ಬೆಂಗಳೂರು, ಜ,೧೨: ಶಿಕ್ಷಣ, ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಗಳಿಂದ ವಿಧಾನ ಪರಿಷತ್‌ನಲ್ಲಿರುವ ಮೀಸಲಾತಿಯಂತೆ ವಕೀಲರಿಗೆ ಒಂದು ಸ್ಥಾನ ಮೀಸಲಿಡುವಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರೂ ಆಗಿರುವ, ರಾಜ್ಯ ವಕೀಲರ ಸಂಘಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಒಕ್ಕೂಟದ ಅಧ್ಯಕ್ಷ ಕೆ.ಎನ್. ಪುಟ್ಟೇಗೌಡ ಆಗ್ರಹಿಸಿದ್ದಾರೆ.
ಹೈಕೋರ್ಟ್‌ನ ರಾಜ್ಯ ಜ್ಯೂರಿಸ್ಟ್ ಆಯೋಗದ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 9 ರಂದು ನಡೆದ ಕರ್ನಾಟಕ ರಾಜ್ಯ ವಕೀಲರ ಸಂಘಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಮಾವೇಶದಲ್ಲಿ, ವಕೀಲರಿಗೆ ವಿಧಾನ ಪರಿಷತ್‌ನಲ್ಲಿ ಮೀಸಲಾತಿ ಸೇರಿದಂತೆ ಇತರ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಹೇಳಿದರು.
ರಾಜ್ಯದ ವಿವಿಧ ೯೫ ವಕೀಲರ ಸಂಘಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದ ಈ ಸಮಾವೇಶದಲ್ಲಿ ಕಾನೂನು ಸಚಿವ ಸುರೇಶ ಕುಮಾರ್, ವಕೀಲರ ಪರಿಷತ್ ಅಧ್ಯಕ್ಷ ಅಬ್ದುಲ್ ರಿಯಾಝ್ ಖಾನ್, ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡಿದ್ದರು. ಸರ್ವಾನುಮತದಿಂದ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಿರ್ಣಯಗಳು:
*ಜಿಲ್ಲಾ ಮತ್ತು ತಾಲ್ಲೂಕ ವಕೀಲರ ಸಂಘಗಳ ರಾಜ್ಯ ಮಟ್ಟದ ಕ್ಕೂಟವನ್ನು ರಚಿಸಿಬೇಕು. ಅದರ ಮುಖಾಂತರ ವಕೀಲರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಒಕ್ಕೂಟಕ್ಕೆ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳನ್ನು ತಾತ್ಕಾಲಿಕ ಪದಾಧಿಕಾರಿಗಳನ್ನಾಗಿ ನೇಮಿಸಲಾಯಿತು.
* ಸುಪ್ರೀಮ್ ಕೋರ್ಟ್ ಪೀಠವನ್ನು ದಕ್ಷಿಣ ಭಾರತದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪಿಸಬೇಕು.
* ಸುಪ್ರೀಮ್ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯೋಮಿತಿಯನ್ನು ಹೆಚ್ಚಿಸಬಾರದು. ಪ್ರಸ್ತುತ ವಯೋಮಿತಿಯನ್ನೇ ಮುಂದುವರೆಸಬೇಕು.
* ಜಿಲ್ಲಾ ಮತ್ತು ತಾಲ್ಲೂಕ ನ್ಯಾಯಲಯಗಳಲ್ಲಿ ವಕೀಲರಿಗಾಗಿ ಸುಸಜ್ಜಿತ ಗ್ರಂಥಾಲಯ, ವಿಶ್ರಾಂತಿ ಕೊಠಡಿ ಮತ್ತು ಇತರ ಮೂಲಭೂತ ಸೌಕರ್ಯಗಳಿಗೆ ಸ್ಥಳಾವಕಾಶ ಒದಗಿಸಿಬೇಕು.
* ಕಾನೂನು ಪದವಿ ಪಡೆದ ತಕ್ಷಣ ಅನಾನುಭವಿಗಳಿಗೆ ಕಿರಿಯ ಶ್ರೇಣಿಯ ನ್ಯಾಯಧೀಶರನ್ನಾಗಿ ನೇಮಕ ಮಾಡಕೂಡದು. ಕನಿಷ್ಠ ೫ ವರ್ಷ ವಕೀಲರ ವೃತ್ತಿಯ ಅನುಭವವನ್ನು ಕಡ್ಡಾಯಗೊಳಿಸಬೇಕು. ಈ ಸಂಬಧ ನಿಯಗಳಲ್ಲಿ ಸೂಕ್ತ ತಿದ್ದುಪಡಿ ತರಬೇಕು.
* ರಾಜ್ಯದ ಎಲ್ಲ ವಕೀಲರ ಸಂಘಗಳಿಗೆ ರಾಜ್ಯ ಸರಕಾರ ನೀಡುವ ವಾರ್ಷಿಕ ಅನುದಾನವನ್ನು ೫ ಪಟ್ಟು ಹೆಚ್ಚಿಸಬೇಕು.
* ಯುವ ವಕೀಲರಿಗೆ ಸರಕಾರ ನೀಡುವ ಮಾಸಿಕ ಭತ್ಯೆಯನ್ನು ಪ್ರತಿ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಗೊಳಿಸಬೇಕು.
* ರಾಷ್ಟ್ರೀಯ ವಕೀಲರ ಪರಿಷತ್ ಕಾಯ್ದೆಗೆ ತಿದ್ದುಪಡಿ ತಂದು ವಕೀಲರ ಸಂಖ್ಯೆಯನ್ನು ಆಧರಿಸಿ ಪ್ರತಿ ಜಿಲ್ಲೆಗೂ ಪರಿಷತ್ತಿನ ಸದಸ್ಯತ್ವಕ್ಕೆ ಸಮಾನ ಪ್ರಾತಿನಿದ್ಯ ನೀಡಬೇಕು.
* ನೊಟರಿ ಕಾಯ್ದೆಯಲ್ಲಿ ತಿದ್ದುಪಡಿ ತಂದು ನೇಮಕಾತಿಯನ್ನು ಹತ್ತು ವರ್ಷಗಳಿಗೆ ಸೀಮಿತಗೊಳಿಸಬೇಕು. ಅಂಗಕಲರು ಸೇರಿದಂತೆ ಬೇರೆ ವಕೀಲರಿಗೆ ಅವಕಾಶ ಒದಗಿಸಬೇಕು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆರ್. ರಾಜಣ್ಣ, ಖಜಾಂಚಿ ಟಿ.ಜಿ. ರವಿ ಉಪಸ್ಥಿತರಿದ್ದರು.