ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ನೀರಾವರಿ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಹೊಸ ತಂತ್ರಜ್ಞಾನ ಬಳಕೆ

ನೀರಾವರಿ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಹೊಸ ತಂತ್ರಜ್ಞಾನ ಬಳಕೆ

Sun, 29 Nov 2009 02:21:00  Office Staff   S.O. News Service
ಕೇವಲ ನೀರಾವರಿ ಕಾಮಗಾರಿಗಳಷ್ಟೇ ಹೊಸ ಚಾಲನೆ ನೀಡಿದರೆ ಸಾಲದು.ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿರುವ ಹೊಸ-ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜಲಸಂಪನ್ಮೂಲ ಇಲಾಖೆ ಹಲವಾರು ಪ್ರಾಯೋಗಿಕ ಪ್ರಯತ್ನಗಳನ್ನು ನಡೆಸುತ್ತಿವೆ.
 
ನೀರಿನ ಹರಿವಿನ ಪ್ರಮಾಣ ಮತ್ತು ಮಟ್ಟವನ್ನು ಅಳೆಯಲು....
 
ಘಟಪ್ರಭಾ ಎಡದಂತೆ ಕಾಲುವೆ ಹಾಗೂ ಇದರಡಿಯಲ್ಲಿ ಶಾಖಾ ಕಾಲುವೆಗಳ ನೀರು ಹರಿವಿನ ಪ್ರಮಾಣವನ್ನು ತಿಳಿದುಕೊಳ್ಳಲು ಪ್ರಾಯೋಗಿಕವಾಗಿ ನಾಲೆಯ ಐದು ಸ್ಥಳಗಳಲ್ಲಿ ಉಪಕರಣಗಳನ್ನು ಕಳೆದ ಫೆಬ್ರವರಿಯಲ್ಲಿ ಸ್ಥಾಪಿಸಲಾಗಿತ್ತು.ಇದರಿಂದ ನಾಲೆಯಲ್ಲಿನ ನೀರಿನ ಮಟ್ಟ ,ಹರಿವಿಕೆಯ ಪ್ರಮಾಣವನ್ನು ನಿಖರವಾಗಿ ಪಡೆಯಬಹುದಾಗಿರುತ್ತದೆ.ನಾಲೆಯ ಹರಿವಿಕೆಯ ವಿವರಗಳನ್ನು ಆಗಿಂದಾಗ್ಗೆ ಘಟಪ್ರಭಾ ಎಡದಂತೆ ಕಾಲುವೆಯ ವ್ಯಾಪ್ತಿಯಲ್ಲಿನ ಅಧಿಕಾರಿಗಳಿಗೆ ಹಾಗೂ ನಾಲಾ ನಿರ್ವಾಹಕರುಗಳ ಮೊಬೈಲ್‌ಗಳಿಗೆ ಸಂದೇಶವನ್ನು ಕಳುಹಿಸಬಹುದಾಗಿರುತ್ತದೆ.ಹಾಗೂ ನಾಲೆಗಳಲ್ಲಿನ ನೀರು ಹರಿವಿಕೆಯ ಪೂರ್ಣ ವಿವರಗಳು ವೈಬ್‌ಸೈಟ್‌ನಲ್ಲಿ ಸಿಗುವಂತಾಗುತ್ತದೆ.
 
ಹೂಳೆತ್ತುವ ತಂತ್ರಜ್ಞಾನ 
ರಾಜ್ಯದ ಹಲವಾರು ಜಲಾಶಯಗಳು ಹೂಳಿನ ಸಮಸ್ಯೆಯಿಂದ ಬಳಲುತ್ತಿದ್ದು,ಇದರಿಂದ ಜಲಾಶಯದ ಸಾಮರ್ಥ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ತಳದಲ್ಲಿ ಹೂಳು ತುಂಬಿರುವುದರಿಂದ ನೀರು ಸಂಗ್ರಹ ಕಡಿಮೆ ಆಗುತ್ತಿದೆ.ಈ ದಿಸೆಯಲ್ಲಿ ಜಲಾಶಯದಿಂದ ಹೂಳನ್ನು ಎತ್ತಿ ಅವುಗಳನ್ನು ಮೂಲ ಸಾಮರ್ಥ್ಯಕ್ಕೆ ಮರಳಿ ತರುವ ದಿಸೆಯಲ್ಲಿ ಸರಕಾರವು ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆ ಸಂಪರ್ಕದಲ್ಲಿದ್ದು ಹೈಡ್ರಾಲಿಕ್ ಡ್ರೆಡ್ಜಿಂಗ್ ಸಿಸ್ಟಮ್ ಮತ್ತು ಕಟರ‍್ಸ್ ಮುಖಾಂತರ ಹೂಳೆತ್ತುವ ಕುರಿತು ಚಿಂತನೆ ನಡೆಸುತ್ತಿದೆ.ಇಟಲಿ ಮೂಲದ ತಂತ್ರಜ್ಞರ ತಂಡವೊಂದು ಹೈಡ್ರಾಲಿಕ್ ಕಟರ್ ಸೆಕ್ಷನ್ ಮುಖಾಂತರ ಅಣೆಕಟ್ಟು ಹೂಳೆತ್ತುವ ವಿಧಾನವನ್ನು ಪರೀಕ್ಷಿಸುತ್ತಿದ್ದಾರೆ.
 
ಹಸರೀಕರಣ
ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಸರಕಾರವು ರಾಜ್ಯದ ಅಣೆಕಟ್ಟು ಮತ್ತು ಕಾಲುವೆ ಅಸು-ಪಾಸಿನಲ್ಲಿ ಗಿಡ ಮರಗಳನ್ನು ಬೆಳೆಸುವ ಹೊಸ ಯೋಜನೆ ಹಾಕಿಕೊಂಡಿದೆ. ಸಾಮಾಜಿಕ ಅರಣ್ಯ ಕಾರ್ಯಕ್ರಮದಂತೆ ಈ ಯೋಜನೆಯನ್ನು ಚಾಲನೆಗೊಳಿಸುವ ನಿಟ್ಟಿನಲ್ಲಿ ಆಲೋಚನೆ ನಡೆಸಿದೆ. ಈ ವರ್ಷದ ಮಳೆಗಾಲದಲ್ಲೇ ಕಾಲುವೆ ಮತ್ತು ಉಪ ಕಾಲುವೆಗಳ ಎರಡೂ ಬದಿಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ಸಿಗಲಿದೆ.ಈ ಹಸರೀಕರಣದಿಂದ ಕಾಲುವೆ ಆಸುಪಾಸಿನಲ್ಲಿ ಮಣ್ಣಿನ ಸವಕಳಿಯನ್ನು ತಡೆಯಬಹುದಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಕಾರ್ಯಕ್ರಮಗಳಡಿಯಲ್ಲಿ ಈ ಯೋಜನೆಯನ್ನು ಕೈಗೊಳ್ಳಲು ಆಲೋಚಿಸಲಾಗಿದೆ.ನೀರು ಬಳಕೆದಾರರ ಸಂಘಗಳನ್ನು ಸಹ ಇದಕ್ಕೆ ಬಳಸಿಕೊಳ್ಳುವ ಚಿಂತನೆ ನಡೆದಿದೆ.
ಇದಲ್ಲದೆ ಅಣೆಕಟ್ಟೆಯ ಕೆಳ ಭಾಗದಲ್ಲಿ ಆಕರ್ಷಕ ಉದ್ಯಾನಗಳನ್ನು ರೂಪಿಸಲಾಗುವುದು.ಕೃಷ್ಣರಾಜ ಸಾಗರದ ಬೃಂದಾವನ ಮತ್ತು ಆಲಮಟ್ಟಿ ಜಲಾಶಯದ ಲಾಲ್ ಬಹದ್ದೂರ್ ಉದ್ಯಾನವನಗಳನ್ನು ಮಾದರಿಯಾಗಿರಿಸಿಕೊಂಡು ಇನ್ನಷ್ಟು ಸುಧಾರಮೆ ರೂಪದಲ್ಲಿ ಈ ಯೋಜನೆ ಹಮ್ಮಿಕೊಳ್ಳಲು ಸರಕಾರ ಮುಂದಾಗಿದೆ.ಹಲವಾರು ನೀರಾವರಿ ಯೋಜನೆಗಳಡಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿರುತ್ತದೆ.ಸದರಿ ಸಂಘಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ವಿಫಲವಾಗಿರುತ್ತವೆ.ನೀರು ಬಳಕೆದಾರರ ಸಹಕಾರ ಸಂಘಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಹಾಗೂ ರಚನಾತ್ಮಕವಾಗಿ ಕಾರ್ಯನಿರ್ವಹಿಸಲು ವರದಿಯನ್ನು ಸಲ್ಲಿಸಲು ಕಾರ್ಯಪಡೆಯನ್ನು ರಚಿಸಲಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರವು ನೀರು ಬಳಕೆದಾರರ ಸಂಘಗಳನ್ನು ಸದೃಢಗೊಳಿಸಲು ಮುಂದಾಗಿದೆ.
 
ಈಗಾಗಲೇ ನೋಂದಣಿಯಾಗಿರುವ 2,552 ಸಂಘಗಳನ್ನು ಸದೃಢಗೊಳಿಸಿ,ಇನ್ನೂ ಹೆಚ್ಚಿನ ಸಂಘಗಳನ್ನು ಸ್ಥಾಪಿಸಲಾಗುವ ಉದ್ದೇಶವಿದೆ.ನೀರಿನ ಸಮರ್ಪಕ ರೀತಿಯ ನಿರ್ವಹಣೆಯ ಹಾಗೆಯೇ ಮಣ್ಣಿನ ಫಲವತ್ತತೆಯನ್ನು ಕಾಪಾಡುವಿಕೆಯ, ಸವಳು ಜವಳನ್ನು ನಿಯಂತ್ರಿಸುವುದು ಮುಂತಾದ ಅರಿವನ್ನು ಬಗ್ಗೆ ರೈತರಿಗೆ ಈ ಮೂಲಕ ಅರಿವನ್ನು ನೀಡಲಾಗುವುದು. 
- ಶಂಶೀರ್ ,ಬುಡೊಳಿ

Share: