ಮಂಡ್ಯ, ಮಾ.೧೦: ರಾಜ್ಯ ಸರಕಾರ ಮಂಡಿಸಿರುವ ಕರ್ನಾಟಕ ಜಾನು ವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ ಬ್ರಾಹ್ಮಣರು ಹಾಗೂ ಶೂದ್ರರ ನಡುವಿನ ಸಂಘರ್ಷವಾಗಿದ್ದು, ಈ ಬಗ್ಗೆ ಶೂದ್ರ ಸಮುದಾಯ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಮಾಜಿ ಶಾಸಕ ಹಾಗೂ ಕವಿ ಡಾ. ಎಲ್. ಹನುಮಂತಯ್ಯ ಕರೆ ನೀಡಿದ್ದಾರೆ.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ವತಿಯಿಂದ ನಗರದಲ್ಲಿ ಬುಧವಾರ ನಡೆದ ಗೋಮಾಂಸ ಭಕ್ಷಣೆ ಮತ್ತು ಗೋಹತ್ಯೆ ನಿಷೇಧ ಕುರಿತ ವಿಚಾರಸಂಕಿರಣದಲ್ಲಿ ‘ಗೋಹತ್ಯೆ ನಿಷೇಧ: ಕೆಲವು ಪ್ರಶ್ನೆಗಳು’ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಸೂದೆಯ ಉದ್ದೇಶ ಹಿಂದೂ ಧರ್ಮದ ಪಾವಿತ್ರತೆ ಎತ್ತಿಹಿಡಿಯುವುದು ಅಲ್ಲ. ರೈತರು ಮತ್ತು ಗೋವು ಗಳ ರಕ್ಷಣೆಯೂ ಅಲ್ಲ. ಮಸೂದೆಯ ಆಂತರ್ಯದಲ್ಲಿರುವುದು ಬ್ರಾಹ್ಮಣರು ಹಾಗೂ ಬ್ರಾಹ್ಮಣೇತರರ ನಡುವಿನ ಹೋರಾಟವಾಗಿದೆ ಎಂದು ಅವರು ವಿವರಿಸಿದರು.
ನಿಮ್ಮ ಪೂರ್ವಿಜರ (ಬ್ರಾಹ್ಮಣರು) ನಮ್ಮ ಪೂರ್ವಿಜರ (ಬ್ರಾಹ್ಮಣೇತ ರರು) ನಡುವೆ ಎಂದೋ ನಡೆದ ಹೋರಾಟವನ್ನು ಮತ್ತೆ ಏಕೆ ಮರುಸ್ಥಾ ಪಿಸಲು ಹೊರಟಿದ್ದೀರಿ ಎಂಬುದಾಗಿ ದಲಿತ ಹಾಗೂ ಶೂದ್ರ ಶಾಸಕರು ಮಸೂದೆ ಜಾರಿಗೊಳಿಸುತ್ತಿರುವವರನ್ನು ಪ್ರಶ್ನಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಗೋವುಗಳನ್ನು ಸಾಕಿ, ಗಂಜಲ, ಸೆಗಣಿ ಎತ್ತುವ ರೈತರು ಗೋಹತ್ಯೆ ನಿಷೇಧ ಕಾಯ್ದೆ ಬೇಕೆ ಅಥವಾ ಬೇಡವೆ ಎಂಬುದನ್ನು ನಿರ್ಧಾರ ಮಾಡಬೇಕಾಗಿದೆಯೇ ಹೊರತು, ವಿಧಾನಸೌಧದಲ್ಲಿ ಕುಳಿತಿರುವ ಪುರೋಹಿತರಲ್ಲ ಎಂದು ಹನುಮಂತಯ್ಯ ಆಕ್ರೋಶ ವ್ಯಕ್ತ ಪಡಿಸಿದರು.
ರೈತ ಪ್ರತಿನಿಧಿಗಳನ್ನು ಕರೆದು ತಾನು ಯಾವ ಕಾರಣಕ್ಕೆ ಮಸೂದೆ ಜಾರಿಗೆ ತರುತ್ತಿದ್ದೇನೆಂದು ಕನಿಷ್ಠ ಪರಿಜ್ಞಾನವನ್ನು ಸರಕಾರ ನಡೆಸುವವರು ಹೊಂದಿರ ಬೇಕಾಗಿತ್ತು. ಕೆಲವು ಸಂಘಪರಿವಾರದ ಪುಂಡರ ತಾಳಕ್ಕೆ ತಕ್ಕಂತೆ ಸರಕಾರ ಕುಣಿಯುತ್ತಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಗೋವುಗಳ ಆಧಾರಿತ ಉದ್ಯಮ ದಲ್ಲಿ ತೊಡಗಿಸಿಕೊಂಡಿರುವ ೨.೫ ಲಕ್ಷ ಕುಟುಂಬಗಳ ಹೊಟ್ಟೆಯ ಮೇಲೆ ಹೊಡೆಯುವ ಹುನ್ನಾರ ಮಸೂದೆ ಜಾರಿಯ ಹಿಂದಿನ ಮರ್ಮವಾಗಿದ್ದು, ಇದು ಶ್ರಮಿಕ ವರ್ಗವನ್ನು ಮತ್ತಷ್ಟು ಅಶಕ್ತರನ್ನಾಗಿಸುವ ಮಸೂದೆಯಾಗಿದೆ ಎಂದು ಅವರು ಆಪಾದಿಸಿದರು.
