ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಎಸ್.ಐ.ಓ ವಸ್ತು ಪ್ರದರ್ಶನ ಉದ್ಘಾಟನೆ

ಎಸ್.ಐ.ಓ ವಸ್ತು ಪ್ರದರ್ಶನ ಉದ್ಘಾಟನೆ

Sat, 06 Mar 2010 04:10:00  Office Staff   S.O. News Service

ಭಟ್ಕಳ:೫, ಸಾಲ್ವೇಶನ್ ಅಂಧಕಾರದಿಂದ  ಪ್ರಕಾಶದೆಡೆಗೆ ಎಂಬ ಘೋಷಣೆಯೊಂದಿಗೆ ಇಂದಿನಿಂದ ಮೂರುದಿಗಳ ಕಾಲ ನಡೆಯುವ ವಸ್ತು ಪ್ರದರ್ಶನ ಹಾಗೂ  ಸಮ್ಮೇಳವನ್ನು ಎಸ್.ಐ ಓ ರಾಜ್ಯ ಘಟಕದ ಅಧ್ಯಕ್ಷ ಶೌಕತ್ ಅಲಿ ಕೆ. ಕುರ‍್ಆನ್  ಸೂಕ್ತಗಳನ್ನು ಪಠಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಹಾಗೂ ಸಮಾಜದಲ್ಲಿ ಬೇರು ಬಿಟ್ಟಿರುವ ಕಂದಚಾರ, ಮೂಢನಂಬಿಕೆಗಳನ್ನು ಇಸ್ಲಾಮಿ ದೃಷ್ಟಾಂತಗಳ ಮೂಲಕ ವಸ್ತುಪ್ರದರ್ಶನದಲ್ಲಿ ತಿಳಿಸಲು ಪ್ರಯತ್ನಿಸಲಾಗಿದೆ. ಸಮಾಜದಲ್ಲಿ ತಾಂಡವವಾಡುತ್ತಿರು ಭ್ರಷ್ಟಚಾರ, ವರದಕ್ಷಿಣೆ, ಆಶ್ಲಿಲತೆ, ವೈಭಿಚಾರ, ಕೋಮುವಾದ, ಡೊನೆಷನ್ ಹಾವಳಿ ಮುಂತಾದ ಅನೇಕ ಸಮಸ್ಯೆಗಳಿಗೆ ಇಸ್ಲಾಮ್ ಧರ್ಮವು ಸೂಚಿಸುವ ಪರಿಹಾರವನ್ನು ಮಾದರಿ(ಮಾಡೆಲ್ಸ್) ಹಾಗೂ ಚಿತ್ರಪಟಗಳ ಮೂಲಕ ತೋರಿಸುವ ಪ್ರಯತ್ನವನ್ನು ಮಾಡಲಾಗಿದೆ  ಎಂದರು. ಉದ್ಘಾಟನಾ ಕಾಯಕ್ರಮದಲ್ಲಿ ಪೀಸ್ ಟಿ.ವಿ ಉರ್ದುವಿನ ಕಾರ್ಯಕ್ರಮ ನಿರ್ವಾಹಕ ಶೇಖ್ ಸನಾವುಲ್ಲಾ ಮದನಿ, ಜಮಾಆತೆ ಇಸ್ಲಾಮಿ ಹಿಂದ್ ಕರ್ನಾಟಕ ಮತ್ತು ಗೋವಾ ಘಟಕದ ಪ್ರಧಾನ ಕಾರ್ಯದರ್ಶಿ ಅಥರುಲ್ಲಾ ಷರೀಫ್, ಭಟ್ಕಳ ಜಮಾತುಲ್ ಮುಸ್ಲಿಮೀನ್ ಖಾಝಿ ಮೌಲಾನ ಮುಲ್ಲಾ ಇಖ್ಬಾಲ್ ನದ್ವಿ, ಕರಿಕಾಲ್ ಚರ್ಚ್‌ನ ಫಾದರ‍್ ಅಂಥೋನಿ ಲೂಪಿಸ್, ಅಂಜುಮನ್ ಕಾರ್ಯದರ್ಶಿ ಎಸ್.ಎಮ. ಸೈಯದ್ಯ ಅಬ್ದುಲ್ ಅಝೀಮ್ ,ತಂಝೀಮ್ ಅಧ್ಯಕ್ಷ ಡಾ.ಬದ್ರುಲ್ ಹಸನ್ ಮುಅಲ್ಲಿಮ್,ಸೈಯ್ಯದ್ ಹಸನ್ ಬರ್ಮಾವರ‍್,ಇಖ್ಬಾಲ್ ಇಕ್ಕೇರಿ, ಮೌಲಾನ ಸೈಯ್ಯದ್ ಝುಬೇರ‍್,  ಎಸ್.ಐ.ಓ ಪಶ್ಚಿಮ ವಲಯ ಅಧ್ಯಕ್ಷ ಸೈಯ್ಯದ್ ಅಶ್ಫಾಖ್ ಅಹಮದ್ ಸೇರಿದಂತೆ ನಗರದ  ಗಣ್ಯವ್ಯಕ್ತಿಗಳು ಈ ಸಂದರ್ಭದಲ್ಲಿ ಹಾಜರಿದ್ದು ವಸ್ತುಪ್ರದರ್ಶವನ್ನು ವೀಕ್ಷಿಸಿದರು ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಸೈಯದ್ ಖುತುಬ್ ಬರ್ಮಾವರ‍್ ಕಾರ್ಯಕ್ರಮವನ್ನು ನಿರೂಪಿ ಧನ್ಯವಾದವಿತ್ತರು. 


Share: