ಮಂಗಳೂರು: ಮೂಡುಬಿದಿರೆ ಶಂಸುಲ್ ಉಲಮಾ ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಅರಬಿಕ್ ಕಾಲೇಜು ಶಿಲಾನ್ಯಾಸ ಹಾಗೂ ಸಮಸ್ತ ಮಹಾಸಮ್ಮೇಳನ ಮಾ.೭ರಂದು ಬೆಳಗ್ಗೆ ೯ರಿಂದ ನಡೆಯಲಿದೆ ಎಂದು ಸಂಘಟಕ ಉಮರ್ ಫೈಝಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಬೆಳಗ್ಗೆ ೧೦ಕ್ಕೆ ಪ್ರಥಮ ಅಧ್ಯಯನ ಶಿಬಿರ, ಮಧ್ಯಾಹ್ನ ೨ರಿಂದ ದ್ವಿತೀಯ ಅಧ್ಯಯನ ಶಿಬಿರ ನಡೆ ಯಲಿದೆ. ಸಂಜೆ ೪ಕ್ಕೆ ಶಿಲಾನ್ಯಾಸ ಹಾಗೂ ಸಮಾರೋಪ ಸಮ್ಮೇಳನ ನಡೆಯಲಿದೆ ಎಂದರು.