ಭಟ್ಕಳ, ನವೆಂಬರ್ ೧೬:ವಿಶ್ವಮಂಗಳ ಗೋಗ್ರಾಮ ಯಾತ್ರೆ ಪ್ರಯುಕ್ತ ಇಲ್ಲಿಯ ಚೆನ್ನಪಟ್ಟಣ ಮಾರುತಿ ದೇವಸ್ಥಾನದ ಪಕ್ಕದ ವಿನಾಯಕ ಸಭಾಗೃಹದಲ್ಲಿ ಜರುಗಿದ ಕಾರ್ಯಕ್ರಮವನ್ನು ಹಳದೀಪುರ ಶ್ರೀ ಕೃಷ್ಣಾಶ್ರಮ ಮಠಾಧೀಶ ವಾಮನಾಶ್ರಮ ಸ್ವಾಮಿಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಲಾ ಗೋಗ್ರಾಮಯಾತ್ರೆಯ ಜಿಲ್ಲಾ ಸಂಚಾಲಕ ಮುರುಳೀಧರ ಪ್ರಭು, ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ಸುರೇಂದ್ರ ಶ್ಯಾನಭಾಗ, ತಾಲೂಕು ಸಂಚಾಲಕ ಶ್ರೀಧರ ಹೆಬ್ಬಾರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.