ಬೆಂಗಳೂರು, ಅ.೩: ಸರಕಾರದ ಬಿಸಿಯೂಟ ಯೋಜನೆಯನ್ನು ಖಾಸಗೀಕರಣಗೊಳಿಸುವುದು ಮಾನವ ಹಕ್ಕುಗಳ ದೃಷ್ಟಿಯಿಂದ ಸರಿಯಾದ ಕ್ರಮ ಅಲ್ಲ ಎಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ನ್ಯಾ. ಎಸ್.ಆರ್. ನಾಯಕ್ ಪ್ರತಿಪಾದಿಸಿದ್ದಾರೆ.
ನಗರದ ಶಿಕ್ಷಕರ ಸದನದಲ್ಲಿ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ ಮತ್ತು ಸಿಐಟಿಯು ಹಮ್ಮಿಕೊಂಡಿದ್ದ ಬಿಸಿಯೂಟ ಖಾಸಗೀಕರಣ ಹಾಗೂ ನೌಕರರ ಸ್ಥಿತಿಗಳು ಮತ್ತು ಅಕ್ಷರ ದಾಸೋಹ ನೌಕರರ ೨ನೆ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಡ ಕುಟುಂಬದ ಮಕ್ಕಳು ಪೌಷ್ಠಿಕ ಆಹಾರದ ಜೊತೆಗೆ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಬಿಸಿಯೂಟ ಯೋಜನೆ ಜಾರಿಗೆ ತರಲಾಗಿದೆ.ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ರಾಜ್ಯದಲ್ಲಿ ಸುಮಾರು ೧.೨೦ ಸಾವಿರ ಬಡ-ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಯೋಜನೆಯನ್ನು ಖಾಸಗೀಕರಣಗೊಳಿಸುವುದರಿಂದ ಸಾವಿರಾರು ಬಡ ಕುಟುಂಬಗಳು ತಮ್ಮ ಜೀವನಾಧಾರವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಒಂದು ರೀತಿಯ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ವ್ಯವಸ್ಥೆಯನ್ನು ಹೊಗಲಾಡಿಸಲು ಎಲ್ಲ ಜಾತಿಯ ಮಕ್ಕಳು ಸಮಾನವಾಗಿ ಕುಳಿತು ಊಟ ಮಾಡುವ ಪದ್ದತಿ ಜಾರಿಗೆ ತರಲಾಯಿತು. ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಮಹಿಳೆಯರನ್ನು ಬಿಸಿಯೂಟ ತಯಾರಿಕೆಗೆ ನೇಮಕ ಮಾಡಿಕೊಳ್ಳಲಾಯಿತು. ಆದರೆ ಇಂದು ಇಸ್ಕಾನ್ ಸಂಸ್ಥೆ ಈರುಳ್ಳಿ-ಬೆಳ್ಳುಳ್ಳಿ ರಹಿತ ಊಟ ಒದಗಿಸುವ ಮೂಲಕ ಜಾತೀಯತೆಯ ವಿಷ ಬೀಜ ಬಿತ್ತುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಹಾರ ಪದ್ದತಿಯ ಆಯ್ಕೆ ಮನುಷ್ಯನ ವೈಯುಕ್ತಿಕ ಸ್ವಾತಂತ್ರ ಅದನ್ನು ಕಿತ್ತುಕೊಳ್ಳುವ ಮತ್ತು ತಮ್ಮ ಆಹಾರ ಪದ್ದತಿಯನ್ನು ಬಲವಂತವಾಗಿ ಹೇರುವ ಅಧಿಕಾರ ಯಾರಿಗೂ ಇಲ್ಲ ಎಂದು ನ್ಯಾಯಮೂರ್ತಿಗಳು ಇಸ್ಕಾನ್ ಸಂಸ್ಥೆಯ ಈರುಳ್ಳಿ-ಬೆಳ್ಳುಳಿ ರಹಿತ ಆಹಾರ ಒದಗಿಸುವ ಕ್ರಮವನ್ನು ಖಂಡಿಸಿದರು.
ಕನಿಷ್ಠ ವೇತನ ನೀತಿ ಜಾರಿಗೆ ತರುವ ಮೂಲಕ ಅಕ್ಷರ ದಾಸೋಹ ನೌಕರರಿಗೆ ನೀಡಲಾಗುತ್ತಿರುವ ೪೦೦ ರೂ. ರಿಂದ ೮೦೦ ರೂ. ವೇತನವನ್ನು ಹೆಚ್ಚಿಸಬೇಕು. ಸರಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ಅಕ್ಷರ ದಾಸೋಹ ನೌಕರರಿಗೆ ಲಭಿಸಬೇಕು. ಸರಕಾರ ನೌಕರರ ಬೇಡಿಕೆ ಶೀಘ್ರ ಈಡೇರಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ, ಅಕ್ಷರ ದಾಸೋಹ ಕಾರ್ಯಕ್ರಮವನ್ನು ಇಸ್ಕಾನ್ ಸಂಸ್ಥೆಗೆ ಒದಗಿಸುವ ಮೂಲಕ ರಾಜ್ಯ ಸರಕಾರ ವ್ಯಾಪಕ ಹಣ ಲೂಟಿಗೆ ಮುಕ್ತ ಪರವಾನಿಗೆ ನೀಡಿದೆ. ಕೇಂದ್ರ ಸರಕಾರದ ನಿರ್ದೇಶನದ ಪ್ರಕಾರ ಧಾರ್ಮಿಕ ಸಂಸ್ಥೆಗಳಿಗೆ ಅಕ್ಷರ ದಾಸೋಹ ಕಾರ್ಯಕ್ರಮ ಅನುಷ್ಠಾನಗೊಳಿಸುವ ಅಧಿಕಾರವಿಲ್ಲ. ಇಸ್ಕಾನ್ ಒಂದು ಧಾರ್ಮಿಕ ಸಂಸ್ಥೆಯಾಗಿರುವುದರಿಂದ ಈ ಯೋಜನೆ ನಡೆಸಲು ಅನರ್ಹ ಎಂದು ಹೇಳಿದರು.
ನಮ್ಮ ದೇಶದ ಮುಗ್ಧ ಮಕ್ಕಳ ಹೆಸರಲ್ಲಿ ವಿದೇಶಗಳಲ್ಲಿ ಹಣ ಸಂಗ್ರಹಿಸುವ ಮೂಲಕ ದೇಶದ ಮಾನ ಹರಾಜು ಮಾಡಲಾಗುತ್ತಿದೆ. ಭಾತರ ಬಿಕ್ಷುಕರ, ದರಿದ್ರರ ದೇಶವೆಂಬಂತೆ ಬಿಂಬಿಸಲಾಗಿದೆ. ಇದು ಇಡೀ ಭಾರತೀಯತಿರಿಗೆ ಮಾಡಿದ ಅವಮಾನ ಎಂದು ಅವರು ಆಕ್ರೋಶ ಭರಿತರಾಗಿ ನುಡಿದರು.
ಇಸ್ಕಾನ್ ಸಂಸ್ಥೆಯ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚಿಸಿವ ಘೋಷಣೆ ಮಾಡಿ ನಾಲ್ಕು ತಿಂಗಳು ಕಳೆದರೂ ಅಧಿಕೃತವಾಗಿ ಸಮಿತಿ ಅಸ್ತಿತ್ವಕ್ಕೆ ಬಂದಿಲ್ಲ. ಸರಕಾರ ಅನಗತ್ಯ ವಿಳಂಬ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಮಿತಿ ಸದಸ್ಯರನ್ನು ಅಂತಿಮಗೊಳಿಸಿದ್ದರೂ ಬಿಜೆಪಿ ತನ್ನ ಸದಸ್ಯರನ್ನು ನೇಮಕ ಮಾಡಿಲ್ಲ. ಸರಕಾರದ ವಿಳಂಬ ನೀತಿಯನ್ನು ಅವರು ಖಂಡಿಸಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಷರ ದಾಸೋಹ ಯೋಜನೆ ಖಾಸUಕರಣಗೊಳಿಸಬಾರದು. ನೌಕರರಿಗೆ ಕನಿಷ್ಠ ಕೂಲಿ ನೀಡಬೇಕು. ಅಕ್ಷರ ದಾಸೋಹ ನೌಕರರನ್ನು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ವಿ. ಶ್ರೀರಾಮ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.