ಬೆಂಗಳೂರು ಮಾ.೧೩: ವಶಪಡಿಸಿಕೊಳ್ಳ ಲಾದ ವನ್ಯಜೀವಿ ವಸ್ತುಗಳ ಮೌಲ್ಯವನ್ನು ಪ್ರಕಟಿಸದಿರಲು ದಕ್ಷಿಣ ರಾಜ್ಯಗಳ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ಅರಣ್ಯ ಅಪರಾಧ ಹೆಚ್ಚುತ್ತಿರುವ ಹಿನೆಲೆಯಲ್ಲಿ ಮೊದಲ ಬಾರಿಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ರಾಜ್ಯಗಳ ವಿವಿಧ ಸ್ತರದ ಅಧಿಕಾರಿಗಳ ಸಭೆಯ ಬಳಿಕ ಸಿಓಡಿ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ. ಗುರುಪ್ರಸಾದ್ ಈ ವಿಷಯ ತಿಳಿಸಿದರು.
ಆರೋಪಿಗಳಿಂದ ವಶಪಡಿಸಿಕೊಳ್ಳ ಲಾದ ವನ್ಯಜೀವಿಗಳ ವಸ್ತುಗಳ ಮೌಲ್ಯ ವನ್ನು ಪ್ರಕಟಿಸುವುದರಿಂದ ಅಪರಾಧಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂಬ ವಿಷಯ ಸಭೆಯಲ್ಲಿ ಚರ್ಚಿಸಲಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಅಂತಹ ಪ್ರಕರಣಗಳಲ್ಲಿ ವಶಕ್ಕೆ ತೆಗೆದುಕೊಳ್ಳಲಾದ ವಸ್ತುಗಳ ಮೌಲ್ಯವನ್ನು ಪ್ರಕಟಿಸದಿರಲು ತೀರ್ಮಾನಿಸಲಾಯಿತು ಎಂದು ಅವರು ಹೇಳಿದರು.
ವನ್ಯಜೀವಿ ವಸ್ತುಗಳಿಗೆ ಸಂಬಂಧಿಸಿದ ಅಪರಾಧಗಳನ್ನು ನಿಯಂತ್ರಿಸಬೇಕು. ಈ ಹಿನ್ನೆಲೆಯಲ್ಲಿ ಈ ಕುರಿತ ಪತ್ತೆ ಕಾರ್ಯ ಹಾಗೂ ತನಿಖೆಗೆ ಸಂಬಂಧಿಸಿ ದಂತೆ ದಕ್ಷಿಣ ಭಾರತದ ವಿವಿಧ ರಾಜ್ಯ ಗಳೊಂದಿಗೆ ಸಮನ್ವಯತೆ ಸಾಧಿಸುವ ಕುರಿತು ಚರ್ಚಿಸಲಾಯಿತು. ಈ ಹಂತದಲ್ಲಿ ವಿವಿಧ ರಾಜ್ಯಗಳಲ್ಲಿ ದಾಖಲಿ ಸಲಾಗಿರುವ ಪ್ರಕರಣಗಳು ಹಾಗೂ ಅಪರಾಧಿಗಳ ಮಾಹಿತಿ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ವನ್ಯಜೀವಿಗಳಾದ ಆನೆ, ಹುಲಿ, ಚಿರತೆ, ಜಿಂಕೆ, ಎರಡು ತಲೆ ಹಾವು, ನಕ್ಷತ್ರ ಆಮೆ, ಗರಗಸ ಮೀನುಗಳು ಅಳಿವಿನ ಅಂಚಿನಲ್ಲಿದ್ದು, ಈ ವನ್ಯಜೀವಿಗಳನ್ನು ಅಪರಾಧ ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಕೃತ್ಯಗಳ ನಿಯಂತ್ರಣದ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು. ವನ್ಯಜೀವಿಗಳ ಸಂರಕ್ಷಣೆ ಹಾಗೂ ಈ ಕುರಿತ ಅಪರಾಧಗಳನ್ನು ನಿಯಂತ್ರಿಸು ವಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಪಾತ್ರ ಪ್ರಮುಖವಾಗಿದೆ ಎಂದು ಗುರುಪ್ರಸಾದ್ ತಿಳಿಸಿದರು.
ಸಭೆಯಲ್ಲಿ ಬೆಂಗಳೂರಿನ ಅರಣ್ಯಾಧಿಕಾರಿ ಐ.ಬಿ. ಶ್ರೀವತ್ಸವ್, ಹಿರಿಯ ಅಧಿಕಾರಿ ಬಿ.ಕೆ. ಸಿಂಗ್, ಹೊಸದಿಲ್ಲಿಯ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಹೆಚ್ಚುವರಿ ಮಹಾ ನಿರ್ದೇಶಕಿ ರೀನಾಮಿತ್ರ, ರಾಜ್ಯ ಸಿಓಡಿ ಅರಣ್ಯ ಘಟಕದ ಡಿಐಜಿಪಿ ಎಂ.ಸಿ.ನಾರಾಯಣ ಗೌಡ ಸೇರಿದಂತೆ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಹಾಗೂ ಕರ್ನಾಟಕ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.