ಬೆಂಗಳೂರು, ಸೆಪ್ಟೆಂಬರ್ 30:ಮತ್ತೊಮ್ಮೆ ರಾಜ್ಯ ಸರಕಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹೊಸ ಸವಾಲನ್ನು ನೀಡಿದೆ.ಹೈಸ್ಕೂಲ್ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದ ಹಂತಕ್ಕೆ ಹೋಗಲು ಸವಾಲಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತೀರ್ಣ ಮತ್ತೆ ವಿದ್ಯಾರ್ಥಿಗಳಿಗೆ ಹೊರೆಯೆನಿಸುವಂತೆ ಆಗಿದೆ.ಯಾಕೆಂದರೆ ಇತ್ತೀಚಿಗೆ ರಾಜ್ಯ ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಸಚಿವ ಈ ವರ್ಷದಿಂದಲೇ ಪರುಷ್ಕ್ರತ ಪ್ರಶ್ನೆ ಪತ್ರಿಕೆ ಮಾದರಿಯನ್ನು ಜಾರಿಗೆ ತರಲಾಗುವುದೆಂದು ಪ್ರಕಟಿಸಿದ್ದಾರೆ.ಈ ಹೊತ್ತಲ್ಲೇ ವಿದ್ಯಾರ್ಥಿಗಳಿಂದ ಮತ್ತು ಪೋಷಕರ ಕಡೆಯಿಂದ ಪರವಿರೋಧಗಳು ಬಂದಿದೆಯಾದರೂ ಇವೆಲ್ಲಾಕ್ಕೆ ಬೆಲೆ ಇಲ್ಲದಂತಾಗಿದೆ.ರಾಜ್ಯ ಶಿಕ್ಷಣ ಮಂಡಳಿಯವರಿಗೆ ಯಾವ ಹೊತ್ತಿನಲ್ಲಿ ಯಾವ ರೀತಿಯ ಪರಿಷ್ಕರಣೆಯನ್ನು ಮಾಡಬೇಕೆಂದು ಗೊತ್ತಿಲ್ಲವೆಂದು ತೋರುತ್ತದೆ.ವಿದ್ಯಾರ್ಥಿಗಳ ಪಾಲಿಗೆ ಮಹತ್ತ್ವವಾಗಿರುವ ಎಸ್ಸೆಸ್ಸೆಲ್ಲಿಯ ಪ್ರಶ್ನೆ ಪತ್ರಿಕೆ ಕಳೆದ ಮೂರು ವರ್ಷದಿಂದೀಚೆಗೆ ಪರಿಷ್ಕರಣೆಗೊಂಡಿದ್ದು ,ಇದು ವಿದ್ಯಾರ್ಥಿಗಳಿಗೆ ಸವಾಲೆಸೆಯುವ ಮೂಲಕ ಇವರ ಬದುಕಿನೊಟ್ಟಿಗೆ ಆಟವಾಡುತ್ತಿದೆ.
