Mon, 22 Jul 2024 23:05:19Office Staff
ಕಾರವಾರ: ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದ ದಿನದಿಂದಲೂ ಜಿಲ್ಲಾಡಳಿತ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳಿAದ ರಕ್ಷಣಾ ಕಾರ್ಯಚರಣೆಯನ್ನು ಸತತವಾಗಿ ನಡೆಸಲಾಗುತ್ತಿದ್ದು, ಇಂದು ಸೇನೆ ವತಿಯಂದಲೂ ರಕ್ಷಣಾ ಕಾರ್ಯಾಚರಣೆ ನಡೆಯಲಿದೆ. ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
View more
Sun, 21 Jul 2024 23:01:51Office Staff
ಅಂಕೋಲ:ಭೀಕರ ಮಳೆಯಿಂದಾಗಿ ಅಂಕೋಲ ತಾಲೂಕಿನ ಶಿರೂರು ಬಳಿ ನಡೆದ ಗುಡ್ಡ ಕುಸಿತ ಪ್ರದೇಶಕ್ಕೆ ರವಿವಾರ ಭೇಟಿ ನೀಡಿದ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಲಭ್ಯ ಇರುವ ಎಲ್ಲ ರೀತಿಯ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕಾರ್ಯಚರಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
View more
Sun, 21 Jul 2024 00:52:08Office Staff
ಭಟ್ಕಳ: ಭಟ್ಕಳದ ರಾಷ್ಟ್ರಿಯ ಹೆದ್ದಾರಿಯಲ್ಲಿ ಕದ್ದು ಮುಚ್ಚಿ ಕಸ ಎಸೆದು ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು ಆತನಿಂದಲೇ ತ್ಯಾಜ್ಯವನ್ನು ವಿಲೇವಾರಿ ಮಾಡಿಸಿದ ಘಟನೆ ಶನಿವಾರ ಜಾಲಿ ಪ.ಪಂ ವ್ಯಾಪ್ತಿಯ ರಾ.ಹೆ.66 ಹೊಟೇಲ್ ಯಮ್ಮೀಸ್ ಬಳಿ ನಡೆದಿದ್ದು ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.
View more
Sat, 20 Jul 2024 23:13:54Office Staff
ಬೆಳಗಾವಿ: ನಮ್ಮ ಧರ್ಮ ನಮ್ಮೊಂದಿಗೆ ನಮ್ಮ ಪ್ರೀತಿ ಎಲ್ಲರೊಂದಿಗೆ ಇರಲಿ. ನಾವು ನಮ್ಮ ಧರ್ಮಗಳನ್ನು ಪಾಲಿಸೋಣ, ಆದರೆ ಎಲ್ಲರೊಂದಿಗೆ ಪ್ರೀತಿಯನ್ನು ಹಂಚಿಕೊಳ್ಳಬೇಕಾಗಿದೆ ಎಂದು ಶಾಂತಿ ಪ್ರಕಾಶನ ಸಂಸ್ಥೆಯ ಮುಹಮ್ಮದ್ ಕುಂಞಿ ಹೇಳಿದರು.
View more
Sat, 20 Jul 2024 23:09:55Office Staff
ಭಟ್ಕಳ: ತಾಲೂಕಿನ ಮೂಡಭಟ್ಕಳದ ಹೆಬ್ಳೆರ ಮನೆಯ ನಿವಾಸಿ ನಾರಾಯಣ ರಾಮ ನಾಯ್ಕ, ಮಂಡಿಸಿದ " ದ ಅಪ್ರೋಚಸ್ ಫಾರ್ ಕ್ಲಾಸಿಫಿಕೇಶನ್ ಆಫ್ ಮೈಕ್ರೋಅರೇ ಡೇಟಾ" (The Approach for Classification of Microarray Data)ಎಂಬ ಪ್ರಬಂಧ ಕ್ಕೆ, ಕಂಪ್ಯೂಟರ್ ಅಂಡ್ ಇನ್ಫಾರ್ಮಶನ್ ಸೈನ್ಸಸ್ ವಿಭಾಗದಲ್ಲಿ ದಿನಾಂಕ: ೧೮-೦೭-೨೦೨೪ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ೨೪ನೇ ವಾರ್ಷಿಕ ಘಟಿಕೋತ್ಸವದಲ್ಲಿ (ಭಾಗ-೧) ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
View more
Sat, 20 Jul 2024 22:11:34Office Staff
ಭಟ್ಕಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆ ಕ್ಷೇತ್ರದ ಶಾಖಾ ಮಠ ಭಟ್ಕಳದ ಕರಿಕಲ್ ನಲ್ಲಿ ಜು. ೨೧ರಿಂದ ಆ. ೩೦ರ ವರೆಗೆ ನಡೆಯಲಿದೆ. ಎಲ್ಲಾ ಸಮಾಜ ಮುಖಂಡರು ಹಾಗೂ ಬಂಧುಗಳು ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಬ್ರಹ್ಮಾನಂದ ಶ್ರೀಗಳು ಕರೆ ನೀಡಿದರು.
