ಮುರ್ಡೇಶ್ವರ ಜನವರಿ, 19: ಪಟ್ಟಣದ ಸಮೀಪದಲ್ಲಿ ರೈಲ್ವೇ ಹಳಿಯ ಮೇಲೆ ಅಪರಿಚಿತ ವ್ಯಕ್ತಿಯ ಶವವೊಂದ್ದು ಪತ್ತೆಯಾಗಿದೆ. ಕೇರಳ ಶೈಲಿಯ ಲುಂಗಿ ಹಾಗೂ ಶರ್ಟ್ ಧರಿಸಿದ್ದ ಈ ವ್ಯಕ್ತಿ ಮುಸಲ್ಮಾನ ಆಗಿರಬಹುದೆಂದು ಶಂಕಿಸಲಾಗಿದೆ. ಸುಮಾರು ಮೂವತ್ತೈದರಿಮ್ದ ನಲವತ್ತು ವರ್ಷದ ನಡುವಣ ವ್ಯಕ್ತಿಯ ಶರ್ಟಿನಲ್ಲಿ ಯಾವುದೇ ವಸ್ತುಗಳು ಇರಲಿಲ್ಲವಾದ್ದರಿಂದ ಗುರುತು ಹಿಡಿಯುವುದು ಕಷ್ಟವಾಗಿದೆ. ಶರ್ಟಿನ ಹಿಂಭಾಗದ ಟೈಲರ್ ಗುರುತಿನಲ್ಲಿ ಸಿಟಿ ಸ್ಟೈಲ್, ಕುಟ್ಟಿಯಾಡಿ ಎಂದು ಬರೆದಿದೆ. ಧರಿಸಿದ್ದ ಚಪ್ಪಲಿಯಲ್ಲಿ ಕ್ಯೂಬಿಸ್ ಎಂದು ಬರೆದಿದೆ.ಶವ ರುಂಡ ಮುಂಡ ಬೇರೆಯಾದ ಸ್ಥಿತಿಯಲ್ಲಿ ದೊರಕಿದ್ದು ಚಲಿಸುತ್ತಿರುವ ರೈಲಿಗೆ ಸಿಲುಕಿಕೊಂಡಿರಬಹುದಾದ ಸಾಧ್ಯತೆಗಳಿವೆ.
ಶವವನ್ನು ಮುರ್ಡೇಶ್ವರದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ತಿಳಿದವರು ಮುರ್ಡೇಶ್ವರ ಪೋಲೀಸ್ ಠಾಣೆಗೆ ದೂರವಾಣಿ 08385 268896 ಮೂಲಕ ತಿಳಿಸಲು ಮನವಿ ಮಾಡಿಕೊಳ್ಳಲಾಗಿದೆ.