ಬೆಂಗಳೂರು,ಜನವರಿ 16:ಬೆಂಗಳೂರು-ಮೈಸೂರು ನಡುವಿನ ರಸ್ತೆ ನಿರ್ಮಾಣದ ನೈಸ್ ಯೋಜನೆ ಕುರಿತು ಸುಪ್ರೀಂ ಕೋರ್ಟ್‌ನಿಂದ ಅಂತಿಮ ತೀರ್ಪು ಹೊರಬೀಳುವರೆಗೂ ರೈತರ ಜಮೀನು ಸ್ವಾಧೀನದ ನೊಂದಣಿ ಸ್ಥಗಿತ ಗೊಳಿಸುವಂತೆ ಮಾಜಿ ಪ್ರಧಾನಿ ದೇವೇಗೌಡ ಆಗ್ರಹಿಸಿದ್ದಾರೆ.
ರೈತ ಇಚ್ಚೆಗೆ ವಿರುದ್ಧವಾಗಿ ಜಮೀನನ್ನು ನೋಂದಣಿಮಾಡಿಕೊಳ್ಳಲು ಸರ್ಕಾರ ಮುಂದಾದರೆ ನೋಂದಣಿ ಅಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಕೆ ನೀಡಿದರು.
ನೈಸ್ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಏಪ್ರೀಲ್ ವೇಳೆಗೆ ಬರುವ ಸಾಧ್ಯತೆ ಇರುವುದರಿಂದ ಅಲ್ಲಿಯ ವರೆಗೂ ಜಮೀನು ನೋಂದಣಿ ಬೇಡ ಎಂದು ಹೇಳಿ,
ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಹೋರಾಟ ನಡೆಸಿಯೇ ಸಿದ್ಧ ಎಂದರು.
ನೈಸ್ ಕಂಪನಿ ಸರ್ಕಾರಿ ಜಮೀನನ್ನ ಒತ್ತುವರಿಮಾಡಿಕೊಂಡಿದ್ದು, ಆ ಜಾಗದಲ್ಲಿ ವಸತಿ ಹೀನರಿಗೆ ಗುಡಿಸಲು ನಿರ್ಮಿಸಿಕೊಡಲು ಪ್ರಯತ್ನ ನಡೆಸುವುದಾಗಿ ಅವರು ಹೇಳಿದರು.