ಬೆಂಗಳೂರು, ಮಾ.೧೩: ಅಂಧರ ಕಲೆಗೆ ಪ್ರೋತ್ಸಾಹ ಸಿಗಬೇಕಾದರೆ ಪ್ರತ್ಯೇಕವಾದ ಅಕಾಡಮಿಯನ್ನು ಸ್ಥಾಪಿಸಬೇಕಾದ ಅವಶ್ಯಕತೆ ಇದೆ ಎಂದು ಹಿರಿಯ ಸಾಹಿತಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಡಾ.ಚಂದ್ರಶೇಖರ್ ಕಂಬಾರ ಪ್ರತಿಪಾದಿಸಿದ್ದಾರೆ.
ನಗರದ ನಯನ ಸಭಾಂಗಣದಲ್ಲಿ ಶನಿವಾರ ಅಂಧರ ಹಬ್ಬ ಹಾಗೂ ಕರ್ನಾಟಕ ಅಂಧರ ವಿಮೋಚನಾ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಧರಿಗೆ ಸರಕಾರದಿಂದ ಕೊಡ ಮಾಡುವ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದೇವೆ. ಕಣ್ಣಿರುವವರು ಅಂಧರಾಗಿದ್ದಾರೆ. ಹೀಗಾಗಿ ಅಂಧ ಸಮುದಾಯಕ್ಕೆ ಸರಕಾರದ ಸೌಲಭ್ಯಗಳನ್ನು ಒದಗಿಸಲು ಪ್ರತ್ಯೇಕವಾದ ವ್ಯವಸ್ಥೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಸಾಹಿತ್ಯ, ನಾಟಕ ಹೀಗೆ ಅನೇಕ ಅಕಾಡಮಿಗಳಿವೆ. ಈ ಅಕಾಡಮಿಗಳು ಅಂಧರಲ್ಲಿನ ಕಲೆಗೆ ಯಾವುದೆ ಪ್ರೋತ್ಸಾಹ ನೀಡುತ್ತಿಲ್ಲ. ಹೀಗಾಗಿ ಅಂಧರಿಗೆ ಪ್ರತ್ಯೇಕವಾದ ಅಕಾಡಮಿಯನ್ನು ಸರಕಾರ ಸ್ಥಾಪಿಸ ಬೇಕು ಎಂದು ಕಂಬಾರ ಆಗ್ರಹಿಸಿದರು.
ಗ್ರಂಥಾಲಯಗಳಲ್ಲಿ ಪ್ರತ್ಯೇಕ ಬ್ರೈಲ್ ಕೇಂದ್ರ: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಎಸ್.ಬಿ. ಹೊಂಡದ ಕೇರಿ ಮಾತನಾಡಿ, ರಾಜ್ಯದ ಜಿಲ್ಲೆ ಹಾಗೂ ನಗರ ಕೇಂದ್ರಗಳಲ್ಲಿನ ಗ್ರಂಥಾಲಯದಲ್ಲಿ ಬ್ರೈಲ್ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಒಂದು ತಿಂಗಳಲ್ಲಿ ಜ್ಞಾನಪೀಠ ಪುರಸ್ಕೃತರ ಕೃತಿಗಳನ್ನು ಬ್ರೈಲ್ ಲಿಪಿಯಲ್ಲಿ ಹೊರತರಲು ಕ್ರಮ ಕೈಗೊಳ್ಳಲಾಗಿದೆ. ಇದನ್ನು ನಗರ ಕೇಂದ್ರ ಗ್ರಂಥಾಲಯ ದಲ್ಲಿ ಇರಿಸಲಾಗುವುದು ಎಂದು ಅವರು ತಿಳಿಸಿದರು.
ಅಂಧರು ತಮ್ಮಲ್ಲಿನ ಶಕ್ತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಅಂಧರು ಕಾಣುವ ಜಗತ್ತು, ನಿಜವಾದ ಜಗತ್ತಾಗಿ ರುತ್ತದೆ. ಕಣ್ಣಿರುವವರು ಕೂಡ ಚಕಿತರಾಗುವಂತೆ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಆದರೆ ಅವರ ಕಲೆಗೆ ಪ್ರೋತ್ಸಾಹಿಸುವವರು ಇಲ್ಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಅಂಧನೋರ್ವ ಅಂತರ್ಜಲ ತಪಾಸಣೆ ಮಾಡುವ ಶಕ್ತಿಯನ್ನು ಹೊಂದಿದ್ದಾನೆ ಎಂದರೆ ಎಲ್ಲರಲ್ಲೂ ಅಚ್ಚರಿ ಮೂಡಿಸುವ ಸಂಗತಿಯಾಗಿದೆ. ಇಂತಹ ಶಕ್ತಿಗಳನ್ನು ಅಂಧರು ಸದುಪಯೋಗಪಡಿಸಿಕೊಳ್ಳಬೇಕು. ಇದಾದರೆ ಅಂಧರು ಬೇಡುವವರಾಗುವುದಿಲ್ಲ, ನೀಡುವವರಾಗು ತ್ತಾರೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಾನು ಕುರುಡ ಎಂಬ ಆತ್ಮ ಮರುಕವನ್ನು ಬಿಟ್ಟು, ತನ್ನ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಂಡು ಮುಖ್ಯ ವಾಹಿನಿಗೆ ಬರಬೇಕು ಎಂದು ಅವರು ಕರೆ ನೀಡಿದರು.
ಉಳ್ಳವರ ಪರವಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟ ರಾಮಯ್ಯ ಮಾತನಾಡಿ, ಅಂಧ ಸಮುದಾಯದವರ ಲ್ಲಿರುವ ಕಲೆಗೆ ಪ್ರೋತ್ಸಾಹ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದ್ಯತೆ ನೀಡುತ್ತಿಲ್ಲ. ಈ ಇಲಾಖೆ ಕೇವಲ ಉಳ್ಳವರ ಪರವಾಗಿದೆ ಎಂದು ಟೀಕಿಸಿದರು.
ಸರಕಾರ ಹಾಗೂ ಸಮಾಜದಿಂದ ನಿರ್ಲಕ್ಷಕ್ಕೊಳ ಗಾಗಿರುವ ಅಂಧ ಸಮುದಾಯವನ್ನು ಮುಖ್ಯವಾಹಿನಿಗೆ ತರಬೇಕಾದ ಅವಶ್ಯಕತೆ ಇದೆ. ಅಲ್ಲದೆ ಈ ಸಮುದಾಯ ತಮ್ಮ ಹಕ್ಕುಗಳನ್ನು ಪಡೆಯಲು ವೇದಿಕೆಯ ಮೂಲಕ ಹೋರಾಟ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ಗ್ರಂಥಾಲಯಗಳಲ್ಲಿ ಪ್ರತ್ಯೇಕವಾದ ಬ್ರೈಲ್ ವಿಭಾಗಗಳನ್ನು ತೆರೆಯಬೇಕು. ಅಂಧರ ಶ್ರೇಯೋಭಿವೃದ್ಧಿಗಾಗಿ ಸರಕಾರದಿಂದ ಬಿಡುಗಡೆ ಮಾಡುವ ಹಣವನ್ನು ಸರಕಾರೇತರ ಸಂಸ್ಥೆಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಇದನ್ನು ತಡೆಯಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.