View more
Sat, 20 Jul 2024 21:34:01Office Staff
ಕಾರವಾರ: ಅಂಕೋಲಾದ ಶಿರೂರು ಗುಡ್ಡ ಕುಸಿತವಾದ ಸ್ಥಳದಲ್ಲಿ ಸುರತ್ಕಲ್ ನಿಂದ ರಾಡಾರ್ ತರಿಸಿ ವಾಹನ ಹಾಗೂ ಮೃತದೇಹಗಳ ಪತ್ತೆ ಮಾಡಲಾಗುತ್ತಿದೆ ತೆರವು ಹಾಗೂ ಶೋಧ ಕಾರ್ಯ ವೇಗವಾಗಿ ನಡೆಯುತ್ತಿದೆ. ಇನ್ನು ಎರಡು ದಿನ ಬೇಕಾಗಬಹುದು ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.
View more
Fri, 19 Jul 2024 07:27:40Office Staff
ಭಟ್ಕಳ ಕರಾವಳಿ ಭಾಗದಲ್ಲಿ ಮಳೆಯು ಅಬ್ಬರಿಸುತ್ತಿದೆ. ಮಳೆಯಿಂದಾಗಿ ಕಾಡಿನಿಂದ ಮನೆಗಳತ್ತ ಹಾವುಗಳು ಬರುತ್ತಿದ್ದು ತಾಲೂಕಿನ ಮುಟ್ಟಳಿ ಪಂಚಾಯತ್ ವ್ಯಾಪ್ತಿಯ ಕೃಷ್ಣಮೂರ್ತಿ ಶೆಟ್ಟಿ ಎನ್ನುವವರ ಮನೆಯಂಗಳದಲ್ಲಿ ಸುಮಾರು 7 ಅಡಿ ಉದ್ದದ 10ರಿಂದ 20 ಕೆಜಿಗೂ ಅಧಿಕ ತೂಕವಿರುವ ಹೆಬ್ಬಾವೊಂದು ಪತ್ತೆಯಾಗಿದ್ದು,ಉರಗ ಪ್ರೇಮಿಗಳು ಸುರಕ್ಷಿತವಾಗಿ ಹೆಬ್ಬಾವು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟ ಘಟನೆ ನಡೆದಿದೆ.
View more
Fri, 19 Jul 2024 03:17:08Office Staff
ಕಾರವಾರದ ನೌಕಾ ನೆಲೆ ಸಮೀಪದ ಪ್ರದೇಶಗಳಲ್ಲಿನ ಸಾರ್ವಜನಿಕರು ಪ್ರತೀ ಮಳೆಗಾಲದಲ್ಲಿ ಎದುರಿಸುವ ಕೃತಕ ನೆರೆಯ ಸಮಸ್ಯೆ ಶೀಘ್ರದಲ್ಲಿ ಶಾಶ್ವತ ಪರಿಹಾರ ದೊರೆಯಲಿದ್ದು, ಈ ಕುರಿತಂತೆ ಎಲ್ಲಾ ಕಾರ್ಯಗಳು ಭರದಿಂದ ನಡೆಯುತ್ತಿವೆ ಎಂದು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಹೇಳಿದರು.
View more