ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಸರ್ಕಾರದಿಂದ ವಿಶೇಷ ಯೋಜನೆಗಳಿಗೆ ಬಿಡುಗಡೆಯಾದ ಹಣ ಎಲ್ಲಿ ಹೋಯ್ತು?-ನ್ಯಾ. ಸಂತೋಷ್ ಹೆಗಡೆ ಪ್ರಶ್ನೆ

ಬೆಂಗಳೂರು: ಸರ್ಕಾರದಿಂದ ವಿಶೇಷ ಯೋಜನೆಗಳಿಗೆ ಬಿಡುಗಡೆಯಾದ ಹಣ ಎಲ್ಲಿ ಹೋಯ್ತು?-ನ್ಯಾ. ಸಂತೋಷ್ ಹೆಗಡೆ ಪ್ರಶ್ನೆ

Tue, 01 Dec 2009 02:56:00  Office Staff   S.O. News Service
‘ಆಮ್ ಆದ್ಮಿ ’ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ
ನೂರಾರು ಯೋಜನೆ ಜಾರಿಗೆ ತಂದಿದ್ದರೂ ಬಡವರ ಉದ್ಧಾರ
ಇದುವರೆಗೆ ಆಗಿಲ್ಲ.
 
ಈ ಬಗ್ಗೆ ಕೇಂದ್ರದ ಮೇಲೆ ರಾಜ್ಯ, ರಾಜ್ಯದ ಮೇಲೆ ಕೇಂದ್ರ
ಗೂಬೆ ಕೂರಿಸು ವುದು ಸಾಮಾನ್ಯ. ಹಾಗಂತ ಯಾರೂ ಸುಭಗರಲ್ಲ.
ಇಬ್ಬರೂ ಅವರವರ ಮಟ್ಟದಲ್ಲಿ ಕೊಳ್ಳೆ ಹೊಡೆಯುವವರೇ. ಈ
ರೀತಿ ವಿಶೇಷ ಯೋಜನೆಗಳಿಗೆ ಬಿಡು ಗಡೆಯಾದ ಹಣ ಎಲ್ಲಿ
ಹೋಯ್ತು ? ನಿಜವಾಗಿಯೂ ಇದು ಬಡವರ ಕೈ ಸೇರಿದೆಯೇ ?
ಇಲ್ಲವಾದರೆ ಪೋಲಾದ ಹಣಕ್ಕೆ ಲೆಕ್ಕವಿದೆಯೇ ?
 
ಊಹೂಂ... ಇಲ್ಲ ಎಂದು, ಕೇಂದ್ರ, ರಾಜ್ಯ ಸರಕಾರಗಳು ಕೈ
ತೊಳೆದುಕೊಳ್ಳ ಬಹುದು. ಇದಕ್ಕೆ ಈ ವರ್ಷದ ಮಧ್ಯ ಭಾಗದಲ್ಲಿ
ಕೇಂದ್ರ ನಡೆದುಕೊಂಡ ರೀತಿಯೇ ಸಾಕ್ಷಿ. ಸರ್ವಶಿಕ್ಷಾ ಅಭಿಯಾನ,
ಮಧ್ಯಾಹ್ನದ ಬಿಸಿ ಊಟ, ಭಾರತ್ ನಿರ್ಮಾಣ್, ರಾಷ್ಟ್ರೀಯ
ಉದ್ಯೋಗ ಖಾತ್ರಿ ಮತ್ತಿತರ ೮ ಯೋಜನೆಗಳಲ್ಲಿ ೫೧ ಸಾವಿರ ಕೋಟಿ
ರೂ.ಗಳ ಲೆಕ್ಕ ಸಿಕ್ಕಿಲ್ಲ ಎಂದು ಸಿ‌ಎಜಿ ವರದಿ ನೀಡಿತ್ತು. ಆದರೆ, ಕೇಂದ್ರ
ಸರಕಾರ ಈ ಬಗ್ಗೆ ಯಾವುದೇ ತನಿಖೆ ನಡೆಸದೆ ಮಗುಮ್ಮಾಗಿದೆ.
ಅದೇ ರೀತಿ ನೂರಾರು ಕೋಟಿ ರೂ. ರಾಜ್ಯಗಳಿಗೂ
ರವಾನೆಯಾಗಿದೆ. ಜತೆಗೆ ರಾಜ್ಯದಲ್ಲೂ ವಿಶೇಷ ಯೋಜನೆಗಳು
ಜಾರಿಯಾಗಿವೆ. ಇದಕ್ಕೆ ಕರ್ನಾಟಕ ಸರಕಾರವೂ ಹೊರತಲ್ಲ.
ಲೋಕಾಯುಕ್ತ ಸಂಸ್ಥೆಯತ್ತ ಒಂದು ಸುತ್ತು ಹಾಕಿ ಬಂದರೆ ಈ
ವಿಶೇಷ ಯೋಜನೆಗಳ ಅಡಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ
ದೂರಿನ ಮಹಾಪೂರವೇ ಕಾಣಬಹುದು. ಹೀಗಾಗಿ, ಜನ
ಸಾಮಾನ್ಯರ ಪಾಡು ‘ಏಳು ಕೊಂಡಲವಾಡ ವೆಂಕಟರಮಣಾ
ಗೋವಿಂದ ಗೋವಿಂದಾ....!’
 
ಆದರೆ, ಬಡವರಿಗಾಗಿ ಸರಕಾರ ಜಾರಿಗೆ ತಂದಿರುವ
ಯೋಜನೆಗಳಲ್ಲಿ ಎಷ್ಟು ಹಣ ಬಳಕೆಯಾಗಿದೆ. ಒಂದೊಮ್ಮೆ
ಪೋಲಾಗಿದ್ದರೆ ಅದು ಎಲ್ಲಿ ಹೋಯ್ತು ? ಎಂಬ ಲೆಕ್ಕ ಕೇಳಲು
ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ನಿರ್ಧರಿಸಿದ್ದಾರೆ.
ಯಾಕೆ ಕೇಳಬೇಕು ? : ಈ ಯೋಜನೆ ಗಳಿಗೆ ಸಂಬಂಸಿದ
ಸಚಿವರಿಗೆ ಲೆಕ್ಕಾಚಾ ರದ ಅಸೈನ್‌ಮೆಂಟ್ ನೀಡುವ ಯೋಚನೆ
ಲೋಕಾಯುಕ್ತರಿಗೆ ಹೊಳೆ ದಿದ್ದು ಅಚಾನಕ್ ಆಗಿ. ಕಳೆದ ಸಾಲಿನಲ್ಲಿ
ಸಿ‌ಎಜಿ ಪ್ರಕಟಿಸಿದ ವರದಿಯಲ್ಲಿ ಕೇಂದ್ರ ಆರಂಭಿಸಿದ ೮
ಯೋಜನೆಗಳಲ್ಲಿ ೫೧ ಸಾವಿರ ಕೋಟಿ ರೂ. ಲೆಕ್ಕಕ್ಕೆ ಸಿಕ್ಕಿಲ್ಲ ಎಂಬ
ವರದಿ ಮಾಧ್ಯಮದಲ್ಲಿ ಪ್ರಕಟವಾ ಗಿತ್ತು. ಅದೇ ರೀತಿ ರಾಜ್ಯ ಹಾಗೂ
ಕೇಂದ್ರದ ಸಹಕಾರದೊಂದಿಗೆ ಆರಂಭಿ ಸಿರುವ ಲೆಕ್ಕವಿಲ್ಲದಷ್ಟು
ಯೋಜನೆಗಳಿವೆ.
 
ಇವುಗಳಲ್ಲಿ ಅವ್ಯವಹಾರ ಆಗದಿರಲು ಸಾಧ್ಯವೇ ? ಎಂದು
ಯೋಚಿಸಿದ ಲೋಕಾ ಯುಕ್ತರು ಸರಕಾರದಿಂದ ಲೆಕ್ಕ ಕೇಳಲು
ನಿರ್ಧರಿಸಿದ್ದಾರೆ. ಕೇಂದ್ರದ ಯೋಜನೆಗಳ ಜತೆಗೆ ಸಂಧ್ಯಾ ಸುರಕ್ಷಾ,
ಭಾಗ್ಯಲಕ್ಷ್ಮಿ, ವಸತಿ, ಪಡಿತರ, ಗ್ರಾಮೀಣಾ ಭಿವೃದಿಟಛಿಗೆ ಸಂಬಂ
ಸಿದಂತೆ ಹಲವು ಕಾರ್‍ಯ ಕ್ರಮಗಳನ್ನು ರಾಜ್ಯ ಅನುಷ್ಠಾನ ಗೊಳಿಸಿದೆ.
ಇವುಗಳ ಬಗ್ಗೆ ಹಲವು ದೂರು ಗಳು ಬಂದಿರುವು ದರಿಂದ ಏನು,
ಎತ್ತ ಎಂದು ಕೇಳುವುದು ಅನಿ ವಾರ್ಯ ಎಂದು ಅವರು
ನಿರ್ಧರಿಸಿದ್ದಾರೆ.
 
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ
ಅವರು, ‘ ಸರಕಾರದಿಂದ ಈ ಬಗ್ಗೆ ಲೆಕ್ಕ ಕೇಳಲು ನಿರ್ಧರಿಸಿದ್ದೇನೆ.
ಆದರೆ, ಸಿಬ್ಬಂದಿ ಕೊರತೆ ಹಾಗೂ ಕಾರ್ಯ ಬಾಹುಳ್ಯ ದಿಂದ
ಇದುವರೆಗೆ ಸಾಧ್ಯವಾ ಗಿರಲಿಲ್ಲ. ಒಂದೊಮ್ಮೆ ಸಂಬಂಧಪಟ್ಟ
ಇಲಾಖೆ ಲೆಕ್ಕ ನೀಡಲು ನಿರಾಕರಿಸಿದರೆ, ಮಾಹಿತಿ ಹಕ್ಕು ಕಾಯಿದೆ
ಅಡಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇನೆ ’ ಎಂದು ವಿವರಿಸಿದರು.
ಅರ್ಥ ಶಾಸ್ತ್ರಜ್ಞರ ಪ್ರಕಾರ ಕೇಂದ್ರ ತನ್ನ ವಾರ್ಷಿಕ ಬಜೆಟ್‌ನಲ್ಲಿ
೮೦ ಲಕ್ಷ ಕೋಟಿ ರೂ.ಗಳನ್ನು ಇಂಥ ಯೋಜನೆಗಳಿಗೆ ಅನುದಾನ
ನೀಡಲು ತೆಗೆದಿರಿಸುತ್ತದೆ. ಆದರೆ, ಅವು ಪರಿಣಾಮಕಾರಿಯಾಗಿ
ಬಳಕೆಯಾಗುತ್ತಿಲ್ಲ ಎಂದು ನ್ಯಾ.ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಸರಕಾರಗಳು ಜಾರಿಗೆ ತರುವ ಯೋಜನೆಗಳಲ್ಲಿ ಸೇ.೧೫ರಷ್ಟು
ಮಾತ್ರ ಜನರನ್ನು ತಲುಪುತ್ತವೆ ಎಂದು ರಾಜೀವ್ ಗಾಂ
ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬಹಿರಂಗ ಹೇಳಿಕೆ ನೀಡಿದ್ದರು.
ಈಗ ಭ್ರಷ್ಟಾಚಾರದ ಪ್ರಮಾಣವೂ ಏರಿಕೆ ಯಾಗಿದೆ. ಹೀಗಾಗಿ,
ಎಷ್ಟು ಪರ್ಸೆಂಟ್ ಬಡವರನ್ನು ತಲುಪುತ್ತದೆ ಎಂಬುದನ್ನು ನೀವೇ
ಊಹಿಸಿ ಎಂದು ಕಟಕಿಯಾ ಡಿದ್ದಾರೆ.


ಸೌಜನ್ಯ: ವಿಜಯ ಕರ್ನಾಟಕ


Share: