ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಕೇರಳಕ್ಕೆ ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ನಾಲ್ಕು ಜನರ ಬಂಧನ

ಮಂಗಳೂರು: ಕೇರಳಕ್ಕೆ ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ನಾಲ್ಕು ಜನರ ಬಂಧನ

Mon, 18 Jan 2010 18:12:00  Office Staff   S.O. News Service
ಮಂಗಳೂರು, ಜನವರಿ 19: ಶ್ರೀಗಂಧ ಮರದ ಕೊರಡುಗಳನ್ನು  ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಂದ ಬೆಲೆಬಾಳುವ ಶ್ರೀಗಂಧದ ಕೊರಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಪಿ‌ಎಸ್‌ಐ ಶ್ರೀ ಪ್ರಕಾಶ್ ನೇತೃತ್ವದ ದ.ಕ ಜಿಲ್ಲಾ ಎಸ್.ಪಿ ವಿಶೇಷ ಪತ್ತೆ ದಳದ ತಂಡವು ಯಶಸ್ವಿಯಾಗಿರುತ್ತಾರೆ.

ಈ ದಿನ ತಾರೀಕು: ೧೮-೦೧-೨೦೧೦ ರಂದು ಮಂಗಳೂರು - ಕಾಸರಗೋಡು ರಸ್ತೆಯ ಕಂಕನಾಡಿ ಗ್ರಾಮದ ಪಂಪ್‌ವೆಲ್ ಸರ್ಕಲ್ ಬಳಿ ಅಕ್ರಮವಾಗಿ ಶ್ರೀಗಂಧದ ಕೊರಡನ್ನು ಸಾಗಾಟ ಮಾಡುತ್ತಿದ್ದಾರೆ ಎಂದು ದೊರೆತ ಖಚಿತ ಮಾಹಿತಿ ಮೇರೆಗೆ ಬೆಳಿಗ್ಗೆ ೬-೦೦ ಗಂಟೆಗೆ ಜಿಲ್ಲಾ ಎಸ್.ಪಿ ವಿಶೇಷ ಪತ್ತೆ ದಳದ ಪೊಲೀಸರು ಸದ್ರಿ ಸ್ಥಳಕ್ಕೆ ತೆರಳಿ ನಾಲ್ಕು ಜನ ಆರೋಪಿಗಳನ್ನು ಮತ್ತು ಶ್ರೀಗಂಧದ ಕೊರಡನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿಗಳ ವಿವರ ಈ ಕೆಳಗಿನಂತಿದೆ. 

೧. ಪ್ರದೀಪ್ ಡಿ ಸೋಜಾ @ ಸಂದೀಪ್(೩೦), ತಂದೆ: ದಿ: ಪೀಟರ್ ಡಿ ಸೋಜಾ, ವಾಸ: ಪಾವೂರು ಹುಳಿಯಾ ಮನೆ, ಅಡ್ಯಾರು ಅಂಚೆ, ಮಂಗಳೂರು.

೨. ರಂಜಿತ್ ಪ್ರೀತಂ ಡಿ ಸಿಲ್ವಾ,(೨೧), ತಂದೆ: ಆಂಟ್ಯನಿ ಡಿ ಸಿಲ್ವ, ವಾಸ: ಸರಿಪಳ್ಳ ೩ ನೇ ಅಡ್ಡ ರಸ್ತೆ, ನೀರುಮಾರ್ಗ ಗ್ರಾಮ, ಪೆದುಮಲೆ ಅಂಚೆ, ಮಂಗಳೂರು. 

೩. ಜಯರಾಜ್(೩೪), ತಂದೆ: ಶಿವಪ್ಪ, ವಾಸ: ಶಿವ ನಿಲಯ, ಕುದ್ಕೋರಿಗುಡ್ಡೆ, ಕಂಕನಾಡಿ ಬೈಪಾಸ್ ರಸ್ತೆ, ಮಂಗಳೂರು. 

೪. ಶ್ರೀಧರ, ಪ್ರಾಯ(೨೮೦, ತಂದೆ: ಗಣಪಯ್ಯ ಗೌಡ, ವಾಸ: ಗೋಳಿಯಡ್ಕ ಮನೆ, ಮರ್ಕಂಜ ಪೋಸ್ಟ್, ಸುಳ್ಯ ತಾಲೂಕು.

ಆರೋಪಿಗಳು ನಾಲ್ಕು ಪ್ಲಾಸ್ಟಿಕ್ ಪೊಲಿಥಿನ್ ಚೀಲದಲ್ಲಿ ಒಟ್ಟು 161 ಕೆ.ಜಿ ತೂಕದ  ಶ್ರೀಗಂಧದ ಕೊರಡನ್ನು ಹಾಸನ ಜಿಲ್ಲೆಯ ಸಕಲೇಶಪುರದಿಂದ ಅಕ್ರಮವಾಗಿ ಕೇರಳದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದರು. ಅರೋಪಿಗಳ ವಶದಿಂದ ವಶಪಡಿಸಿಕೊಂಡ ಶ್ರೀಗಂಧದ ಕೊರಡಿನ ಒಟ್ಟು ಮೌಲ್ಯ ಸುಮಾರು ರೂ. ೫ ಲಕ್ಷ ಆಗಬಹುದು. 

ಈ ಪತ್ತೆ ಕಾರ್ಯದಲ್ಲಿ ಪ್ರೊಬೆಷನರಿ ಪಿ‌ಎಸ್‌ಐ ಶ್ರೀ ಹೊನ್ನೆಗೌಡ, ದ.ಕ ಜಿಲ್ಲಾ ವಿಶೇಷ ಪತ್ತೆ ದಳದ ಸಿಬ್ಬಂದಿಯವರಾದ ಅನಂದ, ಬಾಸ್ಕರ ಕಾಮತ್, ರಾಮ ಪೂಜಾರಿ ಶೀನಪ್ಪ, ಚಂದ್ರಶೇಖರ, ಗಿರೀಶ್ ಸುವರ್ಣ, ಸುನೀಲ್‌ಕುಮಾರ್, ರಾಜೇಂದ್ರ ಪ್ರಸಾದ್, ಡೇವಿಡ್ ಡಿ ಸೋಜಾ, ಮಹಮ್ಮದ್ ಇಕ್ಬಾಲ್, ಶಿವ ನಾಯ್ಕ್‌ರವರು ಭಾಗವಹಿಸಿರುತ್ತಾರೆ. 













Share: