ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಆರು ವರ್ಷಗಳ ಬಳಿಕ ಭರ್ತಿಯಾದ ಲಿಂಗನಮಕ್ಕಿ ಜಲಾಶಯ: 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಆರು ವರ್ಷಗಳ ಬಳಿಕ ಭರ್ತಿಯಾದ ಲಿಂಗನಮಕ್ಕಿ ಜಲಾಶಯ: 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

Fri, 02 Aug 2024 18:30:29  Office Staff   S O News

ಹೊನ್ನಾವರ: ಲಿಂಗನಮಕ್ಕಿ ಜಲಾಶಯದಲ್ಲಿ 1814 ಅಡಿ ನೀರು ತಲುಪಿದ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ನೀರನ್ನ ಹೊರಬಿಡುವಂತೆ ಕೆಪಿಸಿ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷಿಪ್ರಿಯಾ ತಿಳಿಸಿದರು.

ತಾಲೂಕಿನ ಗೇರುಸೊಪ್ಪ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ನೆರೆ ತಡೆಯಲು ಎಲ್ಲಾ ಮುಂಜಾಗೃತೆಯನ್ನ ಕೈಗೊಳ್ಳಲಾಗಿದೆ ಎಂದರು.

ಲಿಂಗನಮಕ್ಕಿಯಿಂದ ಆರು ಸಾವಿರ ಕ್ಯೂಸೆಕ್ ನೀರನ್ನ ಹೊರ ಬಿಟ್ಟಿದ್ದು, ಗೇರುಸೊಪ್ಪ ಜಲಾನಯನ ಪ್ರದೇಶದಲ್ಲಿ ಆರರಿಂದ ಎಂಟು ಸಾವಿರ ಕ್ಯೂಸೆಕ್ ನೀರು ಬರುತ್ತಿದ್ದು, ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರನ್ನ ಹೊರಬಿಡಲಾಗುತ್ತಿದೆ ಎಂದರು. ಸದ್ಯ 50 ಸಾವಿರ ಕ್ಯೂಸೆಕ್ ನೀರನ್ನ ಹೊರಬಿಟ್ಟರೇ 163 ಫ್ಯಾಮಿಲಿಗೆ ಸಮಸ್ಯೆಯಾಗಲಿದೆ. ಎಲ್ಲರನ್ನು ಕಾಳಜಿ ಕೇಂದ್ರ- ಕ್ಕೆ ಶಿಫ್ಟ್ ಮಾಡಲಿದ್ದೇವೆ.

ಜಲಾಶಯದ ನೀರಿನಿಂದ ಎಲ್ಲೂ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಮುಂಜಾಗೃತೆ ವಹಿಸಿದೆ ಎಂದರು. ಗೇರುಸೊಪ್ಪ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರನ್ನ ಬಿಟ್ಟರೇ 986 ಮನೆಗೆ ಸಮಸ್ಯೆ ಆಗಲಿದೆ. 1 ಲಕ್ಷ ಕ್ಯೂಸೆಕ್ ನೀರನ್ನ ಹೊರ ಬಿಟ್ಟರೇ 3500 ಮನೆಗಳಿಗೆ ಸಮಸ್ಯೆ ಆಗಲಿದೆ. ಸದ್ಯ 55 ಮೀಟರ್ ಜಲಾಶಯದ ಎತ್ತರವಿದ್ದು 46 ಮೀಟರ್ ನೀರನ್ನ ಗರಿಷ್ಟ ಮಿತಿಯಾಗಿ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.


Share: