ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ಮಕ್ತಬ್ ಶಾಲಾ ವಿದ್ಯಾರ್ಥಿಗಳ ಯಶಸ್ವಿ ಕ್ವಿಝ್ ಕಾರ್ಯಕ್ರಮ

ಭಟ್ಕಳ:ಮಕ್ತಬ್ ಶಾಲಾ ವಿದ್ಯಾರ್ಥಿಗಳ ಯಶಸ್ವಿ ಕ್ವಿಝ್ ಕಾರ್ಯಕ್ರಮ

Thu, 18 Mar 2010 08:05:00  Office Staff   S.O. News Service

ಭಟ್ಕಳ,ಮಾರ್ಚ್ ೧೭:ಇಲ್ಲಿನ ಮಕ್ತಬ್ ಜಾಮಿಯ ಇಸ್ಲಾಮಿಯ ಚೌಕ್ ಬಝಾರ‍್ ಶಾಲೆಯು ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಸ್ಪರ್ಧೆ ಮತ್ತು ಕ್ವಿಝ್(ರಸಪ್ರಶ್ನೆ) ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಉದ್ಘಾಟನೆಯು ಕುರ್‌ಆನ್ ಪಠಣದೊಂದಿಗೆ ಆಯಿತು. ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ವಿವಿಧ ವಿಷಯದ ಕುರಿತು  ಉರ್ದು,ಅರಬಿ, ಇಂಗ್ಲಿಷ್ ಮತ್ತು ಕನ್ನಡ ದಲ್ಲಿ ಅತ್ಯಂತ ಮನಮುಟ್ಟುವಂತೆ ಭಾಷಣವನ್ನು ಮಾಡಿ ಜನರಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು. ಭಟ್ಕಳದ ಐದು ಮದರಸಾಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ  ಕ್ವಝ್ ಸ್ಪರ್ಧೆಯಲ್ಲಿ  ಮಗ್ದುಮ್ ಕಾಲೋನಿ ದಾರುತ್ತಾಲೀಮ್ ವ-ತರಬಿಯತ್  ಶಾಲೆಯ ವಿದ್ಯಾರ್ಧಿಗಳು ಪ್ರಥಮಾ ಸ್ಥಾನವನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಜಾಮಿಯ ಇಸ್ಲಾಮಿಅ ದ ಪ್ರಾಚಾರ್ಯ ಮೌಲಾನ ಅಬ್ದುಲ್ ಬಾರಿ ನದ್ವಿ ಮಾತನಾಡಿ ಮದರಸಾದ ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ತರಬೇತುಗೊಳಿಸಿದ್ದು ಇಂದಿನ ಕಾರ್ಯಕ್ರಮವು ತೋರಿಸಿಕೊಟ್ಟಿದೆ. ಪ್ರತಿಯೊಬ್ಬ ಶಿಕ್ಷಕನು ವಿದ್ಯಾರ್ಥಿಗಳನ್ನು ಸ್ವಂತ ತನ್ನ ಮಕ್ಕಳೆಂದು ಭಾವಿಸಿ ಅವರಿಗೆ ಶಿಕ್ಷಣ ನೀಡಿದ್ದೇ ಆದರೆ ನಮ್ಮಲ್ಲಿ ಎಲ್ಲ ಮಕ್ಕಳು ಉತ್ತಮ ರೀತಿಯ ವಿದ್ಯೆಯನ್ನು ಪಡೆಯಲು ಸಾಧ್ಯ ಎಂದರು. ಪಾಲಕರು ತಮ್ಮ ಮಕ್ಕಳಿಗೆ ಔಪಚಾರಿಕ ಶಿಕ್ಷಣದ ಜತೆಗೆ ಧಾರ್ಮಿಕ ಶಿಕ್ಷಣವನ್ನು ನೀಡಬೇಕೆಂದು ಕರೆನೀಡಿದರು. ಜಮಾತುಲ್ ಮುಸ್ಲಿಮೀನ್ ಖಾಝಿ ಮೌಲಾನ ಮುಲ್ಲಾ ಇಖ್ಬಾಲ್ ನದ್ವಿ, ಮೌಲಾನ ಶಾರಿಖ್ ನದ್ವಿ, ಮೌಲಾನ ಫಜಲುರಹ್ಮಾನ್ ನದ್ವಿ,  ಮೌಲಾನ ಖಲೀಲುರ‍್ಹ್ಮಾನ್ ಮುನಿರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಕೊನೆಯಲ್ಲಿ ವಿಜೇತ ವಿದ್ಯಾರ್ಥಿಗಳಿ ಬಹುಮಾನವನ್ನು ವಿತರಿಸಲಾಯಿತು.

 


Share: