Sun, 07 Apr 2024 07:10:29Office Staff
ಕಳೆದ ೧೦ ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತನ್ನ ನಿಜ ಬಣ್ಣವನ್ನು ತೋರಿಸಿಕೊಟ್ಟಿದೆ. ದೇಶದ ಪರಿಸ್ಥಿತಿಯನ್ನು ಅಧೋಗತಿಗೆ ತಂದಿದ್ದು, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ನಿರೂದ್ಯೋಗ, ಭ್ರಷ್ಟಾಚಾರ, ಕಂಪನಿಗಳ ಲೂಟಿ, ಜನಸಾಮಾನ್ಯರ ಸುಲಿಗೆ, ಧಾರ್ಮಿಕ ದ್ವೇಷ ಕರ್ನಾಟಕ್ಕೆ ಅನ್ಯಾಯ ಇವೆಲ್ಲವೂ ಘನಂಧಾರಿ ಕಾರ್ಯಗಳೊಂದಿಗೆ ದೇಶವನ್ನು ಅಧೋಗತಿಯ ಕಡೆಗೆ ದಬ್ಬುತ್ತಿದೆ.
View more
Sun, 07 Apr 2024 06:16:26Office Staff
ಕ್ರಿಕೆಟ್ ಪಿಚ್ನಲ್ಲಿ ಜಿಲ್ಲಾ ಚುನಾವಣಾಧಿಕಾರಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಬ್ಯಾಟ್ ಬೀಸುವ ಮೂಲಕ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರು “ಸ್ವೀಪ್” ಶಾಟ್ ಬಾರಿಸುವ ಮೂಲಕ ಚುನಾವಣಾ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ವಿಶಿಷ್ಠ ರೀತಿಯಲ್ಲಿ ಚಾಲನೆ ನೀಡಿದರು.
View more
Sun, 07 Apr 2024 01:39:53Office Staff
ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಮರಾಠ ಜಾತಿ ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದ ಬಿಜೆಪಿ ಕಾರ್ಯಕರ್ತನ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
View more
Sun, 07 Apr 2024 01:36:48Office Staff
ಬೆಂಗಳೂರು: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು ಇಂದು ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಚುನಾವಣಾ ಸ್ಪರ್ಧೆಗೆ ಪಕ್ಷದ ಬಿ ಫಾರಂ ಪಡೆದರು.
View more
Sun, 07 Apr 2024 01:33:38Office Staff
ಕಾರವಾರ: ವಿಧಾನಸಭಾ ಚುನಾವಣಾ ಪೂರ್ವ ಕಾಂಗ್ರೆಸ್ ನೀಡಿದ್ದ ಐದೂ ಗ್ಯಾರಂಟಿಯನ್ನು ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಈಡೇರಿಸಿದೆ. 'ನುಡಿದಂತೆ ನಡೆದ ಕಾಂಗ್ರೆಸ್' ಪಕ್ಷದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೇ ಮತದಾರರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಗೆಲ್ಲಿಸಿಕೊಡಬೇಕಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ ಹೇಳಿದರು.
View more
Sun, 07 Apr 2024 01:22:36Office Staff
ಭಟ್ಕಳ: ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹುರುಳಿಸಾಲಿನಲ್ಲಿರುವ ಆಹಮದ್ ಸಯೀದ್ ಜಾಮಿಯಾ ಮಸೀದಿ ಹಿಂದು-ಮುಸ್ಲಿಮ್ ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಸಾಕ್ಷಿಯಾಗುತ್ತಿದೆ. ಕಳೆದ ೧೦-೧೫ ವರ್ಷಗಳಿಂದ ಈ ಭಾಗದಲ್ಲಿ ವಾಸವಾಗಿರುವ ಹಿಂದುಗಳೊಂದಿಗೆ ಸೇರಿಕೊಂಡು ಮಸೀದಿಯಲ್ಲಿ ಇಫ್ತಾರ್ ಕೂಟಗಳು, ಮಸೀದಿ ದರ್ಶನ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
View more
Sat, 06 Apr 2024 03:47:35Office Staff
ಮೂವತ್ತು ದಿನಗಳ ಕಠಿಣ ಉಪವಾಸ ವೃತಗಳ ಆಚರಣೆಯ ಮಾಸ ರಮಝಾನ್ ಇನ್ನೇನು ಕೊನೆಯ ಹಂತದಲ್ಲಿದೆ. ಈ ಮಾಸದ ಕೊನೆಯ ಹತ್ತು ದಿನಗಳು ದೈವಿಕ ಪ್ರತಿಫಲಕ್ಕೆ ಸಾಟಿಯಿಲ್ಲದೆ ದಿನಗಳಾಗಿವೆ. ಸಾಮಾನ್ಯವಾಗಿ ರಮಝಾನ್ ತಿಂಗಳ ೨೭ನೇ ದಿನದಂದು ಬರುವ ಲೈಲತುಲ್ ಕದ್ರ್ ರಾತ್ರಿಯು ಅತ್ಯಂತ ಶ್ರೇಷ್ಟ ಮತ್ತು ಹೆಚ್ಚೆಚ್ಚು ಪ್ರಾರ್ಥನೆಗಳು ಸ್ವೀಕರಿಸಲ್ಪಡುವ ಮತ್ತು ಅದಕ್ಕೆ ಸಾವಿರಾರು ಪಟ್ಟು ಹೆಚ್ಚು ಪ್ರತಿಫಲ ದೊರೆಯುವ ರಾತ್ರಿಯಾಗಿದೆ.
View more
Sat, 06 Apr 2024 00:36:09Office Staff
ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಸಾಯಿಪ್ರಸಾದ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ ಎಂದು ತಿಳಿದುಬಂದಿದೆ.
View more