ಪ್ರಶ್ನೆ ಇರುವುದು ಯಾರಾದರೂ ಲೇಖಕರು, ತಮ್ಮ ಅನಿಸಿಕೆ ವ್ಯಕ್ತಪಡಿಸಲು ಅವರು `ಮುಕ್ತರು‘ ಅವರು ಮಾತ್ರವಲ್ಲ ಯಾರೇ ಆಗಲಿ…. ಅದನ್ನು ಪ್ರಕಟಿಸು ವವರದ್ದು, ಪ್ರತಿಭಟಿಸುವವರದ್ದು ಅಷ್ಟೆ. ಆದರೆ ಅಂತಹವುಗಳನ್ನು ಬರೆಯುವಾಗ, ಪ್ರಕಟಿಸುವಾಗ ಬದುಕಿರುವ ಸುತ್ತಲಿನ ವಾತಾವರಣ, ಸ್ಥಿತಿಗಳನ್ನು, ಪರಿಣಾಮಗಳನ್ನು ನಿರ್ಲಕ್ಷಿಸಬೇಕಿಲ್ಲ. ಈ ಪ್ರಶ್ನೆ ಎದ್ದಿರುವುದು ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್ ಲೇಖನದಿಂದಾಗಿ ಕನ್ನಡಪ್ರಭ ದಿನ ಪತ್ರಿಕೆಯು ತನ್ನ ಸಾಪ್ತಾಹಿಕದಲ್ಲಿ ಪ್ರಕಟಿಸಿದ `ಪರ್ದಾ ಹೈ ಪರ್ದಾ‘ ಎಂಬ ಲೇಖನ ಪ್ರಕಟಿಸಿದ ಬಳಿಕ ಹಾಸನ, ಶಿವಮೊಗ್ಗಗಳಲ್ಲಿ ವ್ಯಾಪಕ ಹಿಂಸಾಚಾರ, ಗೋಲಿಬಾರ್ ಇಬ್ಬರ ಬಲಿ, ನಂತರದಲ್ಲಿ ಮಂಗಳೂರು, ಉಡುಪಿ ಮುಂತಾದೆಡೆ ಹಬ್ಬಿದ ಗಲಭೆ, ಪತ್ರಿಕಾ ಕಛೇರಿಗಳ ಮೇಲಿನ ಧಾಳಿಗಳು ಹುಟ್ಟುಹಾಕಿದ ಆತಂಕದ ವಾತಾವರಣ.
ಈಗಾಗಲೇ ತನ್ನ ವಿವಾದಾತ್ಮಕ ಬರಹಗಳಿಂದ ಮುಸ್ಲಿಂ ಮೂಲಭೂತವಾದಿಗಳ `ಫತ್ವಾ‘ಕ್ಕೆ ಗುರಿಯಾಗಿ ಜೀವ ಬೆದರಿಕೆಯಿಂದ ದೇಶಾಂತರಗೊಂಡು `ಭೂಗತ ಜೀವನ‘ ಕಳೆಯುತ್ತಿರುವ ತಸ್ಲೀಮಾ ತಾನು ಆ ದಿನಪತ್ರಿಕೆಗೆ ಲೇಖನ ಬರೆದಿಲ್ಲ. ತನ್ನ ಹಲವು ಅಭಿಪ್ರಾಯಗಳನ್ನು ತಿರುಚಲಾಗಿದೆಯೆಂದೂ ಹೇಳಿದ್ದಾರೆ. ಭಾರತದ ಆಶ್ರಯದಲ್ಲಿರುವ ತಸ್ಲೀಮಾಗೆ `ವೀಸಾ‘ದ ಅವಧಿಯು ಕೆಲವು ತಿಂಗಳಲ್ಲಿ ಮುಗಿಯಲಿದೆ. ಪ್ರಕಟಿತ ಲೇಖನ ಮತ್ತು ನಂತರ ಗಲಭೆಗಳ ಬಗ್ಗೆ ಕೇಂದ್ರ ಗೃಹಸಚಿವ ಚಿದಂಬರಂ ಆಕ್ಷೇಪದ ಅನುಮಾನದಿಂದ ಪ್ರತಿಕ್ರಿಯಿಸಿದ್ದಾರೆ. ಇವೂ ಕೂಡ ಗಮನಿಸಬೇಕಾದ ಅಂಶಗಳು.
ಇಂತಹ ವಿವಾದಕ್ಕೆ ಹಲವು ಆಯಾಮಗಳಿರಬಹುದು, ಅಥವಾ ಬರಬಹುದು. ಕರ್ನಾಟಕ ಸರ್ಕಾರವೇ ಆ ಪತ್ರಿಕೆಗಳ ಮೇಲೆ(ಕನ್ನಡ ಪ್ರಭ ಹಾಗೂ ಉರ್ದು ಪತ್ರಿಕೆ) ಮೊಕದ್ದಮೆ ದಾಖಲಿಸಿದೆ. ತನಿಖೆಯೂ ನಡೆಯಲಿದೆಯಂತೆ. ಈ ಲೇಖನದಲ್ಲಿ ಈಗಿರುವ ಬುರ್ಕಾ ಪದ್ಧತಿಯನ್ನು ವಿರೋಧಿಸಿ ಗಂಡಸರಿಗೂ ಏಕಿಲ್ಲ ಎಂದು ತಸ್ಲಿಮಾ ಪ್ರಶ್ನಿಸಿದ್ದಾರೆ. ಪ್ರವಾದಿಯೊಂದಿಗೆ ಐತಿಹಾಸಿಕ ಸಂಬಂಧಗಳನ್ನು ಕಲ್ಪಿಸಿ, ಖುರಾನ್ನ ಕೆಲವನ್ನು ಪ್ರಶ್ನಿಸಿ, ಕೆಲವರನ್ನು ಕೆಣಕಿದ್ದಾರೆ. ಬಹುತೇಕ ಎಲ್ಲಾ ಧರ್ಮಗಳು, ಅವುಗಳ ವಿಧಿವಿಧಾನಗಳು ಮಹಿಳೆಯನ್ನು ಎರಡನೆ ದಜರ್ೆ ನಾಗರೀಕಳನ್ನಾಗಿಯೇ ನೋಡಿದೆ. ಒಂದೊಂದು ಧರ್ಮಗಳಲ್ಲಿಯೂ ಅವರ ಅಳಲು, ಸ್ಥಾನಮಾನ ಪಾತ್ರಗಳು ಬಹುತೇಕ ಒಂದೇ. ಬುರ್ಕಾ ಪದ್ಧತಿಯೇ ಆಗಲಿ, ಸತಿ ಪದ್ಧತಿಯೋ ಮಾನವೀಯತೆಯುಳ್ಳ ಎಲ್ಲರೂ ಚಿಂತಿಸಬೇಕಾದುದುದೇ. ಆದರೆ ಮಹಿಳಾ ವಿಮೋಚನೆಯ ದಿಕ್ಕಿನಲ್ಲಿ ಒಟ್ಟಿನಲ್ಲಿ ಇಂದು ಎತ್ತಬೇಕಾದ ಆದ್ಯತೆಯ ಪ್ರಶ್ನೆಗಳಾವುವು? ಅವರ ಹಾದಿ ಚರ್ಚಾರ್ಹವೇ ಆಗಿದೆ.
ಸಂಘ ಪರಿವಾರದ ಕ್ರಮಗಳು, ಪ್ರತ್ಯುತ್ತರಗಳು,
ಕರ್ನಾಟಕದಲ್ಲೀಗ ಸಂಘ ಪರಿವಾರವು ಸತತವಾಗಿ ಹಿಂದೂ , ಮುಸ್ಲಿಂರ ನಡುವೆ ಕೋಮು ವಿಭಜನೆಗೆ ಸತತವಾಗಿ ಪ್ರಯತ್ನಿಸುತ್ತಲೇ ಇದೆ, ಮುಸ್ಲಿಂರ ನಡುವೆ ಕೋಮು ವಿಭಜನೆಗೆ ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಹೊಸ ಹೊಸ ಧಾಳಿಗಳನ್ನು ಜೋಡಿಸುತ್ತಿದೆ. ಉಡುಗೆ ಊಟದ ನೀತಿಸಂಹಿತೆಯನ್ನು ಹೇರುವ ಸಂಘ ಪರಿವಾರ ಮಂಗಳೂರು, ಭಟ್ಕಳ ಹೀಗೆ ಕರಾವಳಿಯಲ್ಲಿ ಕಾಲೇಜಿಗೆ ಮುಸ್ಲಿಂ ವಿದ್ಯಾರ್ಥಿನಿಯರು. ಅವರ ದಾರ್ಮಿಕ ವಿಧಿಯಂತೆ ಬುರ್ಕಾ ಹಾಕಿ ಬರಬಾರದೆಂದು ಫರ್ಮಾನು ಹೊರಡಿಸಿ, ವಿದ್ಯಾರ್ಥಿನಿಯರನ್ನು ಹಿಂಸಿಸುತ್ತಿರುವುದು, ಇದಕ್ಕೆ ಆ ಕಾಲೇಜುಗಳ ಆಡಳಿತ ಮಂಡಳಿಯೇ ಕೈಜೋಡಿಸಿ ಬೆದರಿಸಿರುವುದು ನಡೆದಿದೆ. ಮುಸ್ಲಿಂ ಯುವತಿಯರು ಶಿಕ್ಷಣ ಪಡೆಯಲು ಮುಂದಾಗುತ್ತಿರುವುದನ್ನು ಅವರು ಸಹಿಸಲು ಡ್ರೆಸ್ ಕೋಡ್ ಹೆಸರಲ್ಲಿ ಆಯ್ಕೆಯ ಹಕ್ಕನ್ನು ಮನ್ನಿಸಲು ಸಿದ್ಧರಿಲ್ಲ, ಚೆಡ್ಡಿಪಡೆಗಳ ಇಂತಹ ಫ್ಯಾಸಿಸ್ಟ್ ಕುಕೃತ್ಯಗಳಿಗೆ ಪ್ರತ್ಯುತ್ತರವೆಂದು ಮೂಲಭೂತವಾದಿ ಸಂಘಟನೆಯಾದ ಕೆ.ಎಫ್.ಡಿ.ಯು ಮಹಿಳೆಯರು ಕಡ್ಡಾಯವಾಗಿ ಬುರ್ಕಾ ಧರಿಸಬೇಕೆಂಬ`ಚಳುವಳಿ‘ ಕೈಗೊಂಡಿರುವುದು ಒಂದೇ ರೀತಿಯ ಅತಿರೇಕಗಳು.
ಹಾಳುಗೆಡಹುವ ಹಾದಿ
ಈಗಂತೂ ಆರ್ಎಸ್ಎಸ್ ಸರ್ಕಾರದ ಮೂಲಕವೇ ವೈವಿದ್ಯಮಯ ಆಹಾರದ ಪದ್ಧತಿಯನ್ನು ನಿರ್ಬಂಧಿಸುವ ರೈತರ ಬವಣೆ ಹೆಚ್ಚಿಸುವ, ಮುಖ್ಯವಾಗಿ , ಮುಖ್ಯವಾಗಿ ಮುಸ್ಲಿಂ ಅಲ್ಪಸಂಖ್ಯಾತರನ್ನು ತಮ್ಮ ದಾಳಿಗೆ ಗುರಿಯಾಗಿಸಿಕೊಂಡಿರುವ ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ 2010 ನ್ನು ತರಲು ಹೊರಟಿದೆ. (ತಾಂತ್ರಿಕ ಕಾರಣಗಳಿಗೆ ಈಗ ಹಿಂಪಡೆದರೂ ಮತ್ತೆ ಮಂಡಿಸಬಹುದು)ಅದಕ್ಕಾಗಿ ರಾಜ್ಯದಾದ್ಯಂತ ಸಂಘ ಪರಿವಾರದ ಸಂಘಟನೆಗಳು ಜನರ ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಉದ್ರಿಕ್ತವಾಗಿ ಪ್ರಚಾರಿಸುತ್ತಿವೆ. `ಪರ್ದಾ‘ ಲೇಖನದ ಸುತ್ತ ಹಾಗೂ ನಂತರದಲ್ಲಿ ನಡೆದ ಘಟನೆಗಳು ಕೋಮುಸೌಹಾರ್ದತೆಯನ್ನು ಹಾಳುಗೆಡಹುವ ಹಿಂಸಾತ್ಮಕ ಹಾದಿಯಲ್ಲಿರುವಂತಹವು.
ಪರಸ್ಪರ ಬಲ
`ಪರ್ದಾ‘ ಲೇಖನವನ್ನು ಪ್ರತಿಭಟಿಸಿ ಹಾಸನದಲ್ಲಿ ಕೆಲವು ಮುಸ್ಲಿಂ ಅಲ್ಪಸಂಖ್ಯಾತರು ಮೆರವಣಿಗೆಗೆ ಮುಂದಾದಾಗ, ನಡೆದ ಕಲ್ಲು ತೂರಾಟಗಳು, ಇದಕ್ಕೆ ಕಾದಿದ್ದರೇನೋ ಎಂಬಂತೆ ಬಜರಂಗದಳ, ಶ್ರೀರಾಮಸೇನೆ ಮುಂತಾದವರ ಮರುಧಾಳಿಗಳು ಏನನ್ನು ತೋರಿಸುತ್ತವೆ. ಹಾಗೆಯೇ ಶಿವಮೊಗ್ಗದ ಘಟನೆಗಳು,