೇರಿ, ಅಬ್ದುಲ್ ಬಾಸಿತ್ ಇಕ್ಕೇರಿ ಪ್ರಮುಖರಾಗಿದ್ದಾರೆ.