ಭಟ್ಕಳ: ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಿನ್ನೆ ರಾತ್ರಿ ಮುರ್ಡೇಶ್ವರ ಬಸ್ತಿ ಸೇತುವೆಯ ಬಳಿ ಸಂಭವಿಸಿದೆ.
ಶಿರಾಲಿಯ ಜಗದೀಶ ಹಾಗೂ ಶಿವರಾಮ ಎಂಬುವವರೇ ಗಾಯಗೊಂಡವರಾಗಿದ್ದಾರೆ.

ಇವರು ನಿನ್ನೆ ರಾತ್ರಿ ಬೈಕಿನಲ್ಲಿ ಹೊನ್ನಾವರದಿಂದ ಭಟ್ಕಳದ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಭಟ್ಕಳದಿಂದ ಹೊನ್ನಾವರದ ಕಡೆಗೆ ಅತಿವೇಗದಿಂದ ಚಲಿಸುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಜಗದೀಶನ ಕಾಲು,ತಲೆ ಸೊಂಟಕ್ಕೆ ಗಂಭೀರ ಪೆಟ್ಟು ತಗುಲಿದೆ ಎನ್ನಲಾಗಿದೆ. ಪ್ರಕರಣ ಮುರ್ಡೇಶ್ವರ ಠಾಣೆಯಲ್ಲಿ ದಾಖಲಾಗಿದೆ.