ಬೆಂಗಳೂರು, ಅ.೮: ಸರಕಾರಗಳು ಜಾರಿಗೊಳಿಸುತ್ತಿರುವ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಬಲಿಷ್ಠ ಜನಹೋರಾಟಗಳನ್ನು ಸಂಘಟಿಸಬೇಕಾದ ಅವಶ್ಯಕತೆ ಇದೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದ ರಾಷ್ಟ್ರೀಯ ನಾಯಕ ಕೃಷ್ಣ ಚಕ್ರವರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ಬನ್ನಪ್ಪ ಪಾರ್ಕ್ನಲ್ಲಿ ಎಸ್ಯುಸಿಐ ರಾಜ್ಯ ಸಮಿತಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೊಲಿಸುತ್ತಿರುವ ಜನವಿರೋಧಿ ನೀತಿಗಳನ್ನು ಜನತೆ ತಿರಸ್ಕರಿಸಬೇಕು. ಅಲ್ಲದೆ ಇದನ್ನು ಹಿಮ್ಮೆಟ್ಟಿಸಲು ಬಲಿಷ್ಠ ಜನಹೋರಾಟವನ್ನು ಸಂಘಟಿಸಬೇಕು. ಹೋರಾಟವನ್ನು ವೈಜ್ಞಾನಿಕ ಸಿದ್ಧಾಂತದ ಆಧಾರದ ಮೇಲೆ ರೂಪಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಎಸ್ಯುಸಿಐ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.
ಬರ, ನೆರೆ, ಬೆಲೆ ಏರಿಕೆ ಯಾವುದೆ ಸಮಸ್ಯೆ ಬಂದಾಗ ಆಡಳಿತ ನಡೆಸುವ ಪಕ್ಷವನ್ನು ನಾವು ಗುರಿ ಮಾಡಲೇಬೇಕು. ಇದು ಅನಿವಾರ್ಯ. ಆದರೆ ಕಾಂಗ್ರೆಸ್ ಪಕ್ಷದ ಜನವಿರೋಧಿ ನೀತಿಗಳಿಂದ ಬೇಸತ್ತು, ಜನತಾದಳವನನು ಆಯ್ಕೆ ಮಾಡಿದ್ದಾಯ್ತು. ಯಾವುದೇ ಪ್ರಯೋಜನವಾಗಿಲ್ಲ. ಈ ಎರಡೂ ಪಕ್ಷಗಳನ್ನು ತಿರಸ್ಕರಿಸಿ ಕೇಂದ್ರದಲ್ಲಿ ಎರಡು ಬಾರಿ ಹಾಗೂ ಈಗ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಾಯಿತು. ಈ ಪಕ್ಷಕೂಡ ಜನವಿರೋಧಿ, ರೈತವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ಅಲ್ಲದೆ ಭ್ರಷ್ಟಾಚಾರ, ಗುಂಪುಗಾರಿಕೆ, ಕೋಮುವಾದವೆಂಬ ವಿಷಬೀಜ ಬಿತ್ತುವ ಮೂಲಕ ಜನತೆ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗದಂತೆ ಮಾಡಿದೆ ಎಂದು ಅವರು ದೂರಿದರು.
ಬಿಜೆಪಿ ಸರಕಾರ ರೈತರ ಮೇಲೆ ಗೋಲಿಬಾರ್ ಮಾಡಿ, ಅವರ ಜೀವವನ್ನು ತೆಗೆದುಕೊಂಡಿತು. ಬಿಜೆಪಿ, ಕಾಂಗ್ರೆಸ್ ಹಾಗೂ ಜನತಾದಳ ತಮ್ಮ ಅಧಿಕಾರದ ಅವಧಿಯಲ್ಲಿ ಶಿಕ್ಷಣವನ್ನು ರಸ್ತೆಗಳಲ್ಲಿ ಹರಾಜು ಮಾಡುವಂತಹ ನೀತಿಗಳನ್ನು ಜಾರಿಗೊಳಿಸಿವೆ. ಸಾಮಾನ್ಯ ಜನತೆಯ ಪಾಲಿಗೆ ಸರಕಾರಿ ಆಸ್ಪತ್ರೆಗಳು ನರಕ ಕೂಪಾಗಳಾಗಿದ್ದು, ಇದನ್ನು ತಡೆಯಲು ಆರೋಗ್ಯ ನೀತಿಯನ್ನು ಜಾರಿಗಳಿಸಬೇಕೆಂಬ ಕನಿಷ್ಠ ಸೌಜನ್ಯವೂ ಈ ಮೂರು ಪಕ್ಷಗಳಿಲ್ಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಂಡವಾಳಶಾಹಿಗಳ ಏಜೆಂಟ್ಗಳಂತೆ ಸರಕಾರಗಳು ನಡೆದುಕೊಳ್ಳುತ್ತಿವೆ. ಇದರಿಂದ ರಾಜಕೀಯದ ಬಗ್ಗೆ ಜನತೆಯಲ್ಲಿ ಅಸಹ್ಯ, ತಿರಸ್ಕಾರ ಭಾವನೆ ಮೂಡಿದೆ. ಈ ಸಂದರ್ಭದಲ್ಲಿ ಯುವಜನಾಂಗವನ್ನು ಒಳಗೊಂಡ ಬೃಹತ್ ಕಾರ್ಯರ್ತರ ಪಡೆಯೊಂದಿಗೆ ಸಂಸತ್ತಿನಲ್ಲಿ ಅಲ್ಲದಿದ್ದರೂ, ವಾಸ್ತವದಲ್ಲಿ ಬೃಹತ್ ರಾಷ್ಟ್ರೀಯ ಪಕ್ಷವಾಗಿ ಎಸ್ಯುಸಿಐ ಸಾಮಾನ್ಯ ಜನತೆಯ ಹಿತ ಕಾಪಾಡಲು ನಿರಂತರ ಹೋರಾಟ ನಡೆಸುತ್ತಿದೆ ಎಂದು ಅವರು ವಿವರಿಸಿದರು.
ಎಸ್ಯುಸಿಐನ ಎರಡನೆ ಮಹಾಧಿವೇಶ ನವೆಂಬರ್ ೭ರಿಂದ ೧೭ರವರೆಗೆ ನವದೆಹಲಿಯಲ್ಲಿ ನಡೆಯಲಿದೆ. ಈ ಮಹಾಧಿವೇಶನದೊಳಗೆ ಪಕ್ಷವನ್ನು ಸಂಘಟಿಸುವ ಸಲುವಾಗಿ ಎಲ್ಲ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಹಾಗೂ ಸ್ಥಳೀಯ ಮಟ್ಟದಲ್ಲಿ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಬೇಡಿಕೆಗಳನ್ನು ಒಳಗೊಂಡ ವಿಶೇಷ ಗೊತ್ತ್ತುವಳಿ ಮಂಡಣೆ: ಸಭೆ ಪ್ರಾರಂಭವಾಗುತ್ತಿದ್ದಂತೆ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ನೆರೆ ಹಾವಳಿಯಿಂದ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಂತಾಪ ಸೂಚಿಸಿದರು. ನಂತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಎಸ್ಯುಸಿಐನ ರಾಜ್ಯ ಕಾರ್ಯದರ್ಶಿ ಕೆ.ರಾಧಾಕೃಷ್ಣ ಮಾತನಾಡಿ, ರಾಜ್ಯ ಸರಕಾರ ನೆರೆಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ಶೀಘ್ರ ಗತಿಯಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನೆರೆಪೀಡಿತ ಜಿಲ್ಲೆಗಳಲ್ಲಿ ಸಾಲ ಹಾಗೂ ತೆರೆಗೆ ಮನ್ನ ಮಾಡಬೇಕು. ತುರ್ತು ವೈದ್ಯಕೀಯ ನೆರವನ್ನು ಕಲ್ಪಿಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಹಾಗೂ ಪರಿಹಾರ ಕಾರ್ಯಗಳಲ್ಲಿ ಭ್ರಷ್ಟಾಚಾರ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂಬ ವಿಶೇಷ ಬೇಡಿಕೆಗಳನ್ನು ಮಂಡಿಸಿದರು.
ಸಭೆಯಲ್ಲಿ ಮಂಡಿಸಿದ ಬೇಡಿಕೆಗಳು: ಸಮ್ಮೇಳನದಲ್ಲಿ ರೈತರ ಮೂಲಭೂತ ಅಗತ್ಯಗಳಾದ ವಿದ್ಯುತ್, ನೀರು, ರಸಗೊಬ್ಬರ, ಕೀಟನಾಶಕಗಳು ದುಬಾರಿಯಾಗಬಾರದು. ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಂಬಲ ಬೆಲೆ ಸಿಗಬೇಕು. ಅಗತ್ಯ ವಸ್ತುಗಳ ಬಲೆ ಏರಿಕೆಗೆ ಕಡಿವಾಣ ಹಾಕಬೇಕು. ಸರ್ವರಿಗೂ ಶಿಕ್ಷಣ, ಆರೋಗ್ಯ, ಉದ್ಯೋಗ ದೊರೆಯುವಂತಾಗಬೇಕು. ಜಾಗತೀಕರಣ, ಉದಾರೀಕರಣ, ಖಾಸUಕರಣ ನೀತಿಗಳನ್ನು ಕೈಬಿಡಬೇಕು. ಜಾತಿವಾದ, ಕೋಮುವಾದಗಳಂಥ ವಿಭಜಕ ಪ್ರವೃತ್ತಿಗಳನ್ನು ಮಟ್ಟಹಾಕಬೇಕು ಎಂಬ ಬೇಡಿಕೆಗಳನ್ನು ರಾಧಾಕೃಷ್ಣ ಮಂಡಿಸಿದರು.
ಸಮ್ಮೇಳನದಲ್ಲಿ ಎಸ್ಯುಸಿಐನ ರಾಜ್ಯ ಸಮಿತಿ ಸದಸಯ ಡಾ.ಬಿ.ಆರ್.ಮಂಜುನಾಥ್, ಕೆ.ಉಮಾ, ಎಚ್.ಜಿ.ಜಯಲಕ್ಷ್ಮಿ ಮುಂತಾದವರು ಭಾಗವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಮಂದಿ ಎಸ್ಯುಸಿಐ ಸದಸ್ಯರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಸಮ್ಮೇಳನದ ಬಹಿರಂಗ ಸಭೆ ಪ್ರಾರಂಭವಾಗುವುದಕ್ಕೂ ಮೊದಲು ಎಸ್ಯುಸಿಐನ ಎಲ್ಲ ಸದಸ್ಯರು ನಗರದ ಚಿಕ್ಕ ಲಾಲ್ಬಾಗ್ನಿಂದ ಬನ್ನಪ್ಪಪಾರ್ಕ್ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು