ಬೆಂಗಳೂರು, ಏಪ್ರಿಲ್ ೧೨: ರಾಜ್ಯ ಚುನಾವಣಾ ಆಯೋಗವು ರಾಜ್ಯದ ೩೦ ಜಿಲ್ಲೆಗಳಲ್ಲಿನ ಒಟ್ಟು ೫೬೨೬ ಗ್ರಾಮ ಪಂಚಾಯತಿಗಳ ಪೈಕಿ ಜುಲೈ ೨೦೧೦ ರ ಮಾಹೆಯ ನಂತರ ಅವಧಿ ಪೂರೈಸುತ್ತಿರುವ ಒಟ್ಟು ೧೫೦ ಗ್ರಾಮ ಪಂಚಾಯತಿಗಳನ್ನು ಹೊರತುಪಡಿಸಿ ಉಳಿದ ೫೪೭೬ ಗ್ರಾಮಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಚುನಾವಣೆಗಳನ್ನು ಎರಡು ಹಂತದಲ್ಲಿ ನಡೆಸಲಾಗುತ್ತಿಯೆಂದು ರಾಜ್ಯ ಚುನಾವಣಾ ಆಯುಕ್ತ ಶ್ರೀ ಸಿ.ಆರ್. ಚಿಕ್ಕಮಠ್ ತಿಳಿಸಿದ್ದಾರೆ.
ಮೊದಲನೆ ಹಂತ: ೧) ಬೆಂಗಳೂರು ನಗರ ೨) ಬೆಂಗಳೂರು ಗ್ರಾಮಾಂತರ ೩) ರಾಮನಗರ ೪) ಚಿತ್ರದುರ್ಗ ೫) ದಾವಣಗೆರೆ ೬) ಕೋಲಾರ ೭) ಚಿಕ್ಕಬಳ್ಳಾಪುರ ೮) ಶಿವಮೊಗ್ಗ ೯) ತುಮಕೂರು ೧೦) ಬೀದರ್ ೧೧) ಬಳ್ಳಾರಿ ೧೨) ಗುಲ್ಬರ್ಗಾ ೧೩) ಯಾದಗೀರ್ ೧೪) ರಾಯಚೂರು ೧೫) ಕೊಪ್ಪಳ ೧೬) ಉಡುಪಿ ಜಿಲ್ಲೆಯ ಉಡುಪಿ ಮತ್ತು ಕಾರ್ಕಳ ತಾಲ್ಲೂಕುಗಳಲ್ಲಿ ಮೊದಲ ಹಂತದ ಚುನಾವಣೆ ಮೇ ೮ ರಂದು ಮತದಾನ ನಡೆಯಲಿದೆ. ಒಟ್ಟು ೨೬೪೩ ಗ್ರಾಮಪಂಚಾಯತಿಗಳಲ್ಲಿನ ೪೩,೮೨೨ ಸ್ಥಾನಗಳಿಗೆ ಮತದಾನ ನಡೆಯಲಿದ್ದು ಇದರಲ್ಲಿ ೧೨೨೫ ಏಕಸದಸ್ಯ ಕ್ಷೇತ್ರಗಳು, ೩೭೮೩ ಎರಡು ಸದಸ್ಯ, ೪೯೪೫ ಮೂರು ಸದಸ್ಯ, ೩೩೧೮ ನಾಲ್ಕು ಸದಸ್ಯ ೧೩೪೪ ಐದು ಸದಸ್ಯ ಕ್ಷೇತ್ರಗಳು ಹಾಗೂ ೩೪ ಆರು ಸದಸ್ಯ ಕ್ಷೇತ್ರಗಳು ಸೇರಿದೆ. ೧೯-೪-೨೦೧೦ ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು ೨೬-೪-೨೦೧೦ ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ೨೭-೪-೨೦೧೦ ರಂದು ನಾಮಪತ್ರಗಳನ್ನು ಪರಿಶೀಲನೆ ಮಾಡಲು ಕೊನೆಯ ದಿನಾಂಕ. ೨೯-೪-೨೦೧೦ ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿದ್ದು ೮-೫-೨೦೧೦ ರಂದು ಮತದಾನ ನಡೆಯಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ೧೨-೫-೨೦೧೦ ರಂದು ನಡೆಯಲಿದೆ.
ಎರಡನೇ ಹಂತದಲ್ಲಿ ೧) ಮೈಸೂರು ೨) ಚಿಕ್ಕಮಗಳೂರು ೩) ದಕ್ಷಿಣ ಕನ್ನಡ ೪) ಹಾಸನ ೫) ಕೊಡಗು ೬) ಮಂಡ್ಯ ೭) ಚಾಮರಾಜನಗರ ೮) ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ೯) ಬೆಳಗಾಂ ೧೦) ಬಿಜಾಪುರ ೧೧) ಬಾಗಲಕೋಟೆ ೧೨) ಧಾರವಾಡ ೧೩) ಗದಗ ೧೪) ಹಾವೇರಿ ೧೫) ಉತ್ತರ ಕನ್ನಡ ಜಿಲ್ಲೆಗಳ ಗ್ರಾಮಪಂಚಾಯ್ತಿಗೆ ಮತದಾನ ನಡೆಸಲಾಗುವುದು. ೨ ನೇ ಹಂತದಲ್ಲಿ ಒಟ್ಟು ೨೮೩೩ ಪಂಚಾಯ್ತಿಗಳ ೪೪೪೨೩ ಸ್ಥಾನಗಳಲ್ಲಿ ೧೩,೭೯೬ ಕ್ಷೇತ್ರಗಳನ್ನು ಒಳಗೊಂಡಿದ್ದು ಅದರಲ್ಲಿ ೮೧೦ ಏಕಸದಸ್ಯ, ೨೯೧೮ ೨ ಸದಸ್ಯ, ೪೬೭೨ , ೩ ಸದಸ್ಯರು, ೩೪೭೯ ನಾಲ್ಕು ಸದಸ್ಯರು, ೧೬೫೭ ಐದು ಸದಸ್ಯರು ೨೬೦ ಆರು ಸದಸ್ಯ ಕ್ಷೇತ್ರಗಳ ಒಟ್ಟಾರೆ ೧೩,೭೯೬ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ.
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ೨೧-೪-೨೦೧೦. ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ ೨೮-೪-೨೦೧೦. ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ೨೯-೪-೨೦೧೦. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ಮತದಾನವು ನಡೆಸಬೇಕಾದ ದಿನಾಂಕ ೧೨-೫-೨೦೧೦ ರಂದು ನಡೆಯಲಿದ್ದು, ಮರು ಮತದಾನ ಅವಶ್ಯವಿದ್ದಲ್ಲಿ ೧೫-೫-೨೦೧೦ ನಡೆಯುತ್ತದೆ. . ಮತದಾನ ಆಯಾ ದಿನಗಳಂದು ಬೆಳಿಗ್ಗೆ ೭.೦೦ ಘಂಟೆಯಿಂದ ಸಾಯಂಕಾಲ ೫.೦೦ ಗಂಟೆವರೆಗೆ ನಡೆಯಲಿದೆ. ಮತಗಳ ಎಣಿಕಯು ದಿನಾಂಕ ೧೭-೫-೨೦೧೦ ರಂದು ಜರುಗಲಿದ್ದು, ಆ ದಿನ ಬೆಳಿಗ್ಗೆ ೮.೦೦ ಗಂಟೆಯಿಂದ ತಾಲ್ಲೂಕಾ ಕೇಂದ್ರಗಳಲ್ಲಿ ನಡೆಯುತ್ತದೆ ಎಂದು ತಿಳಿಸಿದರು. ಚುನಾವನಾ ನೀತಿ ಸಂಹಿತೆಯು ದಿನಾಂಕ ೧೫-೪-೨೦೧೦ ರಿಂದ ಜಾರಿಗೆ ಬರುತ್ತದೆ ಎಂದು ಅವರು ತಿಳಿಸಿದರು.