ಸಕಲೇಶಪುರ, ಡಿಸೆಂಬರ್ 17:-ಮನುಷ್ಯ ಹೃದೆಯವಂತ ನಾಗಬೇಕಾದರೆ, ಕಲೆಯನ್ನು ಪ್ರಿತಿಸಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಸಾದ್ ರಕ್ಷಿದಿ ಹೇಳಿದರು.
ಗುರವಾರ ಪಟ್ಟಣದಲ್ಲಿ ‘ಶ್ರೀ ಶಾರದಾ ಚಿತ್ರಕಲಾ’ ಶಿಬಿರದಲ್ಲಿ ಮಾತನಾಡಿದ ಅವರು, ಸಂಗಿತ,ನುತ್ಯ,ಚಿತ್ರಕಲೆ ಅಥಾವ ಯಾವುದೆ ಕಲೆ ಆಗಿರಲಿ ಮನುಷ್ಯ ಪ್ರಿತಿಸಬೇಕು ಎಂದು ಹೇಳಿದರು.
ಈ ತಾಲೂಕಿನ ಜನ ಕಲೆಗೆ ಬಹಳ ಸಹಕಾರ ನೀಡುತ್ತ ಬಂದಿದ್ದಾರೆ. ಕಲಾವಿದರನ್ನು ಗೌರವಿಸುವುದರಲ್ಲೂ ಹಿಂದಿಲ್ಲ ಎಂದು ಹೇಳಿದರು.
ಉಪನ್ಯಾಸಕ ವೇಣುಗೊಪಾಲ್ ಮಾತನಾಡಿ, ಇಲ್ಲಿಯ ಹುಡುಗ ನೊಬ್ಬ ರಾಜ್ಯಮಟ್ಟದಲ್ಲಿ ಹೆಸರು ಮಾಡಿ, ಹುಟ್ಟೂರಿನಲ್ಲಿ ಕಲೆಯನ್ನು ಬೆಳಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಮಲ್ನಾಡ್ ಮೆಹಬೂಬ್,ಪುರಸಭೆ ಸದಸ್ಯ ಜೈ ಬೀಮ್ ಮಂಜುನಾಥ್,ಜಯ ಕರ್ನಾಟಕ ಸಂಘದ ಸುಪ್ರದಿಪ್ತ ಯಜಮಾನ್, ಕಲಾವಿದ ಆನಂದ ಸುವರ್ಣ ಮುಂತಾದವರಿದ್ದರು.