ಇದೇನೆ ಇದ್ದರೂ, ರಾಜ್ಯ ಶಿಕ್ಷಣ ಮಂಡಳಿ ಇವೆಲ್ಲಾವನ್ನು ಗಣನೆಗೆ ತೆಗೆದುಕೊಳ್ಳದೇಮಾತ್ರವಲ್ಲ ,ವಿದ್ಯಾರ್ಥಿಗಳ ಗೋಳನ್ನು ಸಹ ಅರ್ಥಮಾಡಿಕೊಳ್ಳದೇ ಈ ವರ್ಷವು ಪ್ರಶ್ನೆ ಪತ್ರಿಕೆಯನ್ನು ಪರಿಷ್ಕ್ರರಣೆ ಮಾಡಿದೆ.ಇದು ಈ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಅನ್ವಯವಾಗುತ್ತಿದ್ದು,ಈ ಪರಿಷ್ಕ್ರತ ಮಾದರಿಯಲ್ಲಿ ವಿವರಣಾತ್ಮಕವಾಗಿ ಬರೆಯುವ ಪ್ರಶ್ನೆಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಆ ಮೂಲಕ ಬಹು ಆಯ್ಕೆಯ ಮತ್ತು ಒಂದು ಅಂಕದ ಪ್ರಶ್ನೆಗಳನ್ನು ತೂರಿ ಹಾಕಿದೆ. ಇದಕ್ಕೆ ಕಾರಣ ಕೊಡುವ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರh ಬಹು ಆಯ್ಕೆ ಪದ್ದತಿಯಲ್ಲಿ ಸಾಕಷ್ಟು ಲೋಪಗಳಿತ್ತು ಎಂದು ಹೇಳುವ ಇವರ ಮಾತು ಸ್ಪಲ್ಪ ಮಟ್ಟಿಗೆ ನಿಜವೇ.ಯಾಕೆಂದರೆ, ಬಹು ಆಯ್ಕೆ ಮಾದರಿಯಲ್ಲಿ ವಿಶ್ಲೇಷಣಾತ್ಮಕ ಪ್ರಶ್ನೆಗಳ ಕೊರತೆಯಿದ್ದ ಕಾರಣ ವಿದ್ಯಾರ್ಥಿಗಳ ನೈಜ ಕಲಿಕೆಯ ಪ್ರಕಟಕ್ಕೆ ಆಸ್ಪದವಿಲ್ಲ.ಮಾತ್ರವಲ್ಲ,ಜ್ಞಾನಧಾರಿತ ಪ್ರಶ್ನೆಗಳೇ ಹೆಚ್ಚಾಗಿದೆ.ಇದು ಬರೆಹದ ಸಾಮರ್ಥ್ಯವನ್ನು ಹೆಚ್ಚಿಸುತ್ತಿಲ್ಲ.ಇದು ಶಿಕ್ಷಣ ತಜ್ಞರು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಿಗೆ ಇತ್ತಂತಹ ದೂರಾಗಿತ್ತು.ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ವಿದ್ಯಾರ್ಥಿಗಳ ಅಧ್ಯಯನದ ಗ್ರಹಿಕೆ ಹೆಚ್ಚಾಗಲು ಹಾಗೂ ಅಭಿವ್ಯಕ್ತಿಗೆ ಪ್ರಾಧಾನ್ಯತೆ ಕಲ್ಪಿಸಿಕೊಡಲು ಪ್ರಶ್ನೆ ಪತ್ರಿಕೆಯನ್ನು ಪರಿಷ್ಕರಣೆ ಮಾಡಿದ್ದು, ಈ ಮೂಲಕ ವಿದ್ಯಾರ್ಥಿಗಳ ಆಲೋಚನಾ ಶಕ್ತಿ,ಬರೆವಣಿಗೆಯ ಸಾಮರ್ಥ್ಯವನ್ನು ಉತ್ತಮಪಡಿಸಲು ಹಾಗೂ ವಿಶ್ಲೇಷಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತಾರೆಯೇ ಎಂಬುದು ಪ್ರಶ್ನಾರ್ಹ.ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇದು ಸಾಧ್ಯವೆಂಬ ಧೈರ್ಯವಿದೆ.ಬಹು ಆಯ್ಕೆ ಮಾದರಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಎ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು.
ಹೀಗಾಗಿ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಗಣನೀಯವಾಗಿ ಕುಸಿದಿತ್ತು ಎಂದು ಹೇಳಲಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಈ ರೀತಿ ಉತ್ತೀರ್ಣರಾದವರು ಪಿಯುಸಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಅಂಶ ಈ ಸಲ ಪಿಯುಸಿ ಫಲಿತಾಂಶದ ಮಟ್ಟ ಕುಸಿಯಲು ಕಾರಣವೆಂದು ಶಿಕ್ಷಣ ತಜ್ಞರು ಹೇಳಿದ್ದಾರೆ. ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ವಿಧಾನವನ್ನು ಬದಲಾಯಿಸಲು ರಾಜ್ಯ ಸರಕಾರದಡಿಯಲ್ಲಿ ಶಿಕ್ಷಣ ತಜ್ಞ ಶ್ರೀಕಂಠಸ್ವಾಮಿಯವರ ಮುಂದಾಳುತ್ವದಲ್ಲಿ ಸಮಿತಿ ರಚನೆ ಮಾಡಿ ವರದಿಯನ್ನು ತಯಾರಿಸಿತು.ಹಾಗೂ ಸೆಸ್ ಎಂಬ ಖಾಸಗಿ ಸಂಸ್ಥೆಯಿಂದ ಪಡೆದ ವರದಿಯು ಅಂತಿಮವಾಗಿ ಬಹು ಆಯ್ಕೆ ಪ್ರಶ್ನೆಯ ಬದಲು ವಿವರಣಾತ್ಮಕವಾಗಿ ಬರೆಯುವ ಪ್ರಶ್ನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿತು. ಹಾಲಿ ಇರುವ ಪದ್ದತಿಯಲ್ಲಿ ಭಾಗ ಎ-ಬಹು ಆಯ್ಕೆ ಹಾಗೂ ಭಾಗ-ಬಿ-ವಿವರಣಾತ್ಮಕ ಎಂದು ವಿಂಗಡಿಸಲಾಗಿದ್ದು , ಶೇ೩೫:೬೫ರ ಅನುಪಾತದಲ್ಲಿ ಭಾಷಾ ವಿಷಯಗಳಲ್ಲಿ ಹಾಗೂ ಶೇ೬೦:೪೦ರ ಅನುಪಾತದಲ್ಲಿ ಇತರ ವಿಷಯಗಳಲ್ಲಿ ಅಂಕಗಳನ್ನು ವಿಂಗಡಿಸಲಾಗಿದೆ.ಗಣಿತ,ವಿಜ್ಞಾನ ಹಾಗೂ ಸಮಾಜ ವಿಜ್ಞಾನಗಳಿಗೆ ಕ್ರಮವಾಗಿ ಶೇ.೨೫:೭೫ರ ಅನುಪಾತದಲ್ಲಿ ಅಂಕಗಳನ್ನು ನಿಗದಿಪಡಿಸಲಾಗಿದ್ದು, ಪ್ರಥಮ ಭಾಷಾ ವಿಷಯದ ೧೨೫ ಅಂಕಗಳಲ್ಲಿ ೨೦ ಅಂಕವನ್ನು ಬಹು ಆಯ್ಕೆ ಪ್ರಶ್ನೆಗಳಿಗೆ ಇಡಲಾಗಿದೆ.
ಪ್ರಥಮ ಭಾಷೆಯಲ್ಲಿ ಒಟ್ಟು ೬೭ ಪ್ರಶ್ನೆಗಳಿರುತ್ತದೆ.ಅಂಕಗಳು ೧೨೫. ೧ಅಂಕದ ೧೫ ಪ್ರಶ್ನೆಗಳು ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ.೧ ಅಂಕದ ೫ ಪ್ರಶ್ನೆಗಳು ಬಿಟ್ಟ ಸ್ಥಳವನ್ನು ತುಂಬಲು ಇರುತ್ತದೆ.೧ ಅಂಕದ ೧೦ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಬೇಕಾಗುತ್ತದೆ.೨ ಅಂಕದ ೧೫ ಪ್ರಶ್ನೆಗಳಿಗೆ ೩-೪ ವಾಕ್ಯಗಳಲ್ಲಿ ಉತ್ತರಿಸಬೇಕು.೩ ಅಂಕಗಳ ೧೦ ಪ್ರಶ್ನೆಗಳಿU ೫-೬ವಾಕ್ಯಗಳಲ್ಲಿ ಉತ್ತರಿಸಬೇಕಾಗುತ್ತದೆ.೪ ಅಂಕಗಳ ೫ ಪ್ರಶ್ನೆಗಳಿಗೆ ೮-೧೦ ವಾಕ್ಯಗಳಲ್ಲಿ ಉತ್ತರಿಸಬೇಕಾಗುತ್ತದೆ.ಹಾಗೂ ೫ ಅಂಕಗಳ ೨ ಪ್ರಶ್ನೆಗಳಿಗೆ ಪ್ರಬಂಧವನ್ನು ಬರೆಯಬೇಕಾಗುತ್ತದೆ.
ದ್ವೀತಿಯ ಮತ್ತು ತೃತೀಯ ಭಾಷೆಯಲ್ಲಿ ಒಟ್ಟು ೫೮ ಪ್ರಶ್ನೆಗಳಿದ್ದು,೧೦೦ ಅಂಕಗಳಿವೆ.೧ ಅಂಕದ ೧೫ ಪ್ರಶ್ನೆಗಳು ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ.೧ ಅಂಕದ ೫ ಪ್ರಶ್ನೆಗಳು ಬಿಟ್ಟ ಸ್ಥಳವನ್ನು ತುಂಬಬೇಕಾಗುತ್ತದೆ.೧ ಅಂಕದ ೫ ಪ್ರಶ್ನೆಗಳಿಗೆ ಹೊಂದಿಸಿ ಬರೆಯಬೇಕಾಗುತ್ತದೆ.೧ ಅಂಕದ ೮ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಬೇಕು.೨ ಅಂಕಗಳ ೧೫ ಪ್ರಶ್ನೆಗಳಿಗೆ ೨-೩ ವಾಕ್ಯಗಳಲ್ಲಿ ಉತ್ತರಿಸಬೇಕು.೩ ಅಂಕಗಳ ೫ಪ್ರಶ್ನೆಗಳಿಗೆ ೩-೪ ವಾಕ್ಯಗಳಲ್ಲಿ ಹಾಗೂ ೪ ಅಂಕಗಳ ೩ ಪ್ರಶ್ನೆಗಳಿಗೆ ೪-೬ ವಾಕ್ಯಗಳಲ್ಲಿ ಹಾಗೂ ೫ ಅಂಕಗಳ ೨ ಪ್ರಶ್ನೆಗಳಿಗೆ ಪ್ರಬಂಧವನ್ನು ಬರೆಯಬೇಕಾಗುತ್ತದೆ.
೧೦೦ ಅಂಕಗಳಿರುವ ಗಣಿತದಲ್ಲಿ ಒಟ್ಟು ೫೮ ಪ್ರಶ್ನೆಗಳಿರುತ್ತವೆ.೧ ಅಂಕದ ೨೦ ಪ್ರಶ್ನೆಗಳು ಬಹು ಆಯ್ಕೆಯ ಪ್ರಶ್ನೆಗಳಾಗಿರುತ್ತವೆ.೧ ಅಂಕದ ೧೦ ಪ್ರಶ್ನೆಗಳು ವಸ್ತುನಿಷ್ಟ ಪ್ರಶ್ನೆಗಳಿರುತ್ತವೆ.೨ ಅಂಕಗಳ ೧೮ ಪ್ರಶ್ನೆಗಳು ೨ ಅಂಕಗಳ ಪ್ರಶ್ನೆಗಳಾಗಿರುತ್ತವೆ.೩ ಅಂಕಗಳ ೬ ಪ್ರಶ್ನೆಗಳು ಹಾಗೂ ೪ ಅಂಕಗಳ ೪ ಪ್ರಶ್ನೆಗಳಿರುತ್ತವೆ.
ವಿಜ್ಞಾನ ವಿಷಯದಲ್ಲಿ ೧೦೦ ಅಂಕಗಳಿರುವ ಒಟ್ಟು ೬೧(ರಸಾಯನಶಾಸ್ತ್ರ೩೯,ಭೌತಶಾಸ್ತ್ರ,ಜೀವಶಾಸ್ತ್ರ ೨೨) ಪ್ರಶ್ನೆಗಳಿರುತ್ತವೆ.ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳಲ್ಲಿ ೩೯ ಪ್ರಶ್ನೆಗಳು ಹಾಗೂ ೬೫ ಅಂಕಗಳಿರುತ್ತವೆ.೧ ಅಂಕದ ೧೦ ಪ್ರಶ್ನೆಗಳು ಬಹು ಆಯ್ಕೆಯ ಪ್ರಶ್ನೆಗಳು ,೧ ಅಂಕದ ೩ ಪ್ರಶ್ನೆಗಳು ಬಿಟ್ಟ ಸ್ಥಳ ತುಂಬುವುದು,೧ ಅಂಕದ ೪ ಪ್ರಶ್ನೆಗಳು ಹೊಂದಿಸಿ ಬರೆಯಲು,೧ ಅಂಕದ ೬ ಪ್ರಶ್ನೆಗಳು ಒಂದು ವಾಕ್ಯದಲ್ಲಿ ಉತ್ತರಿಸಲು,೨ ಅಂಕಗಳ ೯ ಪ್ರಶ್ನೆಗಳಿಗೆ ೨-೩ ವಾಕ್ಯಗಳಲ್ಲಿ ಉತ್ತರಿಸಬೇಕು.೩ ಅಂಕಗಳ ೪ ಪ್ರಶ್ನೆಗಳಿಗೆ ೩-೪ ವಾಕ್ಯಗಳಲ್ಲಿ ಹಾಗೂ ೪ ಅಂಕಗಳ ೩ ಪ್ರಶ್ನೆಗಳಿಗೆ ೪-೬ ವಾಕ್ಯಗಳಲ್ಲಿ ಉತ್ತರಿಸಬೇಕು.
ಜೀವಶಾಸ್ತ್ರ ವಿಷಯದಲ್ಲಿ ೩೫ ಅಂಕಗಳೊಂದಿಗೆ ೨೨ ಪ್ರಶ್ನೆಗಳಿರುತ್ತವೆ.೧ ಅಂಕದ ೫ ಪ್ರಶ್ನೆಗಳು ಬಹು ಆಯ್ಕೆಯ ಪ್ರಶ್ನೆಗಳು,೧ ಅಂಕದ ೪ ಪ್ರಶ್ನೆಗಳು ಬಿಟ್ಟ ಸ್ಥಳವನ್ನು ತುಂಬುವುದು ,ಒಂದು ವಾಕ್ಯದಲ್ಲಿ ಉತ್ತರಿಸುವ ೧ ಅಂಕದ ೪ ಪ್ರಶ್ನೆಗಳು ,೨-೩ ವಾಕ್ಯಗಳಲ್ಲಿ ಉತ್ತರಿಸಬೇಕಾದ ೨ ಅಂಕಗಳ ೬ ಪ್ರಶ್ನೆಗಳು,೩-೪ ವಾಕ್ಯಗಳಲ್ಲಿ ಉತ್ತರಿಸಬೇಕಾದ ೩ ಅಂಕಗಳ ೨ ಪ್ರಶ್ನೆಗಳು ಹಾಗೂ ನಾಲ್ಕಾರು ವಾಕ್ಯಗಳಲ್ಲಿ ಉತ್ತರಿಸಬೇಕಾದ ೪ ಅಂಕಗಳ ೧ ಪ್ರಶ್ನೆಗಳಿರುತ್ತವೆ.
ಸಮಾಜ ವಿಜ್ಞಾನದಲ್ಲಿ ೧೦೦ ಅಂಕಗಳನ್ನು ಹೊಂದಿರುವ ೬೦ ಪ್ರಶ್ನೆಗಳಿರುತ್ತವೆ.ಬಹು ಆಯ್ಕೆಯ ೧ ಅಂಕದ ೧೫ ಪ್ರಶ್ನೆಗಳು,ಬಿಟ್ಟ ಸ್ಥಳವನ್ನು ತುಂಬುವ ೧ ಅಂಕದ ೫ ಪ್ರಶ್ನೆಗಳು, ಹೊಂದಿಸಿ ಬರೆಯುವ ೧ ಅಂಕದ ೫ ಪ್ರಶ್ನೆಗಳು,ಒಂದು ವಾಕ್ಯದಲ್ಲಿ ಉತ್ತರಿಸುವ ೧ ಅಂಕದ ೯ ಪ್ರಶ್ನೆಗಳು,೨-೩ ವಾಕ್ಯಗಳಲ್ಲಿ ಉತ್ತರಿಸಬೇಕಾದ ೨ ಅಂಕಗಳ ೧೬ ಪ್ರಶ್ನೆಗಳು,೩-೪ ವಾಕ್ಯಗಳಲ್ಲಿ ಉತ್ತರಿಸಬೇಕಾದ ೩ ಅಂಕಗಳ ೬ ಪ್ರಶ್ನೆಗಳು ಹಾಗೂ ನಾಲ್ಕಾರು ವಾಕ್ಯಗಳಲ್ಲಿ ಉತ್ತರಿಸಬೇಕಾದ ೪ ಅಂಕಗಳ ೪ ಪ್ರಶ್ನೆಗಳು ನೂತನ ಪರಿಷ್ಕರಣಾ ಪ್ರಶ್ನೆಪತ್ರಿಕೆಯಾಗಿದೆ.ಹೀಗೆ ಅನೇಕ ರೀತಿಯ ಬದಲಾವಣೆಯನ್ನು ತಂದಿರುವ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸರ್ಜರಿಗೊಳಿಸಿದೆ.ಹಠಾತ್ತನೇ ಈ ವರ್ಷದಿಂದಲೇ ಈ ನೂತನ ನಿಯಮವನ್ನು ಆಳವಡಿಸಲಾಗುವುದೆಂದು ಹೇಳಿರುವ ರಾಜ್ಯ ಶಿಕ್ಷಣ ಸಚಿವರು ಈಗಾಗಲೇ ತಿಂಗಳ ಘಟಕ ಪರೀಕ್ಷೆ ಎದುರಿಸಿರುವ ವಿದ್ಯಾರ್ಥಿಗಳಿಗೆ ಯಾವ ರೀತಿ ಈ ನೂತನ ಪ್ರಶ್ನೆ ಪತ್ರಿಕೆಯನ್ನು ಪರಿಚಯಿಸುತ್ತದೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಈ ನೂತನ ಪರಿಷ್ಕರಣೆಯನ್ನು ಈ ವರ್ಷವೇ ಜಾರಿ ಮಾಡಬೇಕೆಂದಿದ್ದರೇ ,ಕೂಡಲೇ ರಾಜ್ಯ ಪ್ರೌಢಶಿಕ್ಷಣ ಇಲಾಖೆ ಅದಷ್ಟು ಬೇಗನೇ ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿಯನ್ನು ನೀಡಬೇಕಾಗಿದೆ.ಇಲ್ಲದಿದ್ದರೆ ಗೊಂದಲದ ಗೂಡಿನಲ್ಲಿ ವಿದ್ಯಾರ್ಥಿಗಳು ಬಂಧಿಯಾದರೆ ಮತ್ತೆ ಎಸ್ಸೆಸ್ಸೆಲ್ಸಿ ಫಲಿತಾಂಶ ಇಳಿಕೆಯ ಹಾದಿಯನ್ನು ಕಾಣಬಹುದು.
-ಶಂಶೀರ್,ಬುಡೋಳಿ