ಭಟ್ಕಳ:೧೯,ಆಸ್ಟ್ರೇಲಿಯಾದಲ್ಲಿ ಭಾರತೀಯ ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಕೊಲೆ ಪ್ರಕರಣಗಳ ಹಿಂದೆ ಭಾರತೀಯ ಕೃಸ್ತರ ಕೈವಾಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಇದಕ್ಕೆ ಸೂಕ್ತ ಕ್ರಮವನ್ನು ಜರುಗಿಸದೆ ಹೋದಲ್ಲಿ ಮತ್ತು ಅಲ್ಲಿ ಹಿಂದುಗಳ ಮೇಲೆ ಹಲ್ಲೆಯು ನಿಲ್ಲದೆ ಹೋದರೆ ನಾವು ಭಟ್ಕಳ ತಾಲೂಕಿನಲ್ಲಿರುವ ಒಂದೆ ಒಂದು ಚರ್ಚ ಕೂಡ ಸುರಕ್ಷಿತವಾಗಿ ಉಳಿಯಲು ಬಿಡುವುದಿಲ್ಲ ಚರ್ಚ್‌ಗಳ ಮೇಲೆ ದಾಳಿಯನ್ನು ನಡೆಸುವುದರ ಮೂಲಕ ನಾವು ಅವರಿಗೆ ತಕ್ಕ ಉತ್ತರವನ್ನು ನೀಡುತ್ತೇವೆ ಎಂದು ಶ್ರೀರಾಮ ಸೇನೆ ಎಚ್ಚರಿಕೆಯನ್ನು ನೀಡಿದೆ.
ಈ ಕುರಿತು ಇಂದು ರಾಷ್ಟ್ರಪತಿಗಳಿಗೆ ಸಹಾಯಕ ಕಮಿಷನರ‍್ ಮೂಲಕ ಮನವಿಯನ್ನು ಸಲ್ಲಿರುವ ಶ್ರೀರಾಮ ಸೇನೆ ಕಳೆದ ಕೆಲವು ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ಭಾರತೀಯ ಹಿಂದುಗಳ ಮೇಲೆ ಅವ್ಯಾಹತವಾಗಿ ಹಲ್ಲೆಗಳು ನಡೆಯುತ್ತಿದ್ದು ಓರ್ವ ವಿದ್ಯಾರ್ಥಿಯನ್ನು ಕೊಲೆಗೈಯಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ವಿಫಲವಾಗಿದೆ, ಇಲ್ಲಿಯ ವರೆಗೆ ಭಾರತೀಯ ಪ್ರಜೆಗಳ ಮೇಲೆ ಹಲ್ಲೆಗೆ ಕಾರಣರಾದವರನ್ನು ಬಂಧಿಸಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ನಾವು ಆಸ್ಟ್ರೇಲಿಯಾದ ಒಬ್ಬನೆ ಒಬ್ಬ ಪ್ರಜೆಯನ್ನು ಭಟ್ಕಳಕ್ಕೆ ಬರಲು ಬಿಡುವುದಿಲ್ಲ ಒಂದು ಅವರು ಬಂದರೆ ಅವರ ಸಾವಿಗೆ ನಾವೇ ಕಾರಣರಾಗುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು ಈ ಕೂಡಲೆ ಭಾರತೀಯ ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆ,.ದಾಳಿ ಮತ್ತು ಕೊಲೆಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಗತರಾಗಿ ಮತ್ತು ಭಾರತ ದೇಶದಲ್ಲಿ ಹಿಂದು ಮತ್ತು ಕ್ರೈಸ್ಥರ ಮಧ್ಯೆ ಮುಂದೆ ಉಂಟಾಗಬಹುದಾದ ಸಂಘರ್ಷಕ್ಕೆ ಅವಕಾಶ ಮಾಡಕೊಡಿ ಬೇಡಿ ಇಲ್ಲವಾದಲ್ಲಿ ಮುಂದಾಗಬಹುದಾದ ಹಿಂದು ಕ್ರೈಸ್ತ ಸಂಘರ್ಷಕ್ಕೆ ಭಟ್ಕಳದಿಂದಲೆ ಅಡಿಪಾಯವಾಗಬಹುದೆಂದು ರಾಷ್ಟ್ರಪತಿಯವರಿಗೆ ನೀಡಿದ ಮನವಿಯಲ್ಲಿ ಶ್ರೀರಾಮ ಸೇನೆ ಎಚ್ಚರಿಕೆಯನ್ನು ನೀಡಿದೆ.
ಈ ಸಂದರ್ಭದಲ್ಲಿ ಶಂಕರ‍್ ನಾಯ್ಕ್ ಚೌಥನಿ, ನಾಗೇಶ್ ನಾಯ್ಕ, ಮುಂತಾದವರು ಹಾಜರಿದ್ದರು.