ಬೆಂಗಳೂರು,ಜನವರಿ 15:ಬರುವ ಪೆಬ್ರವರಿ ೨೧ ರಂದು ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಧಿಸೂಚನೆ ಪೆಬ್ರವರಿ ೧ ರಂದು ಪ್ರಕಟವಾಗಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ.
ಬಿಬಿಎಂಪಿ ಚುನಾವಣೆಯ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಿರುವುದರಿಂದ ಸರ್ಕಾರ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಯೋಜನೆಗಳು ಹಾಗೂ ಆಡಳಿತಾತ್ಮಕ
ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ. ಈ ನೀತಿ ಸಂಹಿತೆ ಪೆಬ್ರವರಿ ೨೫ ರ ವರೆಗೂ ಜಾರಿಯಲ್ಲಿರುತ್ತದೆ.
ಈ ನೀತಿ ಸಂಹಿತೆ ಜಾರಿಯಲ್ಲಿರುವವರೆಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಚಿವರು ಅಥವ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವಂತಿಲ್ಲ. ಸಾಂಸ್ಕೃತಿ ಹಾಗೂ ಧಾರ್ಮಿಕ ಸಭೆ ನಡೆಸಲು ನೀತಿ ಸಂಹಿತೆಯ ಅಡ್ಡಿ ಇಲ್ಲ. ಇಂತಹ ಸಮಾರಂಭಗಳಲ್ಲಿ ಭಾಗವಹಿಸುವ ರಾಜಕೀಯ ನಾಯಕರು ಮತದಾರರ ಮೇಲೆ ಪ್ರಭಾವ ಬೀರುವ ಘೋಷಣೆ, ಹೇಳಿಕೆ ಅಶ್ವಾಸನೆ ನೀಡುವಂತಿಲ್ಲ. ಒಟ್ಟಿನಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಸರ್ಕಾರಿ ಕಾರ್ಯಕ್ರಮ ಅಥವಾ ಯೋಜನೆಗೆ ಅವಕಾಶವಿಲ್ಲ.
ಬಿಬಿಎಂಪಿಯ ೧೯೮ ವಾರ್ಡ್‌ಗಳಿಗೆ ಪೆಬ್ರವರಿ ೨೧ ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ ೧ ರಂದು ಅಧಿಸೂಚನೆ ಹೊರ ಬೀಳಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಫ್ರೆಬ್ರವರಿ ೮ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ನಾಮ ಪತ್ರ ಪರಿಶೀಲನೆ ಪೆಬ್ರವರಿ ೯ ನಡೆಯಲಿದ್ದು, ನಾಮ ಪತ್ರ ವಾಪಸ್ಸ್ ಪಡೆಯಲು ಫೆಬ್ರವರಿ ೧೧ ರಂದು ಕಡೆಯದಿನ.