ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹಾಸನ: ಧಿಡೀರನೇ ಆರು ವಿದ್ಯಾರ್ಥಿಗಳು ಅಸ್ವಸ್ಥ - ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು

ಹಾಸನ: ಧಿಡೀರನೇ ಆರು ವಿದ್ಯಾರ್ಥಿಗಳು ಅಸ್ವಸ್ಥ - ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು

Thu, 18 Mar 2010 02:56:00  Office Staff   S.O. News Service

ಹಾಸನ, ಮಾ.೧೫- ಹಾಸನ ತಾಲ್ಲೂಕಿನ ಅಗಿಲೆ ಹಿರಿಯ ಪ್ರಾಥಮಿಕ ಶಾಲೆಯ ೬ ವಿದ್ಯಾರ್ಥಿಗಳು ಅಚ್ಚರಿಯ ರೀತಿಯಲ್ಲಿ ದಿಢೀರ್ ಅಸ್ವಸ್ಥಗೊಂಡಿದ್ದಾರೆ.

ಎಂದಿನಂತೆ ಸೋಮವಾರ ಬೆಳಗ್ಗೆ ಶಾಲೆ ಆಗಮಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ನಾಲ್ವರು ವಿದ್ಯಾರ್ಥಿನಿಯರು ಮತ್ತು ಇಬ್ಬರು ವಿದ್ಯಾರ್ಥಿಗಳು ತಲೆ ಮತ್ತು ಹೊಟ್ಟೆನೋವು ಎಂದು ಹೇಳಿ ಹಠಾತ್ ಕುಸಿದು ಬಿದ್ದಿದ್ದಾರೆ.

 

ವಿದ್ಯಾರ್ಥಿಗಳು ದಿಢೀರ್ ಕುಸಿದ ಘಟನೆಯಿಂದ ದಿಗ್ಭ್ರಮೆಗೊಂಡ ಶಾಲಾ ಶಿಕ್ಷಕರು ಪೋಷಕರ ಮೊರೆ ಹೋಗಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಶಶಿ, ಶ್ವೇತಾ, ಮೇಘಾ, ರಮ್ಯ, ಸಂತೋಷ್ ಮತ್ತು ಅವಿನಾಶ್ ಎಂದು ಗುರುತಿಸಲಾಗಿದೆ.

 

ಕೂಡಲೇ ಅವರನ್ನು ಗ್ರಾಮಸ್ಥರ ನೆರವಿನಿಂದ ಅಸ್ವಸ್ಥಗೊಂಡ ಮಕ್ಕಳನ್ನು ಹಾಸನದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಗೆ ನಿಖರಕಾರಣ ತಿಳಿದು ಬಂದಿಲ್ಲ. ಆದರೆ ಕಲುಷಿತ ನೀರು ಸೇವನೆಯೇ ವಿದ್ಯಾರ್ಥಿಗಳು ಅಸ್ವಸ್ಥರಾಗಲು ಕಾರಣ ಎಂದು ಹೇಳಲಾಗಿದ್ದು, ಘಟನೆ ಕುರಿತಂತೆ ಆರೋಗ್ಯಾಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

 


Share: