ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಡ್ಯ: ಬಿಜೆಪಿ ಸರಕಾರ ಪತನ ನಂತರ ಜಾ.ದಳ ನೇತೃತ್ವದ, ಇಲ್ಲವೇ ಪಾಲುದಾರಿಕೆಯ ಸರಕಾರ ಅಸ್ತಿತ್ವಕ್ಕೆ

ಮಂಡ್ಯ: ಬಿಜೆಪಿ ಸರಕಾರ ಪತನ ನಂತರ ಜಾ.ದಳ ನೇತೃತ್ವದ, ಇಲ್ಲವೇ ಪಾಲುದಾರಿಕೆಯ ಸರಕಾರ ಅಸ್ತಿತ್ವಕ್ಕೆ

Mon, 23 Nov 2009 02:57:00  Office Staff   S.O. News Service
ಮಂಡ್ಯ, ನ.೨೨:  ರಾಜ್ಯದ ಅಭಿವೃದ್ಧಿ ಮತ್ತು ಜನರ ಹಿತವನ್ನು ಮರೆತಿರುವ ಬಿಜೆಪಿ ಸರಕಾರದ ಆಯಸ್ಸು ಇನ್ನೆರಡು ತಿಂಗಳಷ್ಟೇ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಆ ಬಳಿಕ ಚುನಾವಣೆ ಎದುರಾಗುವುದು ಖಚಿತ ವೆಂದು ಭವಿಷ್ಯ ನುಡಿದಿದ್ದಾರೆ.

ಪಾಂಡವಪುರ ತಾಲೂಕಿನ ಮೇಲು ಕೋಟೆಯಲ್ಲಿ ರವಿವಾರ ಜಾ.ದಳ ಸದಸ್ಯತ್ವ ನೋಂದಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಸರಕಾರದ ಪತನ ನಂತರ  ಜಾ.ದಳ ನೇತೃತ್ವದ, ಇಲ್ಲವೇ ಪಾಲುದಾರಿಕೆಯ ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದರು. 

ಬಿಜೆಪಿ ಸರಕಾರ ಆಪರೇಷನ್ ಕಮಲ ಮತ್ತು ಗಣಿಗಾರಿಕೆಗಷ್ಟೇ ಸೀಮಿತ ವಾಗಿದೆ. ರೈತರನ್ನು ಸಂಪೂರ್ಣ ಕಡೆ ಗಣಿಸಿದೆ. ಸರಕಾರ ಬಂದಾಗಿನಿಂದಲೂ ಜನರಿಗೆ ನೆಮ್ಮದಿ ಇಲ್ಲ. ರಾಜ್ಯ ಕಂಡ ಅತಿ ಕೆಟ್ಟ ಸರಕಾರ ಇದಾಗಿದೆ ಎಂದು ಅವರು ಆಪಾದಿಸಿದರು.

ರಾಜಕೀಯ ಸಂತ್ರಸ್ತರಾಗಿರುವ ಬಿಜೆಪಿ ನಾಯಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಭರದಲ್ಲಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರನ್ನು ಸಂಪೂರ್ಣ ಮರೆತಿದ್ದಾರೆ.  ನೆರೆ ಸಂತ್ರಸ್ತರ ಪರಿಸ್ಥಿತಿ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ ಎಂದು ಅವರು ನುಡಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ವಿಲವಾಗಿರುವ ಸರಕಾರಕ್ಕೆ ರಾಜ್ಯಪಾಲರು, ಲೋಕಾಯುಕ್ತರು ಛೀಮಾರಿ ಹಾಕಿದ್ದಾರೆ. ಇಷ್ಟಾಗಿಯೂ ಸರಕಾರ ಎಚ್ಚೆತ್ತುಕೊಂಡಿಲ್ಲ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಜನರು ಈ ಕೆಟ್ಟ ಸರಕಾರ ತಕ್ಕಪಾಠ ಕಲಿಸಲಿ ದ್ದಾರೆ ಎಂದವರು ಎಚ್ಚರಿಸಿದರು. 

