Mon, 08 Jul 2024 02:19:20Office Staff
ಕಾಪು : ಮಕ್ಕಳಿಗೆ ತಮ್ಮ ಮನೆಯಲ್ಲಿ ತಂದೆ, ತಾಯಿ, ಸಹೋದರ, ಸಹೋದರಿಯರಿಂದ ಪ್ರೀತಿ ಸಿಗಬೇಕು. ಅದು ಸಿಗದಿದ್ದಲ್ಲಿ ಅವರಲ್ಲಿ ಕ್ರೂರತನ ಮೂಡಿ , ಮುಂದೆ ಅವರು ಸಮಾಜದಲ್ಲಿ ದುಷ್ಟರಾಗಿ ಬೆಳೆಯಲು ಕಾರಣವಾಗುತ್ತದೆ, ತಮ್ಮ ಮಕ್ಕಳು ಒಳ್ಳೆಯವರಾಗಬೇಕಿದ್ದಲ್ಲಿ , ಹೆತ್ತವರು ಕೂಡಾ ಒಳ್ಳೆಯವರಾಗಬೇಕಾಗುತ್ತದೆ. ಮಕ್ಕಳ ಮುಂದೆ ತಂದೆ, ತಾಯಿ, ಸಹೋದರ, ಸಹೋದರಿಯರು ಜಗಳವಾಡುತಿದ್ದರೆ ಮಕ್ಕಳ ಮೇಲೆ ಅದರ ದುಷ್ಪರಿಣಾಮಬೀರುತ್ತದೆ ಎಂದು ಜಮಾಆತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್ ಹೇಳಿ
View more
Mon, 08 Jul 2024 02:15:54Office Staff
ಭಟ್ಕಳ: ಭಾನುವಾರ ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಭಟ್ಕಳ ತಾಲೂಕಿನಾದ್ಯಂತ ಹಾನಿಯನ್ನುಂಟುಮಾಡಿದೆ, ಪ್ರಮುಖ ರಾಷ್ಟ್ರೀಯ ಹೆದ್ದಾರಿ 66 ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ತೀವ್ರ ಜಲಾವೃತವಾಗಿದೆ. ವಿಶೇಷವಾಗಿ ರಂಗಿನಕಟ್ಟೆಯಂತಹ ಪ್ರದೇಶಗಳಲ್ಲಿ ಮಳೆನೀರು ವ್ಯಾಪಕವಾಗಿ ಸಂಗ್ರಹಗೊಂಡಿದ್ದು, ಗಮನಾರ್ಹ ಅಡಚಣೆಯನ್ನು ಉಂಟುಮಾಡಿದೆ. ಇದು ವಾಹನ ಸಂಚಾರಕ್ಕೆ ಮತ್ತು ಪ್ರಯಾಣಿಕರಿಗೆ ಗಂಭೀರ ಸವಾಲಾಗಿದೆ.
View more
Sun, 07 Jul 2024 02:14:48Office Staff
ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಶನಿವಾರವೂ ಮಳೆ ಮುಂದುವರೆದಿದ್ದು ಶುಕ್ರವಾರ ಬಿದ್ದ ಭಾರೀ ಮಳೆಗೆ ಭಟ್ಕಳದ ಖಲೀಫ ಬೀದಿಯಲ್ಲಿರುವ ಮನೆ ಸಂಪೂರ್ಣ ಕುಸಿದಿದ್ದು, ಪಕ್ಕದ ಮನೆಯ ಮೇಲ್ಛಾವಣಿ ಹಾಗೂ ಗೋಡೆಗೆ ಹಾನಿಯಾಗಿದೆ. ಅಲ್ಲದೆ ಕೊರಗರಕೇರಿ ಕೋಟ ಜಟಗೇಶ್ವರ ದೇವಸ್ಥಾನದ ಗೋಡೆ ಕುಸಿದು ಬಿದ್ದಿದ್ದು ಪಕ್ಕದಲ್ಲಿ ಸರ್ಕರಿ ಪ್ರಾಥಮಿಕ ಶಾಲೆ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ.
View more
Sun, 07 Jul 2024 01:56:31Office Staff
ಭಟ್ಕಳ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಭಟ್ಕಳ ತಾಲೂಕು ಘಟಕದ ಪದಾಧಿಕಾರಿಗಳು ಹಳೆಯ ಓಪಿಎಸ್ (ನಿಶ್ವಿತ ಪಿಂಚಣಿ) ಜಾರಿಗೊಳಿಸಬೇಕೆಂದು ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
View more
Fri, 05 Jul 2024 04:48:42Office Staff
ಭಟ್ಕಳ : ರಾಷ್ಟ್ರೀಯ ಹೆದ್ದಾರಿ 66ರ ರಂಗಿನಕಟ್ಟೆ ಬಳಿ ಮತ್ತೆ ಮಳೆ ನೀರು ತುಂಬಿ ನಾಗರಿಕರಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
View more
Fri, 05 Jul 2024 04:46:57Office Staff
ಉತ್ತರ ಕನ್ನಡ ಶಾಂತಿ ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಿದ್ದು, ಜಿಲ್ಲೆಯಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಜಿಲ್ಲೆಯಲ್ಲಿ ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಮಾಡುವುದಾಗಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಹೇಳಿದರು.
View more
Fri, 05 Jul 2024 04:43:14Office Staff
ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಜಾಸ್ತಿಯಾಗಿದ್ದರಿಂದ ಮುನ್ನೆಚ್ಚರಿಕೆಯಾಗಿ ಭಟ್ಕಳ, ಕುಮಟಾ ಮತ್ತು ಹೊನ್ನಾವರ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಶುಕ್ರವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
View more
Thu, 04 Jul 2024 19:03:19Office Staff
ಕುಮಟಾ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಕುಮಟಾ - ಶಿರಸಿ ಹೆದ್ದಾರಿಯಲ್ಲಿ ನೀರು ನುಗ್ಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
View more