ಮನಸ್ಮತಿ, ವೇದ, ಉಪನಿಷತ್ ಗಳಲ್ಲಿ ಬ್ರಾಹ್ಮಣರಿಗೆ ಗೋಮಾಂಸ ಇಷ್ಟವಾದ ಆಹಾರವೆಂದು ಹೇಳ ಲಾಗಿದೆ. ಸದನದಲ್ಲಿ ಪ್ರಸ್ತಾಪಿಸಿದಾಗ ಇದನ್ನು ಗೃಹ ಸಚಿವ ವಿ.ಎಸ್. ಆಚಾರ್ಯ ಒಪ್ಪಿಕೊಂಡಿದ್ದಾರೆ. ಆದರೂ, ಮಸೂದೆ ಜಾರಿಗೆ ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು.
ಮಸೂದೆಯಿಂದಾಗಿ ವರ್ಷಕ್ಕೆ ೧೫೦ ಲಕ್ಷ ಮೆ.ಟನ್ ಮೇವಿನ ಅಭಾವ ತಲೆದೋರುತ್ತದೆ. ಇದನ್ನು ಸರಕಾರ ಎಲ್ಲಿಂದ ಒದಗಿಸುತ್ತದೆ ಎಂದು ಪ್ರಶ್ನಿಸಿದ ಅವರು, ಸರಕಾರ ಮಸೂದೆ ಯನ್ನು ಕೈಬಿಟ್ಟು, ಒತ್ತುವರಿಯಾಗಿ ರುವ ಗೋಮಾಳ, ಗುಂಡುತೋಪು ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.
‘ಮಸೂದೆಯ ಸಾಮಾಜಿಕ, ಸಾಂಸ್ಕೃ ತಿಕ, ರಾಜಕೀಯ ಮತ್ತು ಆರ್ಥಿಕ ಆಯಾಮಗಳು’ ಕುರಿತು ವಿಷಯ ಮಂಡಿಸಿದ ಸಾಹಿತಿ ಡಾ. ರಾಜಪ್ಪ ದಳವಾಯಿ, ಸಮಾಜವನ್ನು ಒಡೆದು ಸಾಮರಸ್ಯಕ್ಕೆ ಭಂಗ ತಂದು ರಾಜಕೀಯ ಲಾಭಗಳಿಸುವ ಹುನ್ನಾರ ಮಸೂದೆ ಯಲ್ಲಿದೆ ಎಂದು ಟೀಕಿಸಿದರು.
ಆಹಾರ ಪದ್ಧತಿ ಅದೊಂದು ಜೀವನ ಕ್ರಮ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ದಲಿತರು, ಕ್ರಿಶ್ಚಿಯನ್ನರು ಹಾಗೂ ಮುಖ್ಯವಾಗಿ ಮುಸ್ಲಿಮರನ್ನು ಸಮಾಜದಿಂದ ಪ್ರತ್ಯೇಕಗೊಳಿಸುವುದು ಕಾಯ್ದೆಯ ಉದ್ದೇಶ. ಇಂತಹ ಕಾಯ್ದೆ ವಿರುದ್ಧ ಜನರಲ್ಲಿ ಅರಿವು ಮೂಡಿಸ ಬೇಕಾಗಿದೆ ಎಂದವರು ಹೇಳಿದರು.
ಕಾಯ್ದೆ ಜಾರಿಗೊಂಡರೆ ಜಾನು ವಾರುಗಳನ್ನು ಜಾತ್ರೆ ಮುಂತಾದ ಕಡೆ ಸಾಗಿಸುವುದೇ ಕಷ್ಟವಾಗುತ್ತದೆ. ಕಾಯ್ದೆ ಉಲ್ಲಂಘನೆ ಹೆಸರಿನಲ್ಲಿ ೭ ವರ್ಷ ಸೆರೆವಾಸ, ಒಂದು ಲಕ್ಷ ರೂ. ದಂಡ ತೆರಬೇಕಾಗುತ್ತದೆ. ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವ ಅವಕಾಶಗಳು ಹೆಚ್ಚಾಗುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಪ್ರೊ. ಎಚ್. ಎಲ್. ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಎಂ.ಬಿ. ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.