ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಎಂ.ಎಸ್. ರಾಮಯ್ಯ ಕಾಲೇಜಿನ ವಿದ್ಯಾರ್ಥಿ ಅಪಹರಣ - ಪ್ರಕರಣ ಸುಖಾಂತ್ಯ

ಬೆಂಗಳೂರು: ಎಂ.ಎಸ್. ರಾಮಯ್ಯ ಕಾಲೇಜಿನ ವಿದ್ಯಾರ್ಥಿ ಅಪಹರಣ - ಪ್ರಕರಣ ಸುಖಾಂತ್ಯ

Tue, 19 Jan 2010 16:16:00  Office Staff   S.O. News Service
ಬೆಂಗಳೂರು, ಜನವರಿ 19: ಒತ್ತೆ ಹಣಕ್ಕಾಗಿ ನಿನ್ನೆ ಅಪಹರಣಕೊಳಗಾಗಿದ್ದ ಎಂಎಸ್ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪ್ರಕರಣ ಸುಖಾಂತಗೊಂಡಿದೆ.   
ಅಪಹರಣಕೊಳಗಾಗಿದ್ದ  ವಿದ್ಯಾರ್ಥಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.  ಉತ್ತರ ಭಾರತದ ಮೂಲಕ ವಿದ್ಯಾರ್ಥಿ ಜಿತಿನ್ ನನ್ನು ಅಪಹರಣಕಾರರಿಂದ ಕೊಡಿಗೆ ಹಳ್ಳಿ ಪೊಲೀಸರು ರಕ್ಷಿಸಿ ೩ ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.   
 
ಗುಟ್ಟಹಳ್ಳಿ  ನಿವಾಸಿ ಸಿರಾಜ್, ನಾಜಿರ್ ಮತ್ತು ಶಬೀರ್  ಬಂದಿತ ಆರೋಪಿಗಳು.  ನಿನ್ನೆ ಮಧ್ಯಾಹ್ನ ೨ ಗಂಟೆಗೆ ಸಹಕಾರ ನಗರದ ಕೆನರಾ ಲೇ‌ಔಟ್‌ನ ಜಗಜೀವನ್ ಅಪಾರ್ಟ್‌ಮೆಂಡ್‌ನಿಂದ ಈ ವಿದ್ಯಾರ್ಥಿ ಅಪಹರಿಸಿ ಬಿಡುಗಡೆಗೆ ೧೦ ಲಕ್ಷ ಒತ್ತೆ ಹಣ ನೀಡಬೇಕೆಂದು ಇಂಜಿನಿಯರ್ ಕಾಲೇಜಿನ ಇನ್ನೊಬ್ಬ ವಿಧ್ಯಾರ್ಥಿಗೆ ಮೊಬೈಲಿನಿಂದ ಕರೆಮಾಡಿದರು.  
 
ಈ ಸಂಬಂಧ ಅಮಿತ್ ಎಂಬ ವಿದ್ಯಾರ್ಥಿ ಕೊಡಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.  ಕೊಡಿಹಳ್ಳಿ ಪೊಲೀಸರು ದೂರು ದಾಖಲಿಸಿ ಅಪಹರಣ ಕೊಳಗಾದ ಜಿತಿನ್‌ನ್ನು  ರಕ್ಷಿಸುವಲ್ಲಿ ಯಶಸ್ವಿಯಾದರು.  


Share: