ಬೆಂಗಳೂರು, ಫೆ.೧೭: ರಾಜ್ಯ ಬಿಜೆಪಿ ಸರಕಾರ ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿರುವ ‘ಗೋಹತ್ಯಾ ನಿಷೇಧ ತಿದ್ದುಪಡಿ ಮಸೂದೆ-೨೦೧೦’ ಕಾಯ್ದೆಯು ಸಂಘ ಪರಿವಾದ ಗುಪ್ತ ಕಾರ್ಯಸೂಚಿ ಜಾರಿಗೊಳಿಸು ವಿಕೆಯ ಭಾಗವಾಗಿದೆ ಎಂಬ ಅಭಿಪ್ರಾಯ ಇಂದು ನಡೆದ ‘ದುಂಡು ಮೇಜಿನ ಸಭೆಯಲ್ಲಿ’ ವ್ಯಕ್ತವಾಗಿದೆ.
ಅನೇಕ ಮಾನವ ಹಕ್ಕು ಹೋರಾಟ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತ ವೇದಿಕೆ ಯಾಗಿರುವ ‘ನಾಗರಿಕ ರಂಗ’ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ‘ಗೋಹತ್ಯೆ ನಿಷೇಧ ಕಾಯ್ದೆ-ಆಹಾರ ಸಂಸ್ಕೃತಿ ರಕ್ಷಣೆ’ ಎಂಬ ವಿಷಯದಲ್ಲಿ ದುಂಡು ಮೇಜಿನ ಸಭೆ ಏರ್ಪಡಿಸಿತ್ತು. ಹಲವಾರು ಪ್ರಗತಿಪರ ಚಳುವಳಿಯ ಮುಖಂಡರು, ರಾಜ ಕೀಯ, ಸಾಮಾಜಿಕ ಸಂಘಟನೆಗಳ ಪ್ರಮುಖರು ಈ ಸಭೆಯಲ್ಲಿ ಮಾತನಾಡಿದರು.
ರಾಜ್ಯಾಂಗದ ನಿರ್ದೇಶಕ ತತ್ವಗಳು, ೧೯೬೪ರ ಗೋಹತ್ಯೆ ನಿಷೇಧ ಕಾಯ್ದೆ, ರಾಜ್ಯ ಸರಕಾರದ ಉದ್ದೇಶಿತ ತಿದ್ದುಪಡಿಗಳು, ಈ ಕಾಯ್ದೆ ಜಾರಿಯಿಂದ ಆರ್ಥಿಕ, ಆಹಾರದ ಹಕ್ಕಿನ ಹಾಗೂ ಬಹು ಸಂಸ್ಕೃ ತಿಯ ಮೇಲಾಗುವ ಪರಿಣಾಮಗಳು. ಈ ಕಾಯ್ದೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ ನಡೆಎಯುತ್ತಿರುವ ಸಮತೋಲದ ಮತ್ತು ಭಾವನಾತ್ಮಕ ಚರ್ಚೆಗಳು ಹಾಗೂ ಒಟ್ಟು ಸಾಧಕ-ಬಾಧಕಗಳ ಸಮಗ್ರ ಪರಾ ಮರ್ಶೆ. ಮುಂದಿನ ಹೋರಾಟದ ಆಯಾಮಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
*ಜಿ.ವಿ. ಶ್ರೀರಾಮ ರೆಡ್ಡಿ, ಸಿಪಿಎಂ ರಾಜ್ಯ ಮುಖಂಡರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಸಂಘಪರಿವಾರದ ‘ಗುಪ್ತ ಕಾರ್ಯ ಸೂಚಿ’ ಜಾರಿಗೊಳಿಸುವ ಅನೇಕ ಪ್ರಯತ್ನಗಳನ್ನು ಮಾಡಿದೆ. ಈ ಕಾಯ್ದೆ ಅದರ ಒಂದು ಭಾಗ. ಪ್ರಸ್ತುತ ಮಸೊದೆಯಲ್ಲಿ ಗೋಹತ್ಯೆ ನಿಷೇಧ ಎಂಬ ಅಂಶವನ್ನು ಅತ್ಯಂತ ಬುದಿವಂತಿಕೆಯಿಂದ ಪರೋಕ್ಷವಾಗಿ ಪ್ರಸ್ತಾಪಿಸಿದೆ ಎಂದು ಸಿಪಿಎಂ ಮುಖಂಡ ಶ್ರೀರಾಮ ರೆಡ್ಡಿ ಹೇಳಿದರು.
ಸಂವಿಧಾನದ ಆಶಯ ಹಾಗೂ ೧೯೬೪ರ ಶಾಸನ ದಂತೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾ ಗುತ್ತಿದೆ ಎಂದು ಹೇಳುತ್ತಿರುವ ಬಿಜೆಪಿ, ಸಂವಿಧಾನದ ಆಶಯದ ಮೂಲ ಅರ್ಥವನ್ನು ವಿರೂಪಗೊಳಿಸಿ ಇತರೆ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರಿಗೆ ದಿಕ್ಕು ತಪ್ಪಿಸುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿರುವ ಯಾವ ರಾಜ್ಯದಲ್ಲೂ ಇರದ ಅನಾಹುತಕಾರಿ ಅಂಶಗಳು ರಾಜ್ಯದ ತಿದ್ದಪಡಿ ಮಸೂದೆಯಲ್ಲಿ ಸೇರಿಸಲಾಗಿದೆ. ಇದರ ಹಿಂದೆ ಬಿಜೆಪಿ ಮತ್ತು ಸಂಘಪರಿವಾರದ ಪಿತೂರಿ ಅಡಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ಹಿತಾಸಕ್ತಿಗಾಗಿ ಈ ಕಾಯ್ದೆ ಜಾರಿಗೆ ಮುಂದಾಗಿರುವ ಬಿಜೆಪಿ, ನಾಡಿನ ಗ್ರಾಮೀಣ ಆರ್ಥಕ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಹೊರಟಿದೆ. ಮನುಷ್ಯನ ತೀರಾ ವೈಯುಕ್ತಿಕ ಸ್ವಾತಂತ್ರವಾಗಿರುವ ಆಹಾರ ಪದ್ದತಿಯ ಆಯ್ಕೆಯಲ್ಲಿ ಹಸ್ತಕ್ಷೇಪ ಸಾಂಸ್ಕೃತಿಕ ದಬ್ಬಾಳಿಕೆ, ಸಾಮಾಜಿಕ ವ್ಯವಸ್ಥೆಯನ್ನು ಅಸ್ಥಿರಗೊಳಿ ಸುವ ಹುನ್ನಾರ ಬಿಜೆಪಿ ಹೊಂದಿದೆ. ಸರಕಾರದ ಈ ಫ್ಯಾಸಿಷ್ಟ್ ಧೋರಣೆಯನ್ನು ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿಬೇಕು ಎಂದು ಅವರು ಹೇಳಿದರು.
* ಸಿದ್ದನಗೌಡ ಪಾಟೀಲ್, ಸಿಪಿಐ ರಾಜ್ಯ ಕಾರ್ಯದರ್ಶಿ: ನಿರಂತರ ವಿದ್ಯುತ್, ಬೆಲೆ ಏರಿಕೆ ನಿಯಂತ್ರಣ, ಸಂತ್ರಸ್ತರಿಗೆ ಪರಿಹಾರ, ಹದೆಗೆಟ್ಟಿರುವ ಕಾನೂನು ಸುವ್ಯವಸ್ಥೆ ಇತ್ಯಾದಿ ರಾಜ್ಯ ಎದುರಿಸುತ್ತಿ ರುವ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಸಂಪೂರ್ಣ ವಿಫಲವಾಗಿರುವ ಸರಕಾರ, ತನ್ನ ಲೋಪಗಳನ್ನು ಮರೆ ಮಾಚಲು ಈ ವಿಷಯದ ಬಗ್ಗೆ ಒಂದು ಧಾರ್ಮಿಕ ಹಿನ್ನೆಲಯ ಭಾವನಾತ್ಮಕ ಚರ್ಚೆಯನ್ನು ಹುಟ್ಟು ಹಾಕಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ್ ಹೇಳಿದರು.
ಈ ಕಾಯ್ದೆ ಜಾರಿಗೊಳಿಸುವ ಮೂಲಕ ಬಿಜೆಪಿ ಈ ರಾಜ್ಯದ ಸಾಮಾಜಿಕ ಮತ್ತು ರಾಜ್ಯಕೀಯ ವ್ಯವಸ್ಥೆಯನ್ನು ಕಲುಷಿತಗೊಳಿಸಲು ಹೊರಟಿದೆ. ಸಂಘಪರಿವಾರದ ಆಲೋಚನೆಗಳನ್ನು ಮುಖ್ಯಮಂತ್ರಿ ಜಾರಿಗೊಳಿಸುತ್ತಿದ್ದಾರೆ. ಕಾಯ್ದೆಯಲ್ಲಿ ತಿದ್ದುಪಡಿ ತರುವ ಮೂಲಕ ನಿರುದ್ಯೋಗಿ ಭಜರಂಗದ ದಳದ ಪುಂಡರಿಗೆ ಕೆಲಸಕೊಡಿಸುವ ಕುತಂತ್ರ ಸರಕಾರ ಹೊಂದಿದೆ. ಸಮಾಜದಲ್ಲಿ ಕ್ಷೋಭೆ ಹರಡಿ ಅದರ ರಾಜಕೀಯ ಲಾಭ ಪಡೆದುಕೊಳ್ಳುವ ನೀಚ ಉದ್ದೇಶ ಕೋಮುವಾದಿ ಬಿಜೆಪಿ ಹೊಂದಿದೆ. ಗೋವಿನ ಮೇಲಿನ ಗೌರವ ಅಥವಾ ಪೂಜ್ಯ ಭಾವನೆಯಿಂದ ಈ ಕಾಯ್ದೆ ಜಾರಿಗೊಳಿಸುತ್ತಿಲ್ಲ. ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರ ಇದರ ಹಿಂದೆ ಇದೆ ಎಂದು ಅವರು ಕಿಡಿ ಕಾರಿದರು.
ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಪಕ್ಷ ಈ ಕಾಯ್ದೆ ಜಾರಿಯಾಗದಂತೆ ತಡೆಯುವಲ್ಲಿ ಪ್ರಾಮಾಣಿಕತೆ ಹಾಗೂ ಬದ್ದತೆ ಪ್ರದರ್ಶಿಸುತ್ತದೆ ಎಂಬ ನಂಬಿಕೆ ನನಗಿಲ್ಲ. ಈ ಹಿನ್ನಲೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ಉಂಟಾಗಲಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪರ್ಯಾಯ ವ್ಯವಸ್ಥೆ, ಗೋಶಾಲೆಗಳ ದುಸ್ಥಿತಿ, ಇದರ ಹೆಸರಲ್ಲಿ ಮಠಗಳು ಪಡೆಯುತ್ತಿರುವ ಕೋಟ್ಯಾಂತರ ರೂ. ಹಣ ಇತ್ಯಾದಿ ವಿಷಯಗಳು ಜನರ ಮಧ್ಯೆ ಚರ್ಚೆಯಾಗುವಂತೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
*ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕ, ದಸಂಸ(ಅಂಬೇಡ್ಕರವಾದ): ಬಿಜೆಪಿಯ ಈ ಏಜೆಂಡ ಬಹಳ ಹಿಂದಿನದು, ಈ ಹಿಂದೆ ಶಾಲೆಗಳಲ್ಲಿ ಮೊಟ್ಟೆಗಳನ್ನು ನೀಡುವುದಕ್ಕೆ ವಿರೋಧ. ಮುಂದುವರೆದು ಈರುಳ್ಳಿ-ಬೆಳ್ಳುಳ್ಳಿ ಮೇಲೆ ನಿರ್ಬಂಧ ಹೇರಲು ಹೊರಟ್ಟಿದ್ದನ್ನು ದಸಂಸ ಮುಖಂಡ ಮಾವಳ್ಳಿ ಶಂಕರ್ ಸಭೆಗೆ ನೆನಪಿಸಿಕೊಟ್ಟರು.
ಸಂವಿಧಾನ ಆಶಯ ಮತ್ತು ಇಲ್ಲಿನ ಬಹುತ್ವದ ಅರ್ಥವ್ಯಾಪ್ತಿಯನ್ನು ವಿರೂಪಗೊಳಿಸಿ ಸರಕಾರ ಇಂತಹ ಮನುಷ್ಯ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಹೊರಟಿದೆ. ಇದರ ಹೆಸರಲ್ಲಿ ‘ಪುಂಡಾಟಿಕೆ’ ನಡೆಸುವವರನ್ನು ‘ದನಕ್ಕೆ’ ಬಡಿಯುವ ಹಾಗೆ ಹಾದಿ-ಬೀದಿಯಲ್ಲಿ ಅಟ್ಟಾಡಿಸಿ ಹೊಡೆಯಲು ದಲಿತರು, ಅಲ್ಪಸಂಖ್ಯಾತರು ಮುಂದಾಗಬೇಕಾಗುತ್ತದೆ ಎಂದು ಸಂಘಪರಿವಾರದ ದುಷ್ಟ ಬಾಲಂಗೋಚಿ ಪಡೆಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಪರಾಂಪರಗತವಾಗಿ ಮಾಂಸಹಾರ ಆಹಾರ ಪದ್ದತಿಯನ್ನು ಅನುಸರಿಸಿಕೊಂಡು ಬಂದಿರುವ ಅನೇಕ ಶಾಸಕರು ಮತ್ತು ಸಚಿವರು ಬಿಜೆಪಿ ಸರಕಾರದಲ್ಲಿದ್ದಾರೆ. ಅವರ ಸಮ್ಮುಖದಲ್ಲಿ ಇಂತಹ ದಲಿತ ವಿರೋಧಿ ನಿರ್ಣಯಗಳಾಗುತ್ತಿರುವುದು ವಿಷಾದದ ಸಂಗತಿ. ಕೇವಲ ರಾಜಕೀಯ ಲಾಭಕ್ಕಾಗಿ ಸಮಾಜದ ಹಿತವನ್ನು ಅವರು ಬಲಿಕೊಡುತ್ತಿದ್ದಾರೆ ಎಂದು ಮಾವಳ್ಳಿ ಹೇಳಿದರು.
*ಪ್ರೊ.ಎನ್.ವಿ. ನರಸಿಂಹಯ್ಯ, ಅಹಿಂದ ಮುಖಂಡ: ಈ ಕಾಯ್ದೆ ಜಾರಿಗೊಳಿಸಲು ಹೊರಟ ವರು, ಹಸು ಸಾಕಿದವರಲ್ಲ, ಗಂಜಳ ಎತ್ತಿದವರಲ್ಲ, ಸೆಗಣಿ ಬಾರಿಸಿದವರಲ್ಲ, ಹಾಲು ಕರೆದವರಲ್ಲ ಅಂಥವರು ಗೋವಿನ ಬಗ್ಗೆ ಗೌರವ ತೋರಿಸಲು ಹೊರಟಿದ್ದಾರೆ ಎಂದು ಅಹಿಂದ ಮುಖಂಡ ಪ್ರೊ.ಎನ್.ವಿ. ನರಸಿಂಹಯ್ಯ ವ್ಯಂಗವಾಡಿದ್ದಾರೆ.
ರಾಜ್ಯ ಸರಕಾರ ಈ ಕಾಯ್ದೆ ಜಾರಿಗೊಳಿಸಲು ಹೊರಟಿರುವುದು ಮೂರ್ಖತನದ ಪರಮಾವಧಿ. ಇಡಿ ಕರ್ನಾಟಕವನ್ನು ಗೋಶಾಲೆ ಮಾಡಲು ಹೊರಟಿದೆ. ಆಹಾರದ ಹಕ್ಕಿನ ಮೇಲೆ ಕಡಿವಾಣ ಮತ್ತು ಸಂಸ್ಕೃತಿಕ ದಬ್ಬಾಳಿಕೆ ಮಾಡಲು ಹೊರಟಿದೆ ಎಂದು ಅವರು ಕಿಡಿ ಕಾರಿದರು.
* ಎಂ. ವೆಂಕಟ್‌ಸ್ವಾಮಿ, ಅಧ್ಯಕ್ಷರು, ಸಮತಾ ಸೈನಿಕ ದಳ: ಈ ವಿಷಯದಲ್ಲಿ ರಾಜ್ಯಪಾಲರ ನಿಲವು. ಕಾಂಗ್ರೆಸ್ ಪಕ್ಷದ ಮೃದು ದೋರಣೆ ಹಾಗೂ ಬೇಜವಾಬ್ದಾರಿತನದ ನಡುವಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸದನದಲ್ಲಿ ಇವರು ಪ್ರಬಲವಾಗಿ ವಿರೋಧಿಸುವುದಿಲ್ಲ. ಕಾಯ್ದೆ ಜಾರಿಯಾಗುವುದು ಖಚಿತ ಎಂದು ಎಸ್‌ಎಸ್‌ಡಿ ಅಧ್ಯಕ್ಷ ಎಂ. ವೆಂಕಟ್ ಸ್ವಾಮಿ ಆತಂಕ ವ್ಯಕ್ತ ಪಡಿಸಿದ್ದಾರೆ.
ಈ ಹಿಂದಿನ ಎಲ್ಲ ‘ಗುಪ್ತ ಕಾರ್ಯಸೂಚಿಗಳಿಗೆ’ ನಮ್ಮಿಂದ ಪ್ರಬಲ ವಿರೋಧ ವ್ಯಕ್ತವಾಗಿದ್ದರೆ ಇಂದು ಬಿಜೆಪಿ ಈ ಧೈರ್ಯ ಬರುತ್ತಿರಲಿಲ್ಲ. ಈ ಕಾಯ್ದೆಯಿಂದ ಪರಿಸ್ಥಿತಿಯನ್ನು ಹದಗೆಡಿಸಿ ಇದರ ದುರ್ಲಾಭ ಪಡೆದುಕೊಳ್ಳುವ ನೀಚ ಉದ್ದೇಶ ಬಿಜೆಪಿ ಹೊಂದಿದೆ. ರಾಜಕೀಯ ಪಕ್ಷಗಳನ್ನು ಅವಲಂಬಿಸಿದೆ ನಾಗರಿಕ ರಂಗ ಸ್ವತಂತ್ರ ನೆಲೆಯಲ್ಲಿ ಹೋರಾಟ ರೂಪಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ನಾಗರಿಕ ರಂಗದ ಕೆ.ಪ್ರಕಾಶ್, ಕರ್ನಾಟಕ ಪ್ರಾಂತ ರೈತ ಸಂಘದ ಮಾರುತಿ ಮಾನ್ಪಡೆ, ಟಿಯುಎಫ್ ರಾಜ್ಯಾಧ್ಯಕ್ಷ ಸರ್ದಾರ್ ಅಹ್ಮದ್ ಖುರೇಶಿ, ಪಿವಿಸಿಯ ಪಟಾಪಟ್ ನಾಗಾರಜ್, ಮುತ್ತಹಿದಾ ಮಹಾಝ್‌ನ ಮಹ್ಮದ್ ಇಕ್ಬಾಲ್, ಐಎನ್‌ಎಲ್‌ನ ಅಸ್ಗರ್ ರಫಿಯುದ್ದೀನ್ ಮುಂತಾದವರು ಉಪಸ್ಥಿತರಿದ್ದರು.