ಪಾಂಡವಪುರದಿಂದ ಆಯ್ಕೆಯಾದ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ತಾಲೂಕಿಗೆ ಅದೊಂದು ಶಾಪ. ಮುಂದಿನ ಸರಕಾರದಲ್ಲಿ ಆ ಶಾಪ ವಿಮೋಚನೆಯಾಗಲಿದೆ. ಇಲ್ಲಿನ ಶಾಸಕ ಪುಟ್ಟರಾಜುರವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದೂ ಅವರು  ಭರವಸೆ ನೀಡಿದರು. 

ಖೇಣಿಗೂ ಪಾಠ ಕಲಿಸುತ್ತಾರೆ: ಬಿ‌ಎಂಐಸಿ ಯೋಜನೆಗಾಗಿ ಅಶೋಕ್ ಖೇಣಿಯವರ  ನೈಸ್ ಸಂಸ್ಥೆಗೆ ಸರಕಾರ ೫ ಸಾವಿರ ಎಕರೆ ಭೂಮಿ ನೀಡಿದ್ದು, ಯೋಜನೆಯ ಪ್ರಮುಖ ಪ್ರದೇಶ ವಾಗಿರುವ ಮಂಡ್ಯ ಜಿಲ್ಲೆಯಲ್ಲಿ ರೈತರು ದುಡ್ಡಿಗಾಗಿ ಜಮೀನು ಮಾರಿಕೊಳ್ಳ ಲಾರರು. ಜಮೀನು ಸ್ವಾಧೀನಕ್ಕೆ ಬಂದಾಗ ಖೇಣಿಗೂ ಪಾಠ ಕಲಿಸು ತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ರೈತರಿಗೆ ಸೇರಿದ ೩೦ ಸಾವಿರ ಕೋಟಿ ರೂ. ಮೌಲ್ಯದ ಜಮೀನು ಕಬಳಿಸಿರುವ ಅಶೋಕ್ ಖೇಣಿಯಂಥ ವ್ಯಕ್ತಿಯ ಟೋ, ಕ್ಸ್, ಬ್ಯಾನರ್ ಗಳನ್ನು ಮಂಡ್ಯದಾದ್ಯಂತ  ಕೆಲ ಯುವಕರು ಹಾಕಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಅವರು ತೀವ್ರ ವಿಷಾದ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಎನ್.ಚಲುವರಾಯಸ್ವಾಮಿ, ಬಿಜೆಪಿ ಸರಕಾರ ಎಲ್ಲಾ ವಿಷಯದಲ್ಲೂ ಸಂಪೂರ್ಣ ವಿಲವಾಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರಾಜ್ಯದ ಜನರು ನಲುಗಿದ್ದಾರೆ. ಭ್ರಷ್ಟಾಚಾರ, ದುರಾಡಳಿತ ಮಿತಿ ಮೀರಿದೆ. ಈ ಸರಕಾರದ ವಿರುದ್ಧ ಜಾ.ದಳ ಹೋರಾಟಕ್ಕೆ ಇಳಿಯಲಿದೆ ಎಂದರು.

ಜಿಲ್ಲಾ ಜಾ.ದಳ ಅಧ್ಯಕ್ಷ ಡಿ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿದರು. ಶಾಸಕ ಕೆ.ಟಿ. ಶ್ರೀಕಂಠೇಗೌಡ, ಜಿ.ಪಂ. ಉಪಾಧ್ಯಕ್ಷ ಎಸ್.ಅಂಬರೀಷ್, ಮುಖಂಡರಾದ ಬಿ.ರಾಮಕೃಷ್ಣ, ರಾಮಚಂದ್ರು, ವೈರಮುಡಿಗೌಡ, ಎಂ.ಬಿ. ಶ್ರೀನಿವಾಸ್ ಭಾಗವಹಿಸಿದ್ದರು